For Quick Alerts
  ALLOW NOTIFICATIONS  
  For Daily Alerts

  ಅಂಬರೀಶ್ ಧ್ಯಾನದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್

  By Rajendra
  |

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಸದ್ಯಕ್ಕೆ 'ಬೃಂದಾವನ'ದಲ್ಲಿ ವಿಹರಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಐಸ್ ಲ್ಯಾಂಡ್ ಗೂ ಹೋಗಿ ಬಂದಿದ್ದಾರೆ. ಅಂದರೆ ಬೃಂದಾವನ ಚಿತ್ರೀಕರಣಕ್ಕಾಗಿ. ಈಗ ಅವರ ಧ್ಯಾನ 'ಅಂಬರೀಶ' ಮೇಲೆ ನೆಟ್ಟಿದೆ. ಆದರೆ ಪ್ರಮಾಣವಚನ ಸ್ವೀಕರಿಸಿ ಕ್ಯಾಬಿನೆಟ್ ದರ್ಜೆ ಸಚಿವರಾಗಿರು ರೆಬಲ್ ಸ್ಟಾರ್ ಅಂಬರೀಶ್ ಮೇಲಲ್ಲ.

  ದರ್ಶನ್ ಮುಂದಿನ ಚಿತ್ರದ ಹೆಸರೇ 'ಅಂಬರೀಶ'. ದರ್ಶನ್ ಮುಂದಿನ ಚಿತ್ರ ಗ್ಯಾರಂಟಿಯಾಗಿದ್ದರೂ ಶೂಟಿಂಗ್ ಡೀಟೇಲ್ಸ್ ಮಾತ್ರ ಇನ್ನೂ ಅಂತಿಮವಾಗಿಲ್ಲ. ಅಂಬರೀಶನಿಗೆ ಆಕ್ಷನ್ ಕಟ್ ಹೇಳುತ್ತಿರುವವರು ಮಹೇಶ್ ಸುಖಧರೆ.

  ಇದೊಂದು ಪಕ್ಕಾ ಕಮರ್ಷಿಯಲ್ ಎಂಟರ್ ಟೇನರ್ ಎನ್ನುತ್ತಾರೆ ಮಹೇಶ್. ತಮ್ಮ ಚಿತ್ರಕ್ಕೂ ಭಕ್ತ ಅಂಬರೀಶ್ ಚಿತ್ರಕ್ಕೂ ಯಾವುದೇ ಲಿಂಕ್ ಇಲ್ಲ ಎಂಬುದನ್ನೂ ಸ್ಪಷ್ಟಪಡಿಸಿದ್ದಾರೆ. ರೆಬಲ್ ಸ್ಟಾರ್ ಅಂಬರೀಶ್ ಅವರ ಮೇಲಿನ ಪ್ರೀತಿಯಿಂದ ಚಿತ್ರಕ್ಕೆ ಆ ಹೆಸರನ್ನಿಟ್ಟಿದ್ದೇವೆ ಎನ್ನುತ್ತಾರೆ ದರ್ಶನ್.

  ಅಂಬರೀಶ ಚಿತ್ರದ ಪಾತ್ರವರ್ಗ, ತಾಂತ್ರಿಕ ಬಳಗದ ಆಯ್ಕೆ ನಡೆಯುತ್ತಿದೆ. ಇನ್ನು ಬೃಂದಾವನ ಚಿತ್ರದ ವಿಚಾರಕ್ಕೆ ಬರುವುದಾದರೆ ಈ ಚಿತ್ರದಲ್ಲಿ ದರ್ಶನ್ ಗೆ ಕಾರ್ತಿಕಾ ನಾಯರ್ ಜೋಡಿ. ಕೆ.ಮಾದೇಶ ಆಕ್ಷನ್ ಕಟ್ ಹೇಳುತ್ತಿರುವ ಚಿತ್ರವನ್ನು ಸುರೇಶ್ ಗೌಡ ನಿರ್ಮಿಸಿದ್ದಾರೆ. ತೆಲುಗು ಹಿಟ್ ಚಿತ್ರ ಬೃಂದಾವನ ರೀಮೇಕ್ ಇದಾಗಿದೆ. (ಏಜೆನ್ಸೀಸ್)

  English summary
  Challenging Star Darshan's next project is confirmed and the film titled as Ambareesha. But the film is related to mythological Bhakta Ambareesha says director Mahesh Sukadhare. 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X