Don't Miss!
- News
Vishnuvardhan Memorial: ಇಂದು ವಿಷ್ಣುವರ್ಧನ್ ಸ್ಮಾರಕ ಲೋಕಾರ್ಪಣೆ, ವಿಷ್ಣು ಅಭಿಮಾನಿಗಳ ಅಸಮಾಧಾನವೇನು?
- Automobiles
'ಮಹೀಂದ್ರಾ ಸ್ಕಾರ್ಪಿಯೊ ಎನ್' ಈ ರೂಪಾಂತರಗಳಿಗೆ ಬರೋಬ್ಬರಿ 2 ವರ್ಷ ಕಾಯಬೇಕು..
- Sports
ಮುಂದಿನ ತಿಂಗಳು ಬಿಸಿಸಿಐ ಹೊಸ ಒಪ್ಪಂದ: ಸೂರ್ಯ, ಪಾಂಡ್ಯ, ಗಿಲ್ಗೆ ಬಂಪರ್ ಸಾಧ್ಯತೆ
- Lifestyle
Horoscope Today 29 Jan 2023: ಭಾನುವಾರ: ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Finance
ಅಭ್ಯರ್ಥಿಯ ಸಂದರ್ಶನ ಮಾಡುತ್ತಿದ್ದಾಗಲೇ ಗೂಗಲ್ ಎಚ್ಆರ್ ವಜಾ!
- Technology
ಒಪ್ಪೋ ಕಂಪೆನಿಯ ಈ ಸ್ಮಾರ್ಟ್ಫೋನ್ ಮೇಲೆ ಭಾರಿ ನಿರೀಕ್ಷೆ? ಲಾಂಚ್ ಯಾವಾಗ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ವೀರಪ್ಪನ್ ಸೆರೆಯಲ್ಲಿದ್ದ ಅಣ್ಣಾವ್ರನ್ನು ಕಾಪಾಡಿದ ಶಕ್ತಿ ಯಾವುದು? ಚಂದ್ರಚೂಡ್ ಹೇಳಿದ ಕತೆ
ಸಿನಿಮಾ ನಿರ್ದೇಶಕ, ಪತ್ರಕರ್ತ, ಬಿಗ್‌ಬಾಸ್ ಮಾಜಿ ಸ್ಪರ್ಧಿ ಚಕ್ರವರ್ತಿ ಚಂದ್ರಚೂಡ್ ಇಂದು ಫಿಲ್ಮೀಬೀಟ್ ಫೇಸ್‌ಬುಕ್ ಮೂಲಕ ಲೈವ್ ಬಂದು ವೀಕ್ಷಕರ ಪ್ರಶ್ನೆಗಳಿಗೆ ಉತ್ತರಿಸಿದರು. ಈ ಸಮಯದಲ್ಲಿ ಡಾ.ರಾಜ್‌ಕುಮಾರ್ ಕುರಿತು ಆಸಕ್ತಿಕರ ಕತೆಯೊಂದನ್ನು ಚಕ್ರವರ್ತಿ ಚಂದ್ರಚೂಡ್ ಹೇಳಿದರು.
Recommended Video
108 ದಿನಗಳ ಬಳಿಕ ವೀರಪ್ಪನ್ ಸೆರೆಯಿಂದ ಬಿಡುಗಡೆ ಆಗಿ ವಾಪಸ್ ಬಂದ ಬಳಿಕ ಡಾ.ರಾಜ್‌ಕುಮಾರ್ ಅವರು ಹೆಚ್ಚಿಗೆ ಯಾರ ಕೈಗೂ ಸಿಗುತ್ತಿರಲಿಲ್ಲ. ಬಹುತೇಕ ಮನೆಯಲ್ಲಿಯೇ ಇರುತ್ತಿದ್ದರು. ಆಗ ಕೆಲವು ಪತ್ರಕರ್ತರ ಜೊತೆಗೆ ಚಕ್ರವರ್ತಿ ಚಂದ್ರಚೂಡ ಅವರು ರಾಜ್‌ಕುಮಾರ್ ಅವರನ್ನು ಭೇಟಿಯಾಗಲು ತೆರಳಿದ್ದರು.
ರಾಜ್‌ಕುಮಾರ್ ಅವರು ಬಹಳ ಪ್ರೀತಿಯಿಂದ ಪತ್ರಕರ್ತರ ಬಳಗವನ್ನು ಬರಮಾಡಿಕೊಂಡು ಮಾತಿಗೆ ಕುಳಿತರು. ಮಾತುಕತೆ ಮಧ್ಯದಲ್ಲಿ 'ನಿಮ್ಮನ್ನು ಇಷ್ಟು ದಿನ ಆ ದಟ್ಟ ಕಾಡಿನಲ್ಲಿ ಕಾಪಾಡಿದ ಶಕ್ತಿ ಯಾವುದು? ಕರ್ನಾಟಕದ ಜನರ ಅಭಿಮಾನವೊ? ಪಾರ್ವತಮ್ಮನವರ ಪೂಜೆಯೋ, ನಿಮ್ಮ ಮಕ್ಕಳ ಪ್ರೀತಿಯೋ?' ಎಂದು ಕೇಳುತ್ತಾರೆ.

ಚಪ್ಪಲಿಯನ್ನು ಪತ್ರಕರ್ತರ ಮುಂದಿಟ್ಟರಂತೆ ರಾಜ್‌ಕುಮಾರ್
ಪರ್ತಕರ್ತರ ಪ್ರಶ್ನೆ ಕೇಳಿಸಿಕೊಂಡು ಎದ್ದು ಒಳಗೆ ಹೋದ ಡಾ.ರಾಜ್‌ಕುಮಾರ್, ಕವರ್ ನಲ್ಲಿ ಯಾವುದೋ ವಸ್ತುವೊಂದನ್ನು ಸುತ್ತಿಕೊಂಡು ತಂದು ಅದನ್ನು ಬಿಚ್ಚಿ ಪತ್ರಕರ್ತರ ಮುಂದಿಟ್ಟರಂತೆ. ಆ ಕವರ್‌ನೊಳಗೆ ಹಳೆಯ ಚಪ್ಪಲಿ ಇತ್ತಂತೆ.

ಈ ಚಪ್ಪಲಿಯೂ ನನ್ನನ್ನು ಕಾಪಾಡಿತು: ರಾಜ್‌ಕುಮಾರ್
'ನೀವು ಹೇಳಿದ ಎಲ್ಲ ಅಂಶಗಳ ಜೊತೆಗೆ ಈ ಚಪ್ಪಲಿಯೂ ನನ್ನನ್ನು ಕಾಡಿನಲ್ಲಿ ಕಾಪಾಡಿತು. ಇದು ವೀರಪ್ಪನ್ ಕೊಡಿಸಿದ್ದ ಚಪ್ಪಲಿ. ನಾನು ಕಾಡಿನಲ್ಲಿದ್ದ ಇದ್ದ ಅಷ್ಟೂ ದಿನ ಇದು ನನ್ನನ್ನು ಕಾಪಾಡಿತು. ಇದಿಲ್ಲದೆ ಹೋಗಿದ್ದರೆ ನನಗೆ ಬಹಳ ಕಷ್ಟವಾಗುತ್ತಿತ್ತು. ಹಾಗಾಗಿ ಇದನ್ನು ಎತ್ತಿಟ್ಟುಕೊಂಡು ಬಂದಿದ್ದೇನೆ' ಎಂದು ಹೇಳಿ ಚಪ್ಪಲಿಯನ್ನು ಕಣ್ಣಿಗೆ ಒತ್ತಿಕೊಂಡು ನಮಿಸಿದರಂತೆ ರಾಜ್‌ಕುಮಾರ್. ಹೀಗೆಂದು ಚಂದ್ರಚೂಡ್ ಹೇಳಿದರು.

'ಕೃತಜ್ಞವಾಗಿರುವುದು ಎಷ್ಟು ಮುಖ್ಯ ಎಂಬುದು ಅರ್ಥವಾಯಿತು'
ರಾಜ್‌ಕುಮಾರ್ ಅಂಥಹಾ ಮೇರು ವ್ಯಕ್ತಿ ತಾನು ತೊಟ್ಟ ಚಪ್ಪಲಿಗೂ ಕೈಮುಗಿದು ಧನ್ಯವಾದ ಹೇಳಿದ ದೃಶ್ಯ ನನ್ನನ್ನು ಚಕಿತಗೊಳಿಸಿತು. ಕೃತಜ್ಞತೆಗಳು ನಮ್ಮ ಜೀವದಲ್ಲಿ ಎಷ್ಟು ಮುಖ್ಯ, ನಮ್ಮನ್ನು ಹರಸಿದಂತವರಿಗೆ, ಪ್ರೀತಿದವರಿಗೆ, ಕಷ್ಟಕಾಲದಲ್ಲಿ ಜೊತೆಗಿದ್ದವರ ಬಗ್ಗೆ ಎಷ್ಟು ನಾವು ಕೃತಜ್ಞರಾಗಿರಬೇಕು ಎಂಬುದಕ್ಕೆ ಅದು ಉದಾಹರಣೆ' ಎಂದರು ಚಂದ್ರಚೂಡ್.

'ರಾಜ್‌ಕುಮಾರ್, ವಿಷ್ಣುವರ್ಧನ್ ನಮಗೆ ಆದರ್ಶವಾಗಬೇಕು'
ಡಾ.ರಾಜ್‌ಕುಮಾರ್ ಅವರಂಥಹವರು, ವಿಷ್ಣುವರ್ಧನ್ ಅವರಂಥಹವರು ನಮಗೆ ಆದರ್ಶವಾಗಬೇಕು. ಅವರ ನಡೆ-ನುಡಿ, ವಿನಯ, ಸರಳತೆ ನಮಗೆ ಆದರ್ಶವಾಗಿರಬೇಕು. ಹಾಗಾಗಿಯೇ ನಾನು ಅಂಥಹವರ ನೀತಿಗಳನ್ನು ಪಾಲಿಸುತ್ತೇನೆ. ನೇರವಾಗಿರುತ್ತೇನೆ. ನಮ್ಮ ಆತ್ಮಸಾಕ್ಷಿ ಒಪ್ಪುವಂತೆ ನಾವು ನಡೆದುಕೊಳ್ಳಬೇಕು' ಎಂದರು ಚಂದ್ರಚೂಡ್.