»   » ಐದು ವರ್ಷದ ಬಳಿಕ ಮತ್ತೆ ಮಾಡುವೆ: ದರ್ಶನ್ ಮಾತು

ಐದು ವರ್ಷದ ಬಳಿಕ ಮತ್ತೆ ಮಾಡುವೆ: ದರ್ಶನ್ ಮಾತು

Posted By:
Subscribe to Filmibeat Kannada
<ul id="pagination-digg"><li class="next"><a href="/news/darshan-sangolli-rayanna-success-naganna-ananda-appugol-069540.html">Next »</a></li></ul>

ಕನ್ನಡದಲ್ಲಿ ಐತಿಹಾಸಿಕ ಹಾಗೂ ಪೌರಾಣಿಕ ಚಿತ್ರಗಳು ಬರುವುದು ಅಪರೂಪ ಎಂಬುದು ಎಲ್ಲರಿಗೂ ಗೊತ್ತಿರುವ ಸಮಾಚಾರ. ಕನ್ನಡದಲ್ಲಿ ಮಾತ್ರವಲ್ಲ, ಬೇರೆ ಭಾಷೆಗಳಲ್ಲಿ ಕೂಡ ಇಂತಹ ಚಿತ್ರಗಳು ಬರುವುದು ತೀರಾ ಕಡಿಮೆ. ಬಂದರೂ ಚಿತ್ರ ಯಶಸ್ವಿಯಾಗುವುದು ಅಷ್ಟಕಷ್ಟೇ. ಕನ್ನಡದಲ್ಲಿ ಇತ್ತೀಚಿನ ವರ್ಷಗಳಲ್ಲಿ ಬಂದ ಐತಿಹಾಸಿಕ ಚಿತ್ರವೆಂದರೆ ಅದು ಶಿವರಾಜ್ ಕುಮಾರ್ ನಟನೆಯ 'ಗಂಡುಗಲಿ ಕುಮಾರರಾಮ'. ಆದರೆ ಆ ಚಿತ್ರ ಗೆಲ್ಲಲಿಲ್ಲ.

ಆದರೆ ಇದೀಗ ಪ್ರದರ್ಶನವಾಗುತ್ತಿರುವ ದರ್ಶನ್ ನಾಯಕತ್ವದ 'ಸಂಗೊಳ್ಳಿ ರಾಯಣ್ಣ' ಚಿತ್ರವು ಸಂಪೂರ್ಣ ಯಶಸ್ವಿ ಚಿತ್ರವಾಗಿ ಹೊರಹೊಮ್ಮಿದೆ. ಇತ್ತೀಚಿನ ಕಾಲದಲ್ಲಿ ಕನ್ನಡದಲ್ಲಿ ಮೊದಲ ಬಾರಿಗೆ ಐತಿಹಾಸಿಕ ಚಿತ್ರವೊಂದು ಈ ರೀತಿ ಭಾರಿ ಓಪನಿಂಗ್ ಪಡೆದು ಯಶಸ್ವಿಯಾಗಿರುವ ಚಿತ್ರವಾಗಿದೆ. ಹೀಗಿರುವಾಗ ಸಹಜವಾಗಿಯೇ ಚಿತ್ರತಂಡ ಖುಷಿಯಾಗಿದೆ. ಸುದ್ದಿಗೋಷ್ಠಿ ನಡೆಸಿ ಚಿತ್ರದ ಯಶಸ್ಸನ್ನು ಮಾಧ್ಯಮಗಳೊಂದಿಗೆ ಹಂಚಿಕೊಂಡಿದೆ.

ಸಂಗೊಳ್ಳಿ ರಾಯಣ್ಣ ಯಶಸ್ವಿಯಾಗಿದೆ. ಐತಿಹಾಸಿಕ ರಾಯಣ್ಣ ಪಾತ್ರದಲ್ಲಿ ನಟಿಸಿ ಜನಮನ್ನಣೆ ಪಡೆದಿರುವ ದರ್ಶನ್ ಅವರಿಗೆ ಎದುರಾದ 'ಮತ್ತೆ ಇಂತಹ ಪಾತ್ರದಲ್ಲಿ ನಟಿಸುತ್ತೀರಾ?' ಎಂಬ ಪ್ರಶ್ನೆಗೆ ಉತ್ತರವಾಗಿ ಈ ವೇಳೆ ಮಾತನಾಡಿರುವ ದರ್ಶನ್ "ಇನ್ನು ಐದು ವರ್ಷಗಳ ತನಕ ನಾನು ಮತ್ತೆ ಇಂತಹ ಐತಿಹಾಸಿಕ ಪಾತ್ರದಲ್ಲಿ ಕಾಣಿಸಿಕೊಳ್ಳುವುದಿಲ್ಲ. ಪದೇ ಪದೇ ಒಂದೇ ರೀತಿಯ ಪಾತ್ರಗಳಲ್ಲಿ ಕಾಣಿಸಿಕೊಂಡರೆ ಜನರಿಗೆ ಬೇಸರವಾಗಬಹುದು.

ಬಂದಿರುವ ಈ ಚಿತ್ರವನ್ನು ಎಲ್ಲರೂ ನೋಡಿ ಮೆಚ್ಚಿಕೊಂಡು ನಂತರ ನಿಧಾನವಾಗಿ ಎಲ್ಲರೂ ಇದನ್ನು ಮರೆಯಲಿ. ತದನಂತರವೇ ನಾನು ಇಂತಹ ಪಾತ್ರವನ್ನು ಮತ್ತೆ ಮಾಡುವ ಬಗ್ಗೆ ಯೋಚಿಸುತ್ತೇನೆ" ಎಂದಿದ್ದಾರೆ. ಸಂಗೊಳ್ಳಿ ರಾಯಣ್ಣ'ದಂತಹ ಐತಿಹಾಸಿಕ, ದೇಶಭಕ್ತ ಹಾಗೂ ಸ್ವತಂತ್ರ್ಯಯೋಧನ ಪಾತ್ರ ಸಿಕ್ಕಿದ್ದಕ್ಕೆ ನಾನು ತುಂಬಾ ಖುಷಿಯಾಗಿದ್ದೇನೆ. ಆದರೆ ಇಂತಹ ಪಾತ್ರವನ್ನೇ ಮತ್ತೆ ಮತ್ತೆ ಮಾಡುವುದು ಸರಿಯಲ್ಲ" ಎಂದು ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ ದರ್ಶನ್. ಮುಂದಿನ ಪಟು ನೋಡಿ... 

<ul id="pagination-digg"><li class="next"><a href="/news/darshan-sangolli-rayanna-success-naganna-ananda-appugol-069540.html">Next »</a></li></ul>
English summary
Challenging Star Darshan and the team shared the Joy of Success, the movie 'Sangolli Rayanna. Darshan told that he wont act in the same type of role for in coming five years. He added that repetition of the role is not good. &#13; &#13;
Please Wait while comments are loading...