For Quick Alerts
  ALLOW NOTIFICATIONS  
  For Daily Alerts

  ಇದು ನನ್ನ ಟೆರಿಟರಿ: 150 ಕೋಟಿ - 500 ಕೋಟಿ ಕ್ಲಬ್ ಎಲ್ಲಾ ಬೇಡ!

  |

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಹಳ ದಿನಗಳ ನಂತರ ಒಂದು ಸಂದರ್ಶನ ಕೊಟ್ಟಿದ್ದಾರೆ. ಅದೂ ಕೂಡ ಯೂಟ್ಯೂಬ್‌ ಚಾನಲ್‌ಗೆ ಅನ್ನುವುದು ವಿಶೇಷ. 'ಕ್ರಾಂತಿ' ಸಿನಿಮಾ ಬಗ್ಗೆ ಅಭಿಮಾನಿಗಳು ಮಾಡುತ್ತಿರುವ ಪ್ರಮೋಷನ್ ಬಗ್ಗೆ ದರ್ಶನ್ ಸಂದರ್ಶನದಲ್ಲಿ ಮಾತನಾಡಿದ್ದಾರೆ. ಪ್ಯಾನ್ ಇಂಡಿಯಾ ಸಿನಿಮಾ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

  ಯೂಟ್ಯೂಬ್‌ ಚಾನಲ್‌ ಒಂದರಲ್ಲಿ ದರ್ಶನ್ ಮಾತನಾಡಿದ್ದಾರೆ. ಈಗಾಗಲೇ ದರ್ಶನ್ ನಟನೆಯ 'ಕುರುಕ್ಷೇತ್ರ' ಪ್ಯಾನ್ ಇಂಡಿಯಾ ಸಿನಿಮಾ ಆಗಿ ರಿಲೀಸ್ ಆಗಿತ್ತು. 'ರಾಬರ್ಟ್' ಸಿನಿಮಾ ತೆಲುಗಿಗೆ ಡಬ್ ಆಗಿ ತೆರೆಕಂಡಿತ್ತು. 'ಕ್ರಾಂತಿ' ಕೂಡ ಪ್ಯಾನ್ ಇಂಡಿಯಾ ಸಿನಿಮಾ ಆಗಿ ರೂಪುಗೊಳ್ಳುತ್ತಿದೆ. ಶೀಘ್ರದಲ್ಲೇ ರಿಲೀಸ್ ಡೇಟ್‌ ಕೂಡ ಅನೌನ್ಸ್ ಆಗಲಿದೆ. ಬಹಳ ದಿನಗಳ ನಂತರ ನೆಚ್ಚಿನ ನಟನನ್ನು 'ಕ್ರಾಂತಿ' ಚಿತ್ರದಲ್ಲಿ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ.

  ಸದ್ಯ ಭಾರತೀಯ ಚಿತ್ರರಂಗದಲ್ಲಿ ಪ್ಯಾನ್ ಇಂಡಿಯಾ ಸಿನಿಮಾಗಳ ಜಮಾನ ಶುರುವಾಗಿದೆ. ಸೌತ್‌ ಸಿನಿಮಾಗಳು ಮಾತ್ರವಲ್ಲ ಈಗ ಬಾಲಿವುಡ್ ಸಿನಿಮಾಗಳು ಐದೈದು ಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ. 'ಕೆಜಿಎಫ್' ಸೀರಿಸ್, '777 ಚಾರ್ಲಿ', 'ವಿಕ್ರಾಂತ್ ರೋಣ' ಸಿನಿಮಾಗಳು ಪರಭಾಷೆಗಳಿಗೂ ಡಬ್ ಆಗಿ ದೇಶ ವಿದೇಶಗಳಲ್ಲಿ ಸದ್ದು ಮಾಡ್ತಿದೆ. ಇದರ ಬೆನ್ನಲ್ಲೇ ಸ್ಯಾಂಡಲ್‌ವುಡ್‌ ಸಾಕಷ್ಟು ಸಿನಿಮಾಗಳು ಪ್ಯಾನ್‌ ಇಂಡಿಯಾ ಲೆವೆಲ್‌ನಲ್ಲಿ ಸದ್ದು ಮಾಡಲು ಸಿದ್ಧವಾಗ್ತಿವೆ. ದರ್ಶನ್‌ ಕೂಡ ಪ್ಯಾನ್‌ ಇಂಡಿಯಾ ಮಾಡಬೇಕು ಅನ್ನುವುದು ಅಭಿಮಾನಿಗಳ ಆಸೆ. ಆದರೆ ಈ ಬಗ್ಗೆ ಚಾಲೆಂಜಿಂಗ್ ಸ್ಟಾರ್ ಹೇಳುವುದೇ ಬೇರೆ.

   ಇದು ನನ್ನ ಟೆರಿಟರಿ

  ಇದು ನನ್ನ ಟೆರಿಟರಿ

  ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ಗೆ ಪ್ಯಾನ್ ಇಂಡಿಯಾ ಸಿನಿಮಾಗಳ ಬಗ್ಗೆ ಆಸಕ್ತಿ ಇಲ್ಲವಂತೆ. ಇದನ್ನು ಓಪನ್ ಆಗಿಯೇ ಹೇಳಿಕೊಂಡಿದ್ದಾರೆ. "ನಾವು ನಮ್ಮ ಸಿನಿಮಾ ಡಬ್ ಮಾಡಿ ಕೊಡ್ತೀವಿ. ಆದರೆ ನಾವು ಅಲ್ಲಿ ಹೋಗಿ ಕಾಕಾ ಹೊಡೆಯೋದಿಲ್ಲ. ಇದು ನಮ್ಮ ಟೆರಿಟರಿ. ಯಾರು ಏನೇ ಹೇಳಿದ್ರು 'ಮೇರಾ ಕುತ್ತಾ ಮೇರಾ ಗಲಿ ಶೇರ್ ಹೈ' ಅನ್ನೋ ಗಾದೆ ಇದೆ. ಅಂದರೆ ನಮ್ಮ ಬೀದಿಗೆ ನಮ್ಮ ನಾಯಿನೇ ಅಂತ. ಇದು ನನ್ನ ಟೆರಿಟರಿ. ನಾನು ಇಲ್ಲಿಗೆ ಸಿನಿಮಾ ಮಾಡುತ್ತೀನಿ. ಹೊರಗಡೆಯವರಿಗೆ ಡಬ್ ಮಾಡಿ ಕೊಡ್ತಿನಿ. ಅವರು ತಗೊಂಡು ಹೋಗಿ ಹಾಕಿದ್ರು ಖುಷಿ. ಹಾಕದೇ ಇದ್ದರೂ ಖುಷಿ. 'ಕುರುಕ್ಷೇತ್ರ', 'ರಾಬರ್ಟ್' ನಾವು ಮಾಡಿ ನೋಡಿದ್ವಿ. ಅವರಿಗೂ ಅವರ ಟೆರಿಟರಿ ಇದೆ. ಸುಮ್ಮನೆ ಊಹಾಪೋಹ ನಾವು ನೋಡಿದ್ದೀವಿ. ನಾವು ಇಲ್ಲಿಗೆ ಮಾತ್ರ ಲಾಯಕ್ಕು ಇಲ್ಲಿಗೆ ಇರ್ತೀವಿ" ಎಂದಿದ್ದಾರೆ.

   ಮತ್ತೊಬ್ಬರ ಬಳಿ ಭಿಕ್ಷೆ ಬೇಡಬೇಕು!

  ಮತ್ತೊಬ್ಬರ ಬಳಿ ಭಿಕ್ಷೆ ಬೇಡಬೇಕು!

  ಪ್ಯಾನ್ ಇಂಡಿಯಾ ಸಿನಿಮಾಗಳ ಬಗ್ಗೆ ಮಾತು ಮುಂದುವರೆಸಿದ ದರ್ಶನ್, "ಮೊದಲೇ ಹೇಳಿದಂತೆ ಇದು ನನ್ನ ಟೆರಿಟರಿ. ಪ್ಯಾನ್ ಇಂಡಿಯಾ ಅಂದರೆ ನಾವು ಇನ್ನೊಬ್ಬರ ಬಳಿ ಭಿಕ್ಷೆ ಬೇಡಬೇಕು. ಯಾಕೆ ಹೇಳುತ್ತಿದ್ದೀನಿ ಅಂದರೆ ಇದು ನನ್ನ ಸ್ವಾರ್ಥ. ಜೊತೆಗೆ ಸ್ವಾಭಿಮಾನ ಕೂಡ. ನಾನು ಹೋಗಿ ಅಲ್ಲೊಬ್ಬರ ಭಿಕ್ಷೆ ಬೇಡುತ್ತೀನಿ. ಅವನ ಸಿನಿಮಾ ಬಂದಾಗ ನಾನಿಲ್ಲಿ ಅವನ ಸಿನಿಮಾಗೆ ಸಪೋರ್ಟ್ ಮಾಡಬೇಕು. ನಾನ್ಯಾಕೆ ಮಾಡಲಿ?. ಹಾಗಾಗಿ ನಾನು ಹೀಗೆ ಇದ್ದೀನಿ. ಹೀಗೆ ಇರ್ತೀನಿ" ಎಂದರು.

   ಎಲ್ಲಿ ಕೂಯ್ತಾರೆ ಗೊತ್ತಾಗಲ್ಲ!

  ಎಲ್ಲಿ ಕೂಯ್ತಾರೆ ಗೊತ್ತಾಗಲ್ಲ!

  ಇನ್ನು ಪರಭಾಷಿಕರು ಯಾವ ರೀತಿ ನಡೆದುಕೊಳ್ತಾರೆ ಅನ್ನುವುದನ್ನು ತಮ್ಮದೇ ಸ್ಟೈಲ್‌ನಲ್ಲಿ ದರ್ಶನ್ ವಿವರಿಸಿದ್ದಾರೆ. "ತುಂಬಾ ಚೆನ್ನಾಗಿ ಮಾತಾಡಿಸ್ತಾರೆ. ಪಕ್ಕದಲ್ಲೇ ಇರ್ತಾರೆ. ಅವರು ಎಲ್ಲಿ ಕೂಯ್ತಾರೆ ಅನ್ನುವುದೇ ಗೊತ್ತಾಗಲ್ಲ. ನೀವು ಊಟ ಮಾಡುತ್ತಿರುತ್ತೀರಾ. ನಿಮ್ಮತ್ರ ಇಷ್ಟೆ ಇರೋದು, ನಿಮ್ ತಟ್ಟೆಗೆ ನಾನ್ ಕೈ ಹಾಕಿದರೆ ಸುಮ್ಮನಿರ್ತೀರಾ.? ಇಲ್ಲ ಅಲ್ವಾ? ಹಾಗೆನೆ ಅವರು ಅಲ್ಲಿ ಕರೀತಾರೆ. ಎಲ್ಲಾ ಮಾಡ್ತಾರೆ. ಆದರೆ ಎಲ್ಲಿ ಚೆಕ್ ಇಡಬೇಕು ಅಲ್ಲಿ ಇಟ್ಟು ಹೊರಟು ಹೋಗ್ತಾರೆ. ಗೊತ್ತೇ ಆಗೋದಿಲ್ಲ. ಅಮೇಲೆ ಗೊತ್ತಾಗುತ್ತೆ ಯಾರು ಕೂಯ್ದು ಬಿಟ್ಟಿದ್ದಾರೆ ಅಂತ. ಯಾಕೆ ಬೇಕು?" ಎಂದು ವಿವರವಾಗಿ ತಿಳಿಸಿದ್ದಾರೆ.

   500 ಕೋಟಿ ಕ್ಲಬ್ ಎಲ್ಲಾ ಬೇಡ!

  500 ಕೋಟಿ ಕ್ಲಬ್ ಎಲ್ಲಾ ಬೇಡ!

  "ಕಲೆಕ್ಷನ್ ಜಸ್ಟ್‌ ನಂಬರ್. ನನ್ನ ಖುಷಿ. ನನ್ನ ಉದ್ದೇಶ ಮೊದಲಿನಿಂದ ಏನು ಅಂದರೆ, ನಿರ್ಮಾಪಕ ನನ್ನ ಮೇಲೆ ಇಷ್ಟು ದುಡ್ಡು ಹಾಕಿದರೆ, ಅದರ ಮೇಲೆ ಒಂದಿಷ್ಟು ಲಾಭ ಸಿಕ್ಕಿದರೆ ಸಾಕು. 150 ಕೋಟಿ ಕ್ಲಬ್‌ಗೆ ಸೇರಬೇಕು, 500 ಕೋಟಿ ಕ್ಲಬ್‌ಗೆ ಸೇರಿಬೇಕು ಅನ್ನೋದೆಲ್ಲಾ ಇಲ್ಲ. ನಮ್ಮ ಟೆರಿಟರಿ ಅಲ್ಲಿ ನಮಗೆ ಎಷ್ಟು ಸೇರುತ್ತೆ ಗೊತ್ತು. ಅಷ್ಟು ಸಾಕು. ಆಮೇಲೆ ಹೊರಗಡೆಯದ್ದು ಯಾವುದೇ ಲೆಕ್ಕ ಸಿಗಲ್ಲ. ಅದೆಲ್ಲ ಬುಲ್‌ಶಿಟ್. ಯಾವ್ ನನ್ ಮಗಾನೂ ನಿಮಗೆ ಲೆಕ್ಕ ಕೊಡಲ್ಲ ಅಲ್ಲಿ. ಬೇಕಿದ್ದರೆ ಎಕ್ಸ್‌ಟ್ರಾ ಲೆಕ್ಕ ಹೇಳ್ತಾನೆ ಹೊರತು ಕೊಡಲ್ಲ" ಅಂತ ಅಕ್ಕ ಪಕ್ಕ ರಾಜ್ಯಗಳಲ್ಲಿ ಸಿನಿಮಾ ಕಲೆಕ್ಷನ್ ಬಗ್ಗೆ ಹೇಳಿದರು.

   ಚೆನ್ನಾಗಿ ಕೂಯ್ದು ಕಳಿಸ್ತೀನಿ!

  ಚೆನ್ನಾಗಿ ಕೂಯ್ದು ಕಳಿಸ್ತೀನಿ!

  ಪರಭಾಷಾ ನಿರ್ಮಾಪಕರ ಜೊತೆ ಸಿನಿಮಾ ಮಾಡುವುದರ ಬಗ್ಗೆ ಕೂಡ ದರ್ಶನ್ ಮಾತನಾಡಿದ್ದಾರೆ. "ನಮ್ಮ ಕನ್ನಡ ಪ್ರೊಡ್ಯೂಸರ್ ಆದರೆ ಅವ್ರಿಗೆ ಒಂದು ರೇಟ್, ಹೊರಗಡೆಯಿಂದ ಬರುವವರಿಗೆ ಚೆನ್ನಾಗಿ ಕೂಯ್ದುಬಿಟ್ಟೆ ಕಳಿಸೋದು ನಾನು. ಯಾಕಂದರೆ ಅವನು ಇಲ್ಲಿ ಸಿನಿಮಾ ಮಾಡ್ತಾನೆ. ದುಡ್ಡು ಮಾಡ್ತಾನೆ ಮತ್ತೆ ಅಲ್ಲಿಗೆ ಓಡಿ ಹೋಗ್ತಾನೆ. ನಮ್ಮ ಪ್ರೊಡ್ಯೂಸರ್ ಇಲ್ಲೇ ಇರ್ತಾರೆ. ಇಲ್ಲೇ ಸಿನಿಮಾಗೆ ಕಾಸು ಹಾಕ್ತಾರೆ. ನಾನು ಎಲ್ಲಾ ಕಲಾವಿದರು, ತಂತ್ರಜ್ಞರಿಗೂ ಹೇಳಿಕೊಡ್ತೀನಿ. ಕುರಿ ಬಂದಿದೆ, ಚೆನ್ನಾಗಿ ಕೂಯ್ದುಕೊಳ್ಳಿ ಅಂತ. 10 ರೂಪಾಯಿ ಇದ್ದರೂ 100 ರೂಪಾಯಿ ಕುಯ್ಯೋ ನೀನು ಅಂತೀನಿ. ತಪ್ಪೇನಿದೆ" ಅಂತ ಓಪನ್ ಆಗಿ ಹೇಳಿದ್ದಾರೆ.

  English summary
  Challenging Star Darshan Open Talk About Pan India Movies. Know More.
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X