For Quick Alerts
  ALLOW NOTIFICATIONS  
  For Daily Alerts

  ಅಪ್ಪು ಅಭಿಮಾನಿಗಳ ಆಕ್ರೋಶಕ್ಕೆ ಮಣಿದ ಚಕ್ರವರ್ತಿ ಸೂಲಿಬೆಲೆ; ಕೊನೆಗೂ ಕ್ಷಮೆ ಯಾಚನೆ

  |

  ರಾಜ್ಯ ಸರ್ಕಾರ ಹಾಗೂ ಸಿಎಂ ಬಸವರಾಜ ಬೊಮ್ಮಾಯಿಯವರನ್ನು ಟೀಕಿಸುವ ಭರದಲ್ಲಿ ನಟ ಪುನೀತ್‌ ರಾಜ್‌ಕುಮಾರ್‌ ನಿಧನವನ್ನು ಅಣಕಿಸುವಂತೆ ಚಿಂತಕ ಚಕ್ರವರ್ತಿ ಸೂಲಿಬೆಲೆ ಟ್ವೀಟ್ ಮಾಡಿದ್ದರು. ಅಪ್ಪು ಅಭಿಮಾನಿಗಳ ಆಕ್ರೋಶಕ್ಕೆ ಮಣಿದು ಇದೀಗ ಕ್ಷಮೆ ಕೇಳಿದ್ದಾರೆ.

  ಚಕ್ರವರ್ತಿ ಸೂಲಿಬೆಲೆ ಹೇಳಿಕೆಗಳು ಈ ಹಿಂದೆಯೂ ಸಾಕಷ್ಟು ಬಾರಿ ವಿವಾದ ಸೃಷ್ಟಿಸಿದೆ. ಆದರೆ ಬಾರಿ ದಿವಂಗತ ನಟ ಪುನೀತ್‌ ರಾಜ್‌ಕುಮಾರ್ ಅವರ ಬಗ್ಗೆ ಮಾತನಾಡಿರುವುದು ಅಭಿಮಾನಿಗಳಿಗೆ ಬೇಸರ ತಂದಿದೆ. 'ತಮ್ಮದೇ ಪಕ್ಷದ ಶಾಸಕರ ಕಡತಗಳಿಗೆ ಸಹಿ ಮಾಡಲು ಸಿಎಂಗೆ ಸಮಯದ ಅಭಾವಿದೆ ಎಂದು ಪಕ್ಷದವರೇ ಟೀಕಿಸಿದ್ದಾರೆ. ಆದರೆ, ಸಿಎಂಗೆ ಸಿನಿಮಾಗೆ ಸಂಬಂಧಿಸಿದ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಸಮಯವಿದೆ. ಪ್ರೀಮಿಯರ್ ಶೋಗೆ ಹೋಗಿ, ಸಿನಿಮಾ ನೋಡಿ ಕಣ್ಣೀರು ಹಾಕಲು ಸಮಯವಿದೆ. ನಟರೊಬ್ಬರು ನಿಧನರಾದಾಗ 3 ದಿನಗಳ ಸಮಯವನ್ನು ಅದಕ್ಕಾಗಿ ಕೊಟ್ಟಿದ್ದಾರೆ. ಈಗ ಈ ಜನಾಕ್ರೋಶ ಇಲ್ಲದೇ ಹೋಗಿದ್ದಿದ್ದರೆ 'ವಿಕ್ರಾಂತ್ ರೋಣ' ಸಿನಿಮಾವನ್ನು ನೋಡಿರುತ್ತಿದ್ದರು' ಎಂದು ಬರೆದಿದ್ದರು.

  Recommended Video

  Vikrant Rona ಸಿನಿಮಾ ಇಂದ ಜಾಕ್ ಮಂಜುಗೆ ಲಾಸ್ ಆಗಿದ್ಯಾ. Jack Manju | Kiccha Sudeep | Filmibeat Kannada

  ಚಕ್ರವರ್ತಿ ಸೂಲಿಬೆಲೆಯವರ ಟ್ವೀಟ್‌ ಕೆಲವೇ ಕ್ಷಣಗಳಲ್ಲಿ ವೈರಲ್ ಆಗಿ ಪುನೀತ್ ರಾಜ್‌ಕುಮಾರ್ ಅಭಿಮಾನಿಗಳನ್ನು ಕೆರಳಿಸಿತ್ತು. ನಿಮ್ಮ ರಾಜಕೀಯ ನೀವು ಮಾಡಿಕೊಳ್ಳಿ, ನಮ್ಮ ನೆಚ್ಚಿನ ನಟನ ಹೆಸರನ್ನು ಯಾಕೆ ಎಳೆದು ತರುತ್ತೀರಾ ಎಂದು ಗರಂ ಆಗಿದ್ದರು. ಸೂಲಿಬೆಲೆ ಅವರಿಗೆ ಫೋನ್ ಮಾಡಿ ಕ್ಲಾಸ್ ತಗೊಂಡಿದ್ದರು. ಕ್ಷಮೆ ಕೇಳುವಂತೆ ಆಗ್ರಹಿಸಿದ್ದರು. ಇದೀಗ ತಮ್ಮ ತಪ್ಪಿನ ಅರಿವಾಗಿ ಚಕ್ರವರ್ತಿ ಸೂಲೆಬೆಲೆ ಟ್ವೀಟ್ ಮಾಡಿ ಕ್ಷಮೆ ಕೇಳಿದ್ದು, ನಾನು ಪುನೀತ್ ರಾಜ್‌ಕುಮಾರ್‌ ಅಭಿಮಾನಿ ಎಂದು ವಿಡಿಯೋ ಸಮೇತ ಹೇಳಿದ್ದಾರೆ.

  English summary
  Chakravarthy Sulibele Says Sorry To Puneeth Rajkumar Fans For His Tweet Regarding Actor Pneeth Rajkumar. Know More.
  Monday, August 1, 2022, 17:14
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X