For Quick Alerts
  ALLOW NOTIFICATIONS  
  For Daily Alerts

  ಬಿಗ್ ಬಾಸ್ ಶೋಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್?

  By ರವಿಕಿಶೋರ್
  |

  ಸುವರ್ಣ ವಾಹಿನಿಯ ರಿಯಾಲಿಟಿ ಶೋ 'ಬಿಗ್ ಬಾಸ್'ನಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪಾಲ್ಗೊಳ್ಳಲಿದ್ದಾರೆಯೇ? ಅವರನ್ನು ವಾಹಿನಿ ಸಂಪರ್ಕಿಸಿದೆಯೇ? ಎಂಬ ಪ್ರಶ್ನೆಗಳಿಗೆ ಇದೀಗ ಉತ್ತರ ಸಿಕ್ಕಿದೆ. ಕಿಚ್ಚ ಸುದೀಪ್ ಮತ್ತು ದರ್ಶನ್ ಇಬ್ಬರೂ ಒಳ್ಳೆಯ ಗೆಳೆಯರು ಎಂಬುದು ಗೊತ್ತೇ ಇದೆ.

  ಈಗಾಗಲೆ ಶೋನಲ್ಲಿ ಭಾಗವಹಿಸುವಂತೆ ದರ್ಶನ್ ಅವರನ್ನು ಸುದೀಪ್ ಕೇಳಿದ್ದಾರಂತೆ. ಇದು ಚಾರಿಟಿ ಕಾರ್ಯಕ್ರಮ ಅಲ್ಲ, ಇದೊಂದು ಕಮರ್ಷಿಯಲ್ ಶೋ. ಹಾಗಾಗಿ ತನ್ನ ಷರತ್ತುಗಳನ್ನು ಒಪ್ಪುವುದಾದರೆ ಖಂಡಿತ ಭಾಗವಹಿಸುತ್ತೇನೆ ಎಂದು ಸುದೀಪ್ ಗೆ ದರ್ಶನ್ ತಿಳಿಸಿದ್ದಾರಂತೆ. [ಬಿಗ್ ಬಾಸ್ ಮನೆಯಲ್ಲಿ ಗಂಡುಮಗು ಹೆತ್ತ ಸಂತೋಷ್]

  ಬಿಗ್ ಬಾಸ್ ಶೋನಲ್ಲಿ ಬಿಡಿಗಾಸೂ ತೆಗೆದುಕೊಳ್ಳದೆ ನಾನಂತೂ ಭಾಗವಹಿಸಲ್ಲ. ನನ್ನ ಕಮರ್ಷಿಯಲ್ ಡಿಮಾಂಡ್ಸ್ ಏನಿದೆ ಎಂಬುದನ್ನು ಕಾರ್ಯಕ್ರಮದ ನಿರ್ಮಾಪಕರು ಬಂದು ಕೇಳಲಿ. ಆ ಬಳಿಕವಷ್ಟೇ ಭಾಗವಹಿಸುವ ಮಾತು ಎಂದಿದ್ದಾರೆ ದರ್ಶನ್.

  ನನ್ನಿಂದ ಕಾರ್ಯಕ್ರಮಕ್ಕೆ ಟಿಆರ್ ಪಿ ಬರುತ್ತದೆ ಎಂದಾದರೆ ನಾನ್ಯಕೆ ಅದನ್ನು ಬಿಟ್ಟಿಯಾಗಿ ಮಾಡಿಕೊಡಲಿ. ಇದೇನು ಚಾರಿಟಿ ಶೋ ಅಲ್ಲವಲ್ಲಾ ಎಂದಿದ್ದಾರೆ ಚಾಲೆಂಜಿಂಗ್ ಸ್ಟಾರ್. ಅವರು ಕೇಳುವುದರಲ್ಲೂ ಅರ್ಥವಿದೆಯಲ್ಲವೇ?

  ಒಟ್ಟಾರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಫ್ಯಾನ್ ಫಾಲೋಯಿಂಗ್ ಗಮನದಲ್ಲಿಟ್ಟುಕೊಂಡು ವಾಹಿನಿ ಶೀಘ್ರದಲ್ಲೇ ಅವರೊಂದಿಗೆ ಮಾತುಕತೆಯೂ ನಡೆಯಬಹುದು. ದರ್ಶನ್ ಅಭಿಮಾನಿಗಳು ಆ ರೀತಿ ಕಾರ್ಯಕ್ರಮವೊಂದರ ನಿರೀಕ್ಷೆಯಲ್ಲಿದ್ದಾರೆ.

  English summary
  Challenging Star Darshan may seen in Bigg Boss Kannada 2, but conditions apply. I would have gone to my friend Sudeep show in case it was a charity. He is also on payment and there is nothing wrong in seeking a financial deal says Darshan.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X