»   » ಚಾಲೆಂಜಿಂಗ್ ಸ್ಟಾರ್ ಹೊಸ ಬುಲ್ ಬುಲ್ ರಮ್ಯಾ

ಚಾಲೆಂಜಿಂಗ್ ಸ್ಟಾರ್ ಹೊಸ ಬುಲ್ ಬುಲ್ ರಮ್ಯಾ

Posted By:
Subscribe to Filmibeat Kannada

ಚಾಲೆಂಜಿಂಗ್ ಸ್ಟಾರ್ ದರ್ಶನ್ ಮುಖ್ಯಭೂಮಿಕೆಯಲ್ಲಿರುವ ಬುಲ್ ಬುಲ್ ಚಿತ್ರಕ್ಕೆ ನಾಯಕಿ ಆಯ್ಕೆ ಇನ್ನೂ ಅಂತಿಮವಾಗಿಲ್ಲ. ದರ್ಶನ್ ಹುಟ್ಟುಹಬ್ಬದ ದಿನ (ಫೆಬ್ರವರಿ 16, 2012) ಸೆಟ್ಟೇರಿದ ಈ ಚಿತ್ರದಲ್ಲಿ ರೆಬೆಲ್ ಸ್ಟಾರ್ ಅಂಬರೀಶ್ ಅವರು ಮುಖ್ಯಪಾತ್ರವನ್ನು ಪೋಷಿಸುತ್ತಿರುವುದು ಗೊತ್ತೇ ಇದೆ.

ಈ ಚಿತ್ರದ ನಾಯಕಿ ಪಾತ್ರಕ್ಕೆ ಹಲವಾರು ಹೆಸರುಗಳು ಕೇಳಿಬಂದಿದ್ದವು. ಬೆಂಗಳೂರು ಬೆಡಗಿ ಅನುಷ್ಕಾ ಶೆಟ್ಟಿ ಹಾಗೂ ತೆಲುಗಿನಲ್ಲಿ ಮಿಂಚುತ್ತಿರುವ ಕಾಜಲ್ ಅಗರವಾಲ್ ಚಿತ್ರಕ್ಕೆ ನಾಯಕಿಯಾಗಲಿದ್ದಾರೆ ಎನ್ನಲಾಗಿತ್ತು. ಆದರೆ ಇದೀಗ ಚಿತ್ರದ ನಿರ್ಮಾಪಕರ ಕಣ್ಣಿಗೆ ಗೋಲ್ಡನ್ ಗರ್ಲ್ ರಮ್ಯಾ ಬಿದ್ದಿದ್ದಾರೆ.

ಅಂಬಿ ಸಂಭ್ರಮದಲ್ಲಿ ದರ್ಶನ್ ಜೊತೆ ರಮ್ಯಾ ಹೆಜ್ಜೆ ಹಾಕಿದ್ದರು. "ಮೇರೆ ಸಪ್‌ನೋಂಕಿ ರಾಣಿ, ಏಯ್ ಬುಲ್ ಬುಲ್ ಮಾತಾಡಾಕಿಲ್ವಾ" ಎಂದು ನಾಗರಹಾವು ಚಿತ್ರದಲ್ಲಿ ಆರತಿಗೆ ಅಂಬರೀಷ್ ಕಿಚಾಯಿಸುತ್ತಾರೆ. ಇದೇ ಸನ್ನಿವೇಶವನ್ನು ಅಂಬಿ ಹುಟ್ಟುಹಬ್ಬ ಸಂಭ್ರಮದಲ್ಲಿ ದರ್ಶನ್ ಹಾಗೂ ರಮ್ಯಾ ಮಾಡಿದ್ದರು.

ಅವರಿಬ್ಬರ ದೃಶ್ಯ ನೋಡಿದ ಬುಲ್ ಬುಲ್ ನಿರ್ಮಾಪಕರು ಈಗ ರಮ್ಯಾರನ್ನೇ ನಾಯಕಿಯಾಗಿ ಆಯ್ಕೆ ಮಾಡಲು ನಿರ್ಧರಿಸಿದ್ದಾರಂತೆ. ಈ ಬಗ್ಗೆ ರಮ್ಯಾ ಕೂಡ ಟ್ವೀಟಿಸಿದ್ದು, "ಬುಲ್ ಬುಲ್ ಚಿತ್ರದ ಪಾತ್ರಕ್ಕಾಗಿ ನಿರ್ಮಾಪಕರು ನಮ್ಮನ್ನು ಸಂಪರ್ಕಿಸಿದ್ದು ನಿಜ. ಆದರೆ ಇನ್ನೂ ಅಂತಿಮವಾಗಿಲ್ಲ" ಎಂದಿದ್ದಾರೆ.

ದರ್ಶನ್ ಮತ್ತು ನಾನು ಆರು ವರ್ಷಗಳ ಹಿಂದೆ ದತ್ತ ಚಿತ್ರದಲ್ಲಿ ಅಭಿನಯಿಸಿದ್ದೆವು. ಈಗ ಮತ್ತೊಮ್ಮೆ ಅವರ ಜೊತೆ ಅಭಿನಯಿಸಲು ಉತ್ಸುಕಳಾಗಿದ್ದೇನೆ ಎಂದು ಸಣ್ಣ ಸುಳಿವನ್ನು ಬಿಟ್ಟಿಕೊಟ್ಟಿದ್ದಾರೆ ರಮ್ಯಾ. ಬುಲ್ ಬುಲ್ ರೀಮೇಕ್ ಚಿತ್ರ ಎಂಬುದರಲ್ಲಿ ಯಾವುದೇ ಅನುಮಾನ ಬೇಡ. ಆದರೆ ಕನ್ನಡದ ನೇಟಿವಿಟಿಗೆ ತಕ್ಕಂತೆ ಕೊಂಚ ಬದಲಾವಣೆಗಳನ್ನು ಮಾಡಿಕೊಳ್ಳಲಾಗುತ್ತದಂತೆ.

ತೆಲುಗು ಚಿತ್ರ 'ಡಾರ್ಲಿಂಗ್', ಕನ್ನಡದಲ್ಲಿ 'ಬುಲ್ ಬುಲ್' ಎಂಬ ಹೆಸರಿನಲ್ಲಿ ರೀಮೇಕ್ ಆಗಿ ಬರಲಿದೆ. ತೆಲುಗಿನಲ್ಲಿ ಸೂಪರ್ ಹಿಟ್ ಆಗಿದ್ದ ಈ ಚಿತ್ರವನ್ನು ಕನ್ನಡದಲ್ಲಿ ನಿರ್ದೇಶಿಸುತ್ತಿದ್ದಾರೆ ಎಂ ಡಿ ಶ್ರೀಧರ್. ಬುಲ್ ಬುಲ್ ಚಿತ್ರ ದರ್ಶನ್ ಹೋಮ್ ಬ್ಯಾನರ್ ನಲ್ಲಿ ನಿರ್ಮಾಣವಾಗುತ್ತಿದ್ದು, ನಿರ್ಮಾಪಕನ ಸ್ಥಾನದಲ್ಲಿ ಸಹಜವಾಗಿ ದರ್ಶನ್ ತಮ್ಮ ಹಾಗೂ ಸಾರಥಿ ನಿರ್ದೇಶಕ ದಿನಕರ್ ಕುಳಿತಿದ್ದಾರೆ. ವಿ ಹರಿಕೃಷ್ಣ, ಬುಲ್ ಬುಲ್ ಚಿತ್ರದ ಸಂಗೀತ ನಿರ್ದೇಶಕ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆ ರೆಬೆಲ್ ಸ್ಟಾರ್ ಅಂಬರೀಷ್ ಕೂಡ ಈ ಚಿತ್ರದಲ್ಲಿ ನಟಿಸಲಿದ್ದಾರೆ. ದರ್ಶನ್ ತಂದೆ ಪಾತ್ರದಲ್ಲಿ ಅಂಬರೀಷ್ ಕಾಣಿಸಿಕೊಳ್ಳಲಿದ್ದಾರೆ ಎಂಬುದು ದೊರೆತ ಮಾಹಿತಿ. ಎಂಡಿ ಶ್ರೀಧರ್ ಈ ಹಿಂದೆ ದರ್ಶನ್‌ ಅಭಿನಯದ ಪೊರ್ಕಿ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದರು. (ಏಜೆನ್ಸೀಸ್)

English summary
In a recent development Golden Girl has been approached to do the film opposite Darshan in 'Bulbul'. "Yes, the makers of Bulbul have approached me with a role. Nothing has been finalized. Darshan and I last did a film six years ago called Datta. It would be nice to work with him again" says Ramya.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada