For Quick Alerts
  ALLOW NOTIFICATIONS  
  For Daily Alerts

  ಮಗ ವಿನೀಶ್ ಗೆ ಕುದುರೆ ಸವಾರಿ ಹೇಳಿಕೊಟ್ಟ ಡಿ ಬಾಸ್ ದರ್ಶನ್

  |
  ಮಗನಿಗೆ ಡಿ ಬಾಸ್ ಕೊಡುತ್ತಿರುವ ತಯಾರಿ ಹೇಗಿದೆ ನೋಡಿ | FILMIBEAT KANNADA

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಪ್ರಾಣಿ ಪ್ರಿಯ. ಶ್ವಾನ, ಕುದುರೆ, ಎತ್ತು, ಹಸು ಸೇರಿದಂತೆ ಹಲವು ಪ್ರಾಣಿ-ಪಕ್ಷಿಗಳನ್ನು 'ದಾಸ' ದರ್ಶನ್ ಸಾಕುತ್ತಿದ್ದಾರೆ. ಮೂಕ ಪ್ರಾಣಿಗಳ ಮೇಲೆ ಅಪಾರ ಪ್ರೀತಿ ಹೊಂದಿರುವ ದರ್ಶನ್, ಬಿಡುವಿನ ಸಮಯದಲ್ಲಿ ಅವುಗಳೊಂದಿಗೆ ಕಾಲ ಕಳೆಯುತ್ತಾರೆ.

  ಅಪ್ಪನಂತೆ ಮಗ ವಿನೀಶ್ ಕೂಡ ಪ್ರಾಣಿ ಪ್ರೇಮಿ. ಅಪ್ಪ ದರ್ಶನ್ ಸಾಕಿರುವ ಪ್ರಾಣಿಗಳನ್ನ ಕಾಳಜಿಯಿಂದ ನೋಡಿಕೊಳ್ಳುತ್ತಾನೆ ಪುತ್ರ ವಿನೀಶ್.

  ಇನ್ನೂ 'ಒಡೆಯ' ದರ್ಶನ್ ಗೆ ಕುದುರೆ ಸವಾರಿ ಮಾಡುವುದೆಂದರೆ ಅಚ್ಚುಮೆಚ್ಚು. ತಮ್ಮ ಫಾರ್ಮ್ ಹೌಸ್ ನಲ್ಲಿ ಹಲವು ಕುದುರೆಗಳನ್ನು ಸಾಕಿರುವ ದರ್ಶನ್, ಆಗಾಗ ಅವುಗಳ ಮೇಲೆ ಸವಾರಿ ಮಾಡುತ್ತಿರುತ್ತಾರೆ. ಈಗ ಮಗ ವಿನೀಶ್ ಗೂ ದರ್ಶನ್ ಕುದುರೆ ಸವಾರಿ ಮಾಡಿಸಿದ್ದಾರೆ. ಮುಂದೆ ಓದಿರಿ...

  ಅಪ್ಪ-ಮಗನ ಕುದುರೆ ಸವಾರಿ

  ಅಪ್ಪ-ಮಗನ ಕುದುರೆ ಸವಾರಿ

  ಬಿಳಿ ಬಣ್ಣದ ಎರಡು ಕುದುರೆಗಳ ಮೇಲೆ ದರ್ಶನ್ ಮತ್ತು ಪುತ್ರ ವಿನೀಶ್ ಒಂದು ರೌಂಡ್ ಹಾಕಿದ್ದಾರೆ. ಎರಡೂ ಕುದುರೆಗಳ ಬಗ್ಗೆ ಎಚ್ಚರಿಕೆ ವಹಿಸಿ, ಮಗನಿಗೆ ಕುದುರೆ ಸವಾರಿ ಬಗ್ಗೆ ದರ್ಶನ್ ಹೇಳಿಕೊಟ್ಟಿದ್ದಾರೆ. ಆ ವಿಡಿಯೋ ಈಗ ಬಿಡುಗಡೆ ಆಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

  ಹುಟ್ಟುಹಬ್ಬದ ಸಂಭ್ರಮದಲ್ಲಿ ವಿನೀಶ್ ದರ್ಶನ್ಹುಟ್ಟುಹಬ್ಬದ ಸಂಭ್ರಮದಲ್ಲಿ ವಿನೀಶ್ ದರ್ಶನ್

  ಕುದುರೆ ಸವಾರಿ ವಿಡಿಯೋಗೆ ವ್ಯಾಪಕ ಮೆಚ್ಚುಗೆ

  ಕುದುರೆ ಸವಾರಿ ವಿಡಿಯೋಗೆ ವ್ಯಾಪಕ ಮೆಚ್ಚುಗೆ

  ಅಪ್ಪನಂತೆ ಮಗ ವಿನೀಶ್ ಕೂಡ ಸ್ವಲ್ಪವೂ ಭಯವಿಲ್ಲದೆ ಕುದುರೆ ಸವಾರಿ ಮಾಡಿದ್ದಾರೆ. ಅಪ್ಪ-ಮಗನ ಕುದುರೆ ಸವಾರಿ ನೋಡಿ ಡಿ-ಬಾಸ್ ಫ್ಯಾನ್ಸ್ ಅಂತೂ 'ಸಾಹೋರೇ.. ಸಾಹೋ..' ಅಂತ ಜೈಕಾರ ಹಾಕುತ್ತಿದ್ದಾರೆ. ದರ್ಶನ್-ವಿನೀಶ್ ಕುದುರೆ ಸವಾರಿ ವಿಡಿಯೋಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

  ದರ್ಶನ್ ಪುತ್ರ ವಿನೀಶ್ ಚಿತ್ರರಂಗಕ್ಕೆ ಬರೋದು ನೂರಕ್ಕೆ ನೂರರಷ್ಟು ನಿಜದರ್ಶನ್ ಪುತ್ರ ವಿನೀಶ್ ಚಿತ್ರರಂಗಕ್ಕೆ ಬರೋದು ನೂರಕ್ಕೆ ನೂರರಷ್ಟು ನಿಜ

  ಪ್ರಾಣಿಗಳ ಬಗ್ಗೆ ಮಗನಿಗೆ ಜ್ಞಾನ ತುಂಬುತ್ತಿರುವ ದರ್ಶನ್

  ಪ್ರಾಣಿಗಳ ಬಗ್ಗೆ ಮಗನಿಗೆ ಜ್ಞಾನ ತುಂಬುತ್ತಿರುವ ದರ್ಶನ್

  ಕೋಟ್ಯಾಂತರ ರೂಪಾಯಿ ಸಂಭಾವನೆ ಪಡೆದರೂ, ಪುತ್ರ ವಿನೀಶ್ ನ ದರ್ಶನ್ ತುಂಬಾ ಸಿಂಪಲ್ ಆಗಿ ಬೆಳೆಸುತ್ತಿದ್ದಾರೆ. ಪ್ರಾಣಿಗಳ ಬಗ್ಗೆ ಮಗನಿಗೆ ಜ್ಞಾನ ತುಂಬುತ್ತಿರುವ ದರ್ಶನ್, ಹಾಲು ಕರೆಯುವುದನ್ನೂ ಮಗನಿಗೆ ಹೇಳಿಕೊಟ್ಟಿದ್ದರು.

  ಸಿನಿಮಾಗಳಲ್ಲಿ ಅಪ್ಪ-ಮಗ

  ಸಿನಿಮಾಗಳಲ್ಲಿ ಅಪ್ಪ-ಮಗ

  ಅಪ್ಪ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆಗೆ ಪುತ್ರ ವಿನೀಶ್ 'ಮಿಸ್ಟರ್ ಐರಾವತ' ಮತ್ತು 'ಯಜಮಾನ' ಚಿತ್ರಗಳಲ್ಲಿ ನಟಿಸಿದ್ದರು. ಆಕ್ಟಿಂಗ್ ಬಗ್ಗೆಯೂ ವಿನೀಶ್ ಗೆ ಇಂಟ್ರೆಸ್ಟ್ ಇದೆ. ಮಗನನ್ನು ಹೀರೋ ಮಾಡುವ ಆಲೋಚನೆ ದರ್ಶನ್ ಗೂ ಇದೆ.

  English summary
  Challenging Star Darshan horse riding with his son Vineesh.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X