»   » ಪುಟ್ಟ ಅಭಿಮಾನಿಯ ಸಂತಸವನ್ನು ಇಮ್ಮಡಿಗೊಳಿಸಿದ ದರ್ಶನ್

ಪುಟ್ಟ ಅಭಿಮಾನಿಯ ಸಂತಸವನ್ನು ಇಮ್ಮಡಿಗೊಳಿಸಿದ ದರ್ಶನ್

Posted By:
Subscribe to Filmibeat Kannada

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಪುಟ್ಟ ಅಭಿಮಾನಿ, ಕೊಪ್ಪಳದ 6 ವರ್ಷದ ಅಭಿಷೇಕ್ ಎಂಬ ಬಾಲಕ ದರ್ಶನ್ ಅವರು ಸಿನಿಮಾದಲ್ಲಿ ಮಾಡೋ ತರ ಸ್ಟಂಟ್ಸ್ ಮಾಡಲು ಹೋಗಿ ತನ್ನ ಎಡಗಾಲು ಮುರಿದುಕೊಂಡಿದ್ದ. ವಿಷಯ ನಾವು ನಿಮಗೆ ಈ ಮೊದಲು ಇದೇ ಫಿಲ್ಮಿಬೀಟಲ್ಲಿ ಹೇಳಿದ್ವಿ ತಾನೆ.

ಬಾಲಕ ಕಾಲು ಮುರಿದುಕೊಂಡಿದ್ದ ಸಂದರ್ಭದಲ್ಲಿ ನಟ ದರ್ಶನ್ ಅವರು ಫೋನ್ ಕಾಲ್ ಮಾಡಿ ಮಾತಾಡಿ ಕ್ಷೇಮ ಸಮಾಚಾರ ವಿಚಾರಿಸಿ ಬುದ್ಧಿವಾದ ಹೇಳಿದ್ದರು. ಇದೀಗ ನೇರವಾಗಿ ಪುಟ್ಟ ಅಭಿಮಾನಿ ಅಭಿಷೇಕ್ ಮತ್ತು ಆತನ ಕುಟುಂಬವನ್ನು ಭೇಟಿ ಮಾಡಿ ಆತನನ್ನು ಮತ್ತೆ ಸಂತೋಷ ಪಡಿಸಿದ್ದಾರೆ.[ಕಾಲು ಮುರಿದುಕೊಂಡ, ಪುಟ್ಟ ಅಭಿಮಾನಿಗೆ ಸಾಂತ್ವನ ನುಡಿದ ದರ್ಶನ್]

Challenging star Darshan met his die hard fan Abhishek and family

ಹೌದು ಬಾಕ್ಸಾಫೀಸ್ ಸುಲ್ತಾನ ದರ್ಶನ್ ಮತ್ತು ನಟ ಸೃಜನ್ ಲೋಕೇಶ್ ಅವರು 'ಜಗ್ಗುದಾದ' ಶೂಟಿಂಗ್ ಸ್ಪಾಟ್ ನಲ್ಲಿ ಪುಟ್ಟ ಅಭಿಮಾನಿ ಅಭಿಷೇಕ್ ಮತ್ತು ಆತನ ಅಪ್ಪ-ಅಮ್ಮ, ಅಕ್ಕನನ್ನು ಭೇಟಿ ಮಾಡಿದ್ದಾರೆ.

ಪುಟ್ಟ ಅಭಿಮಾನಿ ಅಭಿಷೇಕ್ ಕಾಲು ಮುರಿದುಕೊಂಡ ಸಂದರ್ಭದಲ್ಲಿ ನಟ ದರ್ಶನ್ ಅವರು ಶೂಟಿಂಗ್ ನಿಮಿತ್ತ ದೂರದ ಊರಲ್ಲಿ ಇದ್ದಿದ್ದರಿಂದ ಆತನನ್ನು ಭೇಟಿ ಮಾಡಲಾಗಿರಲಿಲ್ಲ. ಆದರೆ ಇದೀಗ ಮುಖತಃ ಭೇಟಿಯಾಗಿ ಆತನ ಖುಷಿ ಹೆಚ್ಚಿಸಿದ್ದಾರೆ.[ದರ್ಶನ್ ಅಭಿಮಾನಿಗಳೇ ಸಂಕ್ರಾಂತಿಯಂದು ಉದಯ ಟಿವಿ ತಪ್ಪದೆ ನೋಡಿ]

Challenging star Darshan met his die hard fan Abhishek and family

ದರ್ಶನ್ ಅಂದರೆ ಸಾಯುವಷ್ಟು ಅಭಿಮಾನ ಇಟ್ಟುಕೊಂಡಿರುವ ಪುಟ್ಟ ಬಾಲಕ ಅಭಿಷೇಕ್ ಗೆ ದರ್ಶನ್ ಅವರನ್ನು ಮುಖತಃ ಭೇಟಿ ಮಾಡಿದ್ದು ಜೊತೆಗೆ ದರ್ಶನ್ ಅವರು ಅಭಿಷೇಕ್ ನನ್ನು ಎತ್ತಿಕೊಂಡಿರುವುದರಿಂದ ಫುಲ್ ಖುಷಿಯಾಗಿದೆ ಎಂಬುದು ಆತನ ಮುಖದಲ್ಲೇ ವ್ಯಕ್ತವಾಗುತ್ತಿದೆ.

ಜನವರಿ 22 ರಂದು ಕೊಪ್ಪಳ ಮೂಲದ 6 ವರ್ಷದ ಬಾಲಕ ಅಭಿಷೇಕ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ 'Mr ಐರಾವತ' ಚಿತ್ರದ ಡೈಲಾಗ್ ಅನ್ನು ಹೇಳುತ್ತಾ, ದರ್ಶನ್ ಗಿಂತ ತಾನೇನು ಕಡಿಮೆ ಇಲ್ಲ ಅನ್ನೋ ರೀತಿಯಲ್ಲಿ ಮನೆಯ ಮಾಳಿಗೆ ಏರಿ ಅಲ್ಲಿಂದ ಜಂಪ್ ಮಾಡಿ ತನ್ನ ಎಡಗಾಲು ಮುರಿದುಕೊಂಡಿದ್ದ.[ತಮಿಳು ರಿಮೇಕ್ ನಲ್ಲಿ ದರ್ಶನ್-ಯೋಗೇಶ್ ಜುಗಲ್ ಬಂದಿ?]

Challenging star Darshan met his die hard fan Abhishek and family

ತುಂಬಾ ದಿನಗಳಿಂದ ಭೇಟಿಯಾಗಬೇಕು ಎಂದು ಕಾಯುತ್ತಿದ್ದ ಅಭಿಷೇಕ್ ಇದೀಗ ತನ್ನ ನೆಚ್ಚಿನ ನಟನನ್ನು ಭೇಟಿಯಾಗಿ ಖುಷಿಯಾಗಿ ತನ್ನ ನೋವನ್ನು ಮರೆತು ಮತ್ತೆ ಲವಲವಿಕೆಯಿಂದ ಓಡಾಡುತ್ತಿದ್ದಾನೆ. (ಚಿತ್ರಕೃಪೆ: ಡಿ.ಕಂಪೆನಿ)

English summary
Challenging star Darshan met his die hard fan Abhishek and family at 'Jaggu Dada' shooting spot. Actor Darshan fulfilled the desire of Young Kid who was eager to Meet him. 6 year old boy was going to follow Actor darshan style and he is injured on November 22 in Koppal.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada