»   » ಚಾಲೆಂಜಿಂಗ್ ಸ್ಟಾರ್ ದರ್ಶನ್ ಈಗ ಬದಲಾಗಿದ್ದಾರೆ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಈಗ ಬದಲಾಗಿದ್ದಾರೆ

By: ಜೀವನರಸಿಕ
Subscribe to Filmibeat Kannada

ಚಾಲೆಂಜಿಂಗ್ ಸ್ಟಾರ್ ದರ್ಶನ್ ತುಂಬಾನೇ ಬಿಜಿ ನಟ. ಅವರು ಯಾವುದೇ ಕಾರ್ಯಕ್ರಮಗಳಿಗೂ ಹೋಗಲ್ಲ. ಹಾಗೆಯೇ ಟೈಮ್ ಸಿಕ್ಕಿದ್ರೂ ಕೂಡ ದರ್ಶನ್ ಮೈಸೂರಿನಲ್ಲಿರೋ ಫಾರ್ಮ್ ಹೌಸ್ ಗೆ ಹೋಗ್ತಾರೆ. ಯಾರು ಕರೆದರೂ ಬರಲ್ಲ...

ದರ್ಶನ್ ಬಗೆಗಿನ ಈ ರೀತಿಯ ಮಾತುಗಳು ಬಹಳ ಕೇಳಿಬರುತ್ತಿದ್ದವು. ಈಗ ದರ್ಶನ್ ಬದಲಾಗಿದ್ದಾರೆ. ಗಾಂಧಿನಗರದ ಟೀಕಾಕಾರರ ಬಾಯಿಮುಚ್ಚಿಸಿದ್ದಾರೆ ಚಾಲೆಂಜಿಂಗ್ ಸ್ಟಾರ್. ಇತ್ತೀಚೆಗೆ ದರ್ಶನ್ ಖಾಸಗಿ ಕಾರ್ಯಕ್ರಮಗಳಿಗೆ ಹೋಗಿ ಬರ್ತಿದ್ದಾರೆ.


ಆಹ್ವಾನವಿದ್ದರೆ ಅಲ್ಲಿಗೆ ಹೋಗೋ ಮನಸ್ಸು ಮಾಡ್ತಿದ್ದಾರೆ. ಇತ್ತೀಚೆಗೆ ಆಡಿಯೋ ರಿಲೀಸ್ ಮಾಡಿ 'ಹುಚ್ಚುಡುಗ್ರು' ತಂಡಕ್ಕೆ ವಿಶ್ ಮಾಡಿ ಆಲ್ ದ ಬೆಸ್ಟ್ ಹೇಳಿರೋ ದರ್ಶನ್, ಈ ಹಿಂದೆ ರಂಗಾಯಣ ರಘು ಸಾಧು ಅಭಿನಯದ 'ಚಡ್ಡಿ ದೋಸ್ತ್' ಚಿತ್ರದ ಆಡಿಯೋ ರಿಲೀಸ್ಗೆ ಕೂಡ ಹೋಗಿದ್ರು.

ಚಡ್ಡಿದೋಸ್ತ್ ಚಿತ್ರದ ಆಡಿಯೋ ರಿಲೀಸ್ ಗೆ ಮಂಗಳೂರಿಂದ ಮಳೆಯ ನಡುವೆ ಕೂಡ ಟ್ರಾಫಿಕ್ ಸಮಸ್ಯೆಯಲ್ಲೂ ಕೇವಲ ನಾಲ್ಕೂವರೆ ಗಂಟೆಯಲ್ಲಿ ಬೆಂಗಳೂರು ತಲುಪಿದ್ದ ದರ್ಶನ್ ತಮ್ಮ ಗೆಳೆಯರಿಗಾಗಿ ಎಂತಹಾ ರಿಸ್ಕ್ ಬೇಕಾದ್ರೂ ತಗೊಂಡಿದ್ದಾರೆ.

ತಮ್ಮ ಸಿನಿಮಾದ ಕಾರ್ಯಕ್ರಮಗಳಿಗೇ ದರ್ಶನ್ ಬರಲ್ಲ, ಇನ್ನು ಬೇರೆಯವರ ಕಾರ್ಯಕ್ರಮಳಿಗೆ ಹೋಗ್ತಾರಾ ಅಂತಿದ್ದವರು. ಈಗ ದರ್ಶನ್ ಬದಲಾಗಿದ್ದಾರೆ ಅಂತ ಮಾತಾಡಿಕೊಳ್ತಿದ್ದಾರೆ. ಬದಲಾವಣೆ ಜಗದ ನಿಯಮ ಅಲ್ಲವೆ?

English summary
Challenging Star Darshan change his tune. Now the actor is not stick in the mud, he has regularly attending audio release functions and movie related programmes.
Please Wait while comments are loading...