»   » ದರ್ಶನ್ ನಿರ್ಮಾಪಕರ ಕಾಳಜಿಗೆ ಬೇರೆ ಸಾಕ್ಷಿ ಬೇಕೆ?

ದರ್ಶನ್ ನಿರ್ಮಾಪಕರ ಕಾಳಜಿಗೆ ಬೇರೆ ಸಾಕ್ಷಿ ಬೇಕೆ?

By: ಶ್ರೀರಾಮ್ ಭಟ್
Subscribe to Filmibeat Kannada
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಈಗ ಸಿಕ್ಕಾಪಟ್ಟೆ ಡಿಮ್ಯಾಂಡ್ ಇದೆ. ಆದರೂ ಅವರ ಸಿನಿಮಾಗಳು ತೆರೆಗೆ ಬಾರದೇ ತುಂಬಾ ಕಾಲವಾಯ್ತು! 'ಚಿಂಗಾರಿ' ನಂತರ ದರ್ಶನ್ ಅಭಿನಯದ ಯಾವ ಚಿತ್ರವೂ ತೆರೆಗೆ ಬಂದಿಲ್ಲ. ಎಲ್ಲೋ ಆಡಿಯೋ ಬಿಡುಗಡೆ, ಅಥವಾ ಕ್ರಿಕೆಟ್ ಹೀಗೆ ಬೇರೆ ಬೇರೆ ವಿಷಯಗಳಿಗೆ ದರ್ಶನ್ ನಿರಂತರ ಸುದ್ದಿಯಲ್ಲಿದ್ದಾರೆ. ದರ್ಶನ್ ಎಲ್ಲೇ ಹೋಗಲಿ, ಏನೆ ಮಾಡಲಿ, ಭಾರಿ ಸುದ್ದಿಯಾಗುತ್ತಿದೆ ಅಷ್ಟೇ!

ಹಾಗಿದ್ದರೆ ಇಷ್ಟೊಂದು ಬೇಡಿಕೆಯಿರುವ ನಟ ದರ್ಶನ್ ಚಿತ್ರ ಇಷ್ಟೊಂದು ಕಾಲ ಬಾರದಿರಲು ಕಾರಣವವೇನು? ಈ ಬಗ್ಗೆ ದರ್ಶನ್ ಹೇಳುವುದು ಹೀಗೆ...'ಚಿಂಗಾರಿ' ಚಿತ್ರದ ನಂತರ ನನ್ನ ಇನ್ನೊಂದು ಸಿನಿಮಾ ಬರಬೇಕಿತ್ತು. ಆದರೆ ಗ್ಯಾಪ್ ಜಾಸ್ತಿ ಇಡುವುದು ಅನಿವಾರ್ಯವಾಯಿತು. ಬರಲಿರುವ ಚಿತ್ರ 'ಸಂಗೊಳ್ಳಿ ರಾಯಣ್ಣ' ಸಾಧಾರಣವಾದ ಚಿತ್ರವಲ್ಲ, ಭಾರಿ ಬಜೆಟ್ ಹಾಕಿರುವ ಅದ್ದೂರಿ ಚಿತ್ರ. 

ಎರಡು ಮೂರು ಚಿತ್ರಗಳಿಗಾಗುವಷ್ಟು ಬಂಡವಾಳವನ್ನು ನಿರ್ಮಾಪಕರು ಇದೊಂದೇ ಚಿತ್ರಕ್ಕೆ ಹಾಕಿದ್ದಾರೆ. ಅವರು ಹಾಕಿದ ಹಣ ವಾಪಸ್ ಬರಬೇಕೆಂದರೆ 'ಸಂಗೊಳ್ಳಿ ರಾಯಣ್ಣ'ನ ಚಿತ್ರದ ಮೊದಲು ಅಥವಾ ನಂತರ ನನ್ನ ಇನ್ನೊಂದು ಚಿತ್ರ ತೆರೆಗೆ ಬರಬಾರದು. ಆ ಕಾಳಜಿ ನನಗೆ ಇರಲೇಬೇಕಾದದ್ದು, ಇದೆ. ನನ್ನನ್ನು ನಂಬಿ ಸಿನಿಮಾ ಮಾಡುವ ನಿರ್ಮಾಪಕರಿಗೆ ಯಾವುದೇ ರೀತಿಯಲ್ಲೂ ತೊಂದರೆ ಆಗಬಾರದು" ಎಂದು ಮಾಧ್ಯಮದ ಪ್ರಶ್ನೆಯೊಂದಕ್ಕೆ ದರ್ಶನ್ ಉತ್ತರಿಸಿದ್ದಾರೆ.

ಮುಂದುವರಿದ ದರ್ಶನ್, "ಸದ್ಯಕ್ಕೆ ನನಗಿರುವ ಬೇಡಿಕೆಗೆ ಇನ್ನು ನಾಲ್ಕೈದು ವರ್ಷಗಳಿಗೆ ಆಗುವಷ್ಟು ಸಿನಿಮಾಗಳಿಗೆ ಸಹಿ ಮಾಡಬಹುದು. ಆದರೆ ಹಾಗೆ ಮಾಡಿದರೆ ನಿರ್ಮಾಪಕರಿಗೆ ಭಾರಿ ತೊಂದರೆಯಾಗುತ್ತದೆ. ನನ್ನನ್ನು ನಂಬಿ ನಿರ್ಮಾಪಕರು ಎಂಟು ಹತ್ತು ಕೋಟಿಯನ್ನು ತಮ್ಮ ಚಿತ್ರಗಳಿಗೆ ಸುರಿದಿರುತ್ತಾರೆ. ನಂತರ ಬಿಡುಗಡೆ ಒಂದಾದಮೇಲೆ ಇನ್ನೊಂದು ಎಂದಾದಾಗ ಹಣ ಹಾಕಿದ ನಿರ್ಮಾಪಕರ ಗತಿ ಏನಾಗಬೇಕು?

ಇಷ್ಟೇ ಅಲ್ಲ, ಪ್ರೇಕ್ಷಕರೂ ಕೂಡ ಈಗ ಸ್ಟಾರ್ ನಟರೊಬ್ಬರ ಮೂರ್ನಾಲ್ಕು ಚಿತ್ರಗಳನ್ನು ಒಂದೇ ವರ್ಷದ ಅವಧಿಯಲ್ಲಿ ನೋಡಲು ಇಷ್ಟಪಡುವುದಿಲ್ಲ. ಸ್ಟಾರ್ ನಟರ ಸಿನಿಮಾ ಚೆನ್ನಾಗಿರಬೇಕೆಂದು ಇಷ್ಟಪಡುತ್ತಾರೆ. ಹೀಗಾಗಿ ವರ್ಷದಲ್ಲಿ ನಾಲ್ಕೈದು ಸಿನಿಮಾಗಳು ಬಂದರೆ ಯಾವುದೂ ಹೌಸ್ ಫುಲ್ ಪ್ರದರ್ಶನ ಕಾಣದೇ ಹಣ ಹಾಕಿದ ನಿರ್ಮಾಪಕರಿಗೆ ಮೋಸವಾಗುತ್ತದೆ" ಎಂದಿದ್ದಾರೆ ದರ್ಶನ್. ದರ್ಶನ್ ಗಿರುವ ನಿರ್ಮಾಪಕ ಕಾಳಜಿಗೆ ಇದಕ್ಕಿಂತ ಸಾಕ್ಷಿ ಬೇಕೆ? (ಒನ್ ಇಂಡಿಯಾ ಕನ್ನಡ)

English summary
Challenging Star Darshan told that his upcoming movie "Sangolli Rayanna" is of High Budget. So his movie didn't come before this and also he wont allow to release any movie immediately after the Sangolli Rayanna release. 
 
Please Wait while comments are loading...