For Quick Alerts
  ALLOW NOTIFICATIONS  
  For Daily Alerts

  'ಕ್ರಾಂತಿ' ಟ್ರೈಲರ್ ರಿಲೀಸ್ ಈವೆಂಟ್ ಎಲ್ಲಿ ಯಾವಾಗ? ನಟ ದರ್ಶನ್ ಹೇಳಿದ್ದಿಷ್ಟು

  |

  ಮೈಸೂರಿನಲ್ಲಿ 'ಕ್ರಾಂತಿ' ಥೀಮ್ ಸಾಂಗ್, ಹೊಸಪೇಟೆಯಲ್ಲಿ ಮೆಲೋಡಿ ಸಾಂಗ್, ಹುಬ್ಬಳ್ಳಿಯಲ್ಲಿ ಪಾರ್ಟಿ ಸಾಂಗ್ ರಿಲೀಸ್ ಆಗಿದೆ. ಹಾಗಾದರೆ 'ಕ್ರಾಂತಿ' ಟ್ರೈಲರ್ ಎಲ್ಲಿ ಯಾವಾಗ ರಿಲೀಸ್ ಆಗುತ್ತೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಇದೆ. ಈ ಬಗ್ಗೆ ಇದೀಗ ನಟ ದರ್ಶನ್ ಸ್ಪಷ್ಟನೆ ಕೊಟ್ಟಿದ್ದಾರೆ.

  'ಕ್ರಾಂತಿ' ಚಿತ್ರದ 3 ಸಾಂಗ್ಸ್ ರಿಲೀಸ್ ಆಗಿ ಗಮನ ಸೆಳೆದಿದೆ. ಒನ್ಸ್ ಅಗೇನ್ ದರ್ಶನ್ ಹಾಗೂ ವಿ. ಹರಿಕೃಷ್ಣ ಕಾಂಬಿನೇಷನ್‌ ಸೂಪರ್ ಹಿಟ್ ಆಗಿದೆ. ಯಜಮಾನ ಸಿನಿಮಾ ತಂಡವೇ ಈ ಚಿತ್ರಕ್ಕೂ ಕೆಲಸ ಮಾಡ್ತಿದೆ. ಎಲ್ಲಾ ಕಮರ್ಷಿಯಲ್ ಅಂಶಗಳ ಜೊತೆಗೆ ಒಂದೊಳ್ಳೆ ಸಂದೇಶ ಇರುವ ಕಥೆಯನ್ನು ಈ ಚಿತ್ರದಲ್ಲಿ ಹೇಳಲಾಗುತ್ತಿದೆ. ಸರ್ಕಾರಿ ಕನ್ನಡ ಶಾಲೆಗಳ ಸ್ಥಿತಿಗತಿ ಬಗ್ಗೆ ಸಿನಿಮಾ ಮಾತನಾಡಲಿದೆ. ರಚಿತಾ ರಾಮ್, ರವಿಚಂದ್ರನ್, ಉಮಾಶ್ರೀ, ಮುಖ್ಯಮಂತ್ರಿ ಚಂದ್ರು, ಸಂಯುಕ್ತಾ ಹೊರನಾಡ್ ಚಿತ್ರದ ಮುಖ್ಯಭೂಮಿಕೆಯಲ್ಲಿ ಇದ್ದಾರೆ.

  ಪಕ್ಕಾ ಪಾರ್ಟಿ ನಂಬರ್: 'ಶೇಕ್ ಇಟ್ ಪುಷ್ಪವತಿ' ಎಂದು ಕುಣಿದು ಅಭಿಮಾನಿಗಳನ್ನು ಕುಣಿಸಿದ ದರ್ಶನ್ಪಕ್ಕಾ ಪಾರ್ಟಿ ನಂಬರ್: 'ಶೇಕ್ ಇಟ್ ಪುಷ್ಪವತಿ' ಎಂದು ಕುಣಿದು ಅಭಿಮಾನಿಗಳನ್ನು ಕುಣಿಸಿದ ದರ್ಶನ್

  ದರ್ಶನ್ ಹುಟ್ಟುಹಬ್ಬದ ಸಂಭ್ರಮದಲ್ಲಿ ರಿಲೀಸ್ ಆಗಿದ್ದ 'ಕ್ರಾಂತಿ' ಟೀಸರ್ ಅಷ್ಟಾಗಿ ಸದ್ದು ಮಾಡಿರಲಿಲ್ಲ. ಕೊಂಚ ಮಟ್ಟಿಗೆ ಅಭಿಮಾನಿಗಳಿಗೆ ಬೇಸರ ತಂದಿದ್ದು ಸುಳ್ಳಲ್ಲ. ಆದರೆ 'ಕ್ರಾಂತಿ' ಅಫೀಷಿಯಲ್ ಟ್ರೈಲರ್ ಬಗ್ಗೆ ಭಾರೀ ನಿರೀಕ್ಷೆ ಇದೆ.

  ಬೆಂಗಳೂರಿನಲ್ಲೇ ಟ್ರೈಲರ್ ರಿಲೀಸ್

  ಬೆಂಗಳೂರಿನಲ್ಲೇ ಟ್ರೈಲರ್ ರಿಲೀಸ್

  'ಪುಷ್ಪವತಿ' ಸಾಂಗ್ ರಿಲೀಸ್‌ಗಾಗಿ 'ಕ್ರಾಂತಿ' ಚಿತ್ರತಂಡ ಹುಬ್ಬಳ್ಳಿಗೆ ಹೋಗಿತ್ತು. ಈ ವೇಳೆ ಅಲ್ಲಿ ಸುದ್ದಿಗೋಷ್ಠಿ ನಡೆಸಿ ಸಿನಿಮಾ ಬಗ್ಗೆ ಮಾಹಿತಿ ನೀಡಿದೆ. ಇದೇ ವೇಳೆ ಟ್ರೈಲರ್ ರಿಲೀಸ್ ಎಲ್ಲಿ ಎನ್ನುವ ಪ್ರಶ್ನೆ ದರ್ಶನ್‌ಗೆ ಎದುರಾಗಿತ್ತು. ಇದಕ್ಕೆ ಪ್ರತಿಕ್ರಿಯಿಸಿದ್ದ ದರ್ಶನ್ ಬೆಂಗಳೂರಿನಲ್ಲೇ ಟ್ರೈಲರ್ ರಿಲೀಸ್ ಈವೆಂಟ್ ಮಾಡ್ತೀವಿ ಎಂದಿದ್ದಾರೆ. ಅದಕ್ಕೆ ಕಾರಣವನ್ನು ಕೊಟ್ಟಿದ್ದಾರೆ. "ಚಿತ್ರದ ಒಂದೊಂದು ಹಾಡನ್ನು ಒಂದೊಂದು ಜಿಲ್ಲೆಯಲ್ಲಿ ಅಭಿಮಾನಿಗಳ ಸಮ್ಮುಖದಲ್ಲಿ ರಿಲೀಸ್ ಮಾಡಿದ್ದೀವಿ ಆದರೆ ಟ್ರೈಲರ್ ಮಾತ್ರ ಬೆಂಗಳೂರಿನ ಮಾಲ್ ಒಂದರಲ್ಲಿ ಪ್ರದರ್ಶನ ಮಾಡುತ್ತೇವೆ" ಎಂದರು.

  ಎಲ್ಲರಿಗೂ ಟ್ರೈಲರ್ ತೋರಿಸಬೇಕು

  ಎಲ್ಲರಿಗೂ ಟ್ರೈಲರ್ ತೋರಿಸಬೇಕು

  ಬೆಂಗಳೂರಿನಲ್ಲೇ ಯಾಕೆ 'ಕ್ರಾಂತಿ' ಟ್ರೈಲರ್ ರಿಲೀಸ್ ಈವೆಂಟ್ ಎನ್ನುವುದನ್ನು ದರ್ಶನ್ ವಿವರಿಸಿದ್ದಾರೆ. "ಸಾಂಗ್ ರಿಲೀಸ್‌ಗೆ ಇಡೀ ಚಿತ್ರರಂಗ ಬರಲು ಸಾಧ್ಯವಾಗುತ್ತಿಲ್ಲ. ರವಿಚಂದ್ರನ್ ಸರ್ ಸೇರಿದಂತೆ ಇಡೀ ಚಿತ್ರತಂಡ ಟ್ರೈಲರ್ ರಿಲೀಸ್ ಈವೆಂಟ್‌ಗೆ ಬರ್ತಾರೆ. ಸ್ಕ್ರೀನಿಂಗ್ ಮಾಡಿ ಎಲ್ಲರಿಗೂ ಚಿತ್ರದ ಸಾಂಗ್ಸ್, ಟ್ರೈಲರ್ ತೋರಿಸಬೇಕು. ಅದಕ್ಕಾಗಿ ಬೆಂಗಳೂರಿನಲ್ಲಿ ಟ್ರೈಲರ್ ರಿಲೀಸ್ ಈವೆಂಟ್ ನಡೆಯುತ್ತೆ ಎಂದಿದ್ದಾರೆ. ಮತ್ತೊಂದು ಸಾಂಗ್ ರಿಲೀಸ್ ಯಾವಾಗ ಎನ್ನುವುದನ್ನು ಶೀಘ್ರದಲ್ಲೇ ಹೇಳ್ತೀನಿ" ಎಂದಿದ್ದಾರೆ.

  ಇನ್ನು ಜಾಸ್ತಿ ಉರಿಸೋಣ:ದರ್ಶನ್

  ಇನ್ನು ಜಾಸ್ತಿ ಉರಿಸೋಣ:ದರ್ಶನ್

  ಹುಬ್ಬಳ್ಳಿಯಲ್ಲಿ ನಡೆದ ಅದ್ಧೂರಿ ಸಾಂಗ್ ರಿಲೀಸ್ ಈವೆಂಟ್‌ನಲ್ಲಿ ದರ್ಶನ್ ಹೊಸಪೇಟೆ ಘಟನೆ ಪ್ರಸ್ತಾಪಿಸಿ ಪ್ರತಿಕ್ರಿಯೆ ನೀಡಿದರು. "ಯಾರು ಏನೇ ಮಾಡಲಿ. ಹಾಳು ಮಾಡೋಕೆ ಒಂದಷ್ಟು ಜನ ಇದ್ರೂ, ಕಾಪಾಡುವುದಕ್ಕೆ ನಿಮ್ಮಂತಹ ಸಾವಿರಾರು ಜನ ಇದ್ದಾರೆ. ಇದರ ಮೇಲೆ ನೋಡಿಕೊಳ್ಳೋಣ. ನಿನ್ನೆ ಬಿದ್ದಿರೋದಕ್ಕೆ ಇವತ್ತು ಹೂವಿನಲ್ಲಿ ಮುಳುಗಿಸಿದ್ರಾ? ಇದಕ್ಕಿಂತ ಬೇಕಾ? ಅದ್ಯಾವುದು ನಾವು ತಲೆಗೂ ಹಾಕಿಕೊಳ್ಳೋದಿಲ್ಲ" ಎಂದಿದ್ದಾರೆ.

  ಅಕ್ಷರ ಕ್ರಾಂತಿಯ ಕಥೆ

  ಅಕ್ಷರ ಕ್ರಾಂತಿಯ ಕಥೆ

  'ಕ್ರಾಂತಿ' ಚಿತ್ರದ ಕತೆ ಏನು ಎನ್ನುವುದು ಇನ್ನು ಗೊತ್ತಾಗಿಲ್ಲ. ಟ್ರೈಲರ್‌ನಲ್ಲಿ ಅದರ ಬಗ್ಗೆ ಸುಳಿವು ಸಿಗಬಹುದು. 'ಅಕ್ಷರ ಕ್ರಾಂತಿ'ಯ ಕಥೆ ಎನ್ನುವುದು ಮಾತ್ರ ಸ್ಪಷ್ಟವಾಗಿದೆ. ಅಭಿಮಾನಿಗಳು ಕೇಳುವ ಭರ್ಜರಿ ಆಕ್ಷನ್, ಡೈಲಾಗ್ಸ್, ಸಾಂಗ್ಸ್ ಎಲ್ಲವೂ ಸಿನಿಮಾದಲ್ಲಿದೆ. ರಚಿತಾ ರಾಮ್ ಮತ್ತೊಮ್ಮೆ ದರ್ಶನ್ ಜೋಡಿಯಾಗಿ ನಟಿಸಿರುವುದು ವಿಶೇಷ. ಈಗಾಗಲೇ ಚಿತ್ರದ ಆಲ್ಬಮ್ ಹಿಟ್ ಆಗಿ ಸಿನಿಮಾ ಬಗ್ಗೆ ನಿರೀಕ್ಷೆ ಹೆಚ್ಚಿಸಿರುವುದು ಸುಳ್ಳಲ್ಲ. ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಜನವರಿ 26ಕ್ಕೆ ತೆರೆಮೇಲೆ ದರ್ಶನ್ 'ಕ್ರಾಂತಿ' ಶುರುವಾಗಲಿದೆ.

  English summary
  Challenging Star Darshan About Kranti Trailer Release Event Venue. Kranti also stars Rachita Ram, Sumalatha Ambareesh, V. Ravichandran, Umashree, Mukyamantri Chandru and others. The film will release in theatres on January 26. know more.
  Monday, December 26, 2022, 9:27
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X