For Quick Alerts
  ALLOW NOTIFICATIONS  
  For Daily Alerts

  ಬಾಯ್ತಪ್ಪಿ 'ಕ್ರಾಂತಿ' ಸಿನಿಮಾ ಬಜೆಟ್ ಎಷ್ಟು ಎಂದು ಹೇಳಿಬಿಟ್ಟರು ಚಾಲೆಂಜಿಂಗ್ ಸ್ಟಾರ್ ದರ್ಶನ್!

  |

  ಬಾಕ್ಸಾಫೀಸ್ ಸುಲ್ತಾನ್ ದರ್ಶನ್ ನಟನೆಯ 'ಕ್ರಾಂತಿ' ಸಿನಿಮಾ ಬಿಡುಗಡೆಗೆ ದಿನಗಣನೆ ಶುರುವಾಗಿದೆ. ಪ್ರಮೋಷನ್ ಭಾಗವಾಗಿ ದರ್ಶನ್ ಸಾಕಷ್ಟು ಸಂದರ್ಶನಗಳನ್ನು ನೀಡುತ್ತಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡುತ್ತಾ ಸಿನಿಮಾ ಬಜೆಟ್ ಎಷ್ಟು ಎನ್ನುವುದನ್ನು ದರ್ಶನ್ ರಿವೀಲ್ ಮಾಡಿದ್ದಾರೆ.

  ಸಾಮಾನ್ಯವಾಗಿ ದೊಡ್ಡ ದೊಡ್ಡ ಸಿನಿಮಾಗಳ ಬಜೆಟ್ ಹಾಗೂ ಕಲೆಕ್ಷನ್ ವಿಚಾರಗಳು ಗುಟ್ಟಾಗಿಯೇ ಇರುತ್ತದೆ. ನಿರ್ಮಾಪಕರು ಈ ಬಗ್ಗೆ ಯಾವುದೇ ಕಾರಣಕ್ಕೂ ಗುಟ್ಟು ಬಿಟ್ಟುಕೊಡುವುದಿಲ್ಲ. ಬರೀ ಅಂದಾಜು ಲೆಕ್ಕಾಚಾರ ಮಾತ್ರ ಚರ್ಚೆ ಆಗುತ್ತಿರುತ್ತದೆ. ಬಹುಕೋಟಿ ವೆಚ್ಚದಲ್ಲಿ 'ಕ್ರಾಂತಿ' ಸಿನಿಮಾ ನಿರ್ಮಾಣ ಆಗುತ್ತಿದೆ. 'ಯಜಮಾನ' ಸಿನಿಮಾ ಮಾಡಿದ್ದ ಅದೇ ತಂಡ ಈ ಚಿತ್ರಕ್ಕೂ ಕೆಲಸ ಮಾಡುತ್ತಿದೆ. ಶೈಲಜಾ ನಾಗ್ ಹಾಗೂ ಬಿ. ಸುರೇಶ್ ಬಹಳ ಅದ್ಧೂರಿಯಾಗಿ ಸಿನಿಮಾ ನಿರ್ಮಾಣ ಮಾಡಿದ್ದಾರೆ.

  'ಧರಣಿ' ಸಾಂಗ್ ಝಲಕ್ ಹೇಗಿದೆ? ಚಾಲೆಂಜಿಂಗ್ ಸ್ಟಾರ್ ದರ್ಶನ್ ಸೆಲೆಬ್ರೆಟಿಗಳಲ್ಲಿ ಮನವಿ ಮಾಡಿದ್ದೇನು?'ಧರಣಿ' ಸಾಂಗ್ ಝಲಕ್ ಹೇಗಿದೆ? ಚಾಲೆಂಜಿಂಗ್ ಸ್ಟಾರ್ ದರ್ಶನ್ ಸೆಲೆಬ್ರೆಟಿಗಳಲ್ಲಿ ಮನವಿ ಮಾಡಿದ್ದೇನು?

  ಬಹುತೇಕ ಸೆಟ್‌ಗಳಲ್ಲೇ 'ಕ್ರಾಂತಿ' ಚಿತ್ರೀಕರಣ ನಡೆದಿದೆ. ಪೋಲ್ಯಾಂಡ್‌ನಲ್ಲೂ ಚಿತ್ರದ ಒಂದಷ್ಟು ಸನ್ನಿವೇಶಗಳ ಜೊತೆಗೆ ಒಂದು ಹಾಡನ್ನು ಶೂಟ್ ಮಾಡಿದ್ದಾರೆ. ಇಲ್ಲಿ ಶೂಟ್ ಮಾಡಿದ್ದ ಹಾಡನ್ನು ವಿದೇಶದಲ್ಲಿ ರೀಶೂಟ್ ಕೂಡ ಮಾಡಿದ್ದಾರಂತೆ. ಹಾಗಾಗಿ ಖರ್ಚು ಹೆಚ್ಚಾಗಿರುವ ಸಾಧ್ಯತೆಯಿದೆ.

  'ಕ್ರಾಂತಿ' ಬಜೆಟ್ ₹50 ಕೋಟಿ

  'ಕ್ರಾಂತಿ' ಬಜೆಟ್ ₹50 ಕೋಟಿ

  ಬಹುಕೋಟಿ ವೆಚ್ಚದಲ್ಲಿ 'ಕ್ರಾಂತಿ' ಸಿನಿಮಾ ನಿರ್ಮಾಣವಾಗುತ್ತಿರುವುದು ಗೊತ್ತೇಯಿದೆ. ದೇಶ ವಿದೇಶದಲ್ಲಿ ಸಿನಿಮಾ ಚಿತ್ರೀಕರಣ ನಡೆದಿದೆ. 25 ವರ್ಷಗಳ ಹಿಂದಿನ ಕಮರ್ಷಿಯಲ್ ಚಿತ್ರಗಳು ಹಾಗೂ ಇವತ್ತಿನ ಕಮರ್ಷಿಯಲ್ ಚಿತ್ರಗಳ ನಡುವಿನ ವ್ಯತ್ಯಾಸದ ಬಗ್ಗೆ ಅಪ್‌ಡೇಟ್ ಮಗಾ ಯೂಟ್ಯೂಬ್‌ ಸಂದರ್ಶನದಲ್ಲಿ ದರ್ಶನ್ ಮಾತನಾಡಿದ್ದಾರೆ. ಈ ವೇಳೆ ಅಂದು 'ಮೆಜೆಸ್ಟಿಕ್' ಚಿತ್ರವನ್ನು 39 ಲಕ್ಷ ಬಜೆಟ್‌ನಲ್ಲಿ ಮಾಡಿದ್ದೆವು. ಈಗ 'ಕ್ರಾಂತಿ' ಚಿತ್ರವನ್ನು 50 ಕೋಟಿ ಬಜೆಟ್‌ನಲ್ಲಿ ಮಾಡಿದ್ದೇವೆ ಎಂದಿದ್ದಾರೆ.

  ಈ ಚಿತ್ರಮಂದಿರದಲ್ಲಿ ಅಣ್ಣಾವ್ರ ಚಿತ್ರದಷ್ಟೇ ಹೌಸ್‌ಫುಲ್ ಪ್ರದರ್ಶನವನ್ನು 'ದಾಸ' ಕಂಡಿತ್ತು: ದರ್ಶನ್ಈ ಚಿತ್ರಮಂದಿರದಲ್ಲಿ ಅಣ್ಣಾವ್ರ ಚಿತ್ರದಷ್ಟೇ ಹೌಸ್‌ಫುಲ್ ಪ್ರದರ್ಶನವನ್ನು 'ದಾಸ' ಕಂಡಿತ್ತು: ದರ್ಶನ್

  ಮೇಕಿಂಗ್ ಸ್ಟೈಲ್ ಬದಲಾಗಿದೆ

  ಮೇಕಿಂಗ್ ಸ್ಟೈಲ್ ಬದಲಾಗಿದೆ

  'ಮೆಜೆಸ್ಟಿಕ್' ಬಜೆಟ್ 39 ಲಕ್ಷ, 'ಕ್ರಾಂತಿ' ಬಜೆಟ್ 50 ಕೋಟಿ ಎರಡನ್ನೂ ಹೋಲಿಸಲು ಸಾಧ್ಯವಿಲ್ಲ. ದಿನದಿಂದ ದಿನಕ್ಕೆ ಸಿನಿಮಾ ನಿರ್ಮಾಣ ತಂತ್ರಜ್ಞಾನ ಬೆಳೀತಿದೆ. ಅದಕ್ಕೆ ತಕ್ಕಂತೆ ಸಿನಿಮಾ ಮೇಕಿಂಗ್ ಸ್ಟೈಲ್ ಕೂಡ ಬದಲಾಗುತ್ತಿದೆ. ಎಲ್ಲದಕ್ಕೂ ನಾವು ಅಪ್‌ಡೇಟ್ ಆಗುತ್ತಾ ಹೋಗಬೇಕು" ಎಂದು ದರ್ಶನ್ ಹೇಳಿದ್ದಾರೆ. ಚಿತ್ರದಲ್ಲಿ ರಚಿತಾರಾಮ್, ಕ್ರೇಜಿಸ್ಟಾರ್ ರವಿಚಂದ್ರನ್ ಸೇರಿದಂತೆ ದೊಡ್ಡ ತಾರಾಗಣ ಇದೆ.

  14 ಸೆಟ್‌ಗಳನ್ನು ಹಾಕಿ ಚಿತ್ರೀಕರಣ

  14 ಸೆಟ್‌ಗಳನ್ನು ಹಾಕಿ ಚಿತ್ರೀಕರಣ

  'ಕ್ರಾಂತಿ' ಸಿನಿಮಾ ಬಜೆಟ್ ಹೆಚ್ಚಾಗಲು ಕಾರಣ ಒಂದು ಕಲಾವಿದರ ಸಂಭಾವನೆ. ಮತ್ತೊಂದು ಚಿತ್ರೀಕರಣಕ್ಕಾಗಿ ಹಾಕಿರುವ ಸೆಟ್‌ಗಳು. 14 ಬೇರೆ ಬೇರೆ ರೀತಿಯ ಸೆಟ್‌ಗಳನ್ನು ಹಾಕಿ ಚಿತ್ರದ ಚಿತ್ರೀಕರಣ ನಡೆಸಲಾಗಿದೆ. ದುರ್ಗಾ ತಾಲೂಕಿನ ಪೇಟೆ ಬೀದಿಯ ವಿದ್ಯಾಮಂದಿರ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಬಹುತೇಕ ಸಿನಿಮಾ ಕಥೆ ನಡೆಯುತ್ತದೆ. ಭಾರೀ ವೆಚ್ಚದಲ್ಲಿ ಬಹಳ ವಿಸ್ತಾರವಾದ ಜಾಗದಲ್ಲಿ ಈ ಶಾಲೆಯ ಸೆಟ್ ಹಾಕಿ ಚಿತ್ರೀಕರಣ ನಡೆಸಲಾಗಿದೆ.

  ಅಕ್ಷರ 'ಕ್ರಾಂತಿ'ಯ ಕಥೆ

  ಅಕ್ಷರ 'ಕ್ರಾಂತಿ'ಯ ಕಥೆ

  ಸರ್ಕಾರಿ ಶಾಲೆಗಳ ಕುರಿತು ಚಿತ್ರದಲ್ಲಿ ಚರ್ಚಿಸಲಾಗಿದೆ. ಸರ್ಕಾರಿ ಶಾಲೆಯಲ್ಲಿ ಓದಿ ದೊಡ್ಡಮಟ್ಟಕ್ಕೆ ಬೆಳೆದ ನಾಯಕ ಮತ್ತೆ ವಾಪಸ್ ಬಂದು ತನ್ನ ಶಾಲೆಗಾಗಿ ಸೇವೆ ಸಲ್ಲಿಸುವ ಕಥೆ ಚಿತ್ರದಲ್ಲಿದೆ. ಇದೇ ಚಿತ್ರದ ಒನ್‌ಲೈನ್ ಸ್ಟೋರಿ ಎಂದು ಇತ್ತೀಚೆಗೆ ದರ್ಶನ್ ಹೇಳಿದ್ದರು. ಜನವರಿ 26ಕ್ಕೆ ಗಣರಾಜ್ಯೋತ್ಸವ ಸಂಭ್ರಮದಲ್ಲಿ 'ಕ್ರಾಂತಿ' ಸಿನಿಮಾ ತೆರೆಗೆ ಬರಲಿದೆ. ಶನಿವಾರ 'ಕ್ರಾಂತಿ' ಚಿತ್ರದ 'ಧರಣಿ' ಸಾಂಗ್ ರಿಲೀಸ್ ಆಗಲಿದೆ.

  English summary
  Challenging Star Darshan reveals Kranti Movie budget. Most awaited film Kranti is set to open in theatres on January 26, 2023. Know more.
  Tuesday, December 6, 2022, 17:09
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X