For Quick Alerts
  ALLOW NOTIFICATIONS  
  For Daily Alerts

  ಚಾಲೆಂಜಿಂಗ್ ಸ್ಟಾರ್ 'ಅಂಬರೀಶ' ಫಸ್ಟ್ ಲುಕ್

  By Rajendra
  |

  ಮಂಡ್ಯದ ಗಂಡು ಹಾಲಿ ವಸತಿ ಸಚಿವ ರೆಬೆಲ್ ಸ್ಟಾರ್ ಅಂಬರೀಶ್ ಅವರ ಹೆಸರಿನ 'ಅಂಬರೀಶ' ಚಿತ್ರದ ಟೀಸರ್ ರಿಲೀಸ್ ಆಗಿ ಅಭಿಮಾನಿಗಳನ್ನು ರಂಜಿಸುತ್ತಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾಯಕ ನಟನಾಗಿರುವ ಈ ಚಿತ್ರದ ಟೀಸರ್ ಅವರ 37ನೇ ಹುಟ್ಟುಹಬ್ಬದ ಕೊಡುಗೆಯಾಗಿ ಬಿಡುಗಡೆಯಾಗಿದೆ.

  ಒಂದು ನಿಮಿಷ 39 ಸೆಕೆಂಡ್ ಗಳ ಕಾಲಾವಧಿಯ ಈ ಟೀಸರ್ "ರೆಬೆಲ್ ಸ್ಟಾರ್ ಅಂಬರೀಶ್ ಅವರ ಆಶೀರ್ವಾದಗಳೊಂದಿಗೆ" ಎಂದು ಆರಂಭವಾಗುತ್ತದೆ. ಭರ್ಜರಿ ಹಿನ್ನೆಲೆ ಸಂಗೀತ ಜೊತೆಯಾಗಿದ್ದು ಅಭಿಮಾನಿಗಳ ಆಶಯಕ್ಕೆ ತಕ್ಕಂತೆ ಮೂಡಿಬಂದಿದೆ. [ಮೈಸೂರಲ್ಲಿ ಮನೆಮನೆಗೆ ಹಾಲು ಮಾರ್ತಿದ್ರು ದರ್ಶನ್]

  Still from Ambareesha

  ಸುಖಧರೆ ಪಿಕ್ಚರ್‍ಸ್ ಲಾಂಛನದಡಿಯಲ್ಲಿ ಮಹೇಶ್ ಸುಖಧರೆ ನಿರ್ಮಿಸಿ ನಿರ್ದೇಶಿಸುತ್ತಿರುವ ಚಿತ್ರ 'ಅಂಬರೀಶ'. ದರ್ಶನ್, ಪ್ರಿಯಾಮಣಿ, ಬುಲೆಟ್‌ಪ್ರಕಾಶ್, ಸಾಧು ಕೋಕಿಲ, ರಾಜೇಂದ್ರ ಕಾರಂತ್‌ರ ಮೇಲೆ ಹಲವಾರು ಸನ್ನಿವೇಶಗಳನ್ನು ಈಗಾಗಲೆ ಚಿತ್ರಿಸಿಕೊಳ್ಳಲಾಗಿದೆ.

  ಚಿತ್ರಕ್ಕೆ ಕಥೆ, ಸಂಭಾಷಣೆ ಚಿಂತನ್, ಛಾಯಾಗ್ರಹಣ ಸತ್ಯ, ಸಂಗೀತ ಹರಿಕೃಷ್ಣ, ಕಲೆ ಈಶ್ವರಿ ಕುಮಾರ್, ಸಾಹಸ ರವಿವರ್ಮ, ನೃತ್ಯ ಮುರುಳಿ, ಗಣೇಶ್, ಕಲೈ, ಸಂಕಲನ ಪ್ರಕಾಶ್, ನಿರ್ಮಾಣ ಮೇಲ್ವಿಚಾರಣೆ ಮೋಹನ್, ನಿರ್ಮಾಣ ನಿರ್ವಹಣೆ ಅನಿಲ್‌ಕುಮಾರ್, ಚಿತ್ರದ ಸಹ ನಿರ್ಮಾಪಕರು ಮಹೇಶ್ ನಂಜಯ್ಯ, ಎಂ.ಸುರೇಶ್.

  ತಾರಾಗಣದಲ್ಲಿ ದರ್ಶನ್, ಪ್ರಿಯಾಮಣಿ, ಡಾ.ಅಂಬರೀಶ್, ಸುಮಲತಾ, ಉಮಾಶ್ರೀ, ನಿಶಾ ಯೋಗೀಶ್ವರ್, ಸಾಧು ಕೋಕಿಲ, ಶರತ್ ಲೋಹಿತಾಶ್ವ, ಬುಲೆಟ್ ಪ್ರಕಾಶ್, ರವಿಶಂಕರ್, ರಾಜೇಂದ್ರ ಕಾರಂತ್, ಸಿದ್ಧಾರ್ಥ (ಬಾಂಬೆ), ಬಿರಾದಾರ್, ರೋಹಿತ್, ಭರತ್, ಸತೀಶ್, ಬೆಸ್ಟ್‌ಕ್ಲಬ್ ಆರ್. ಅರುಣಾಚಲಂ, ಜಯರಾಂ, ಚೇತನ, ಲೋಕಿ, ಉದಯ್, ಚೇತನ್ ಮುಂತಾದವರಿದ್ದಾರೆ. (ಏಜೆನ್ಸೀಸ್)

  English summary
  The first official teaser of Challenging Star Darshan starrer Ambareesha is out. The makers of the movie have released the teaser on the occasion of the actor's 37th birthday, on Sunday, February 16.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X