»   » 'ಚಕ್ರವರ್ತಿ'ಗೆ ರಾಜ್ಯಾದ್ಯಂತ ಸಿಕ್ತು ಭರ್ಜರಿ ಓಪನಿಂಗ್

'ಚಕ್ರವರ್ತಿ'ಗೆ ರಾಜ್ಯಾದ್ಯಂತ ಸಿಕ್ತು ಭರ್ಜರಿ ಓಪನಿಂಗ್

Posted By:
Subscribe to Filmibeat Kannada

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಚಕ್ರವರ್ತಿ' ಚಿತ್ರ ಇಂದು ರಾಜ್ಯಾದ್ಯಂತ ಅದ್ಧೂರಿಯಾಗಿ ತೆರೆಕಂಡಿದೆ. ದೇಶಾದ್ಯಂತ ಸುಮಾರು 500ಕ್ಕೂ ಅಧಿಕ ಸ್ಕ್ರೀನ್ ಗಳಲ್ಲಿ ಎಂಟ್ರಿ ಕೊಟ್ಟಿರುವ 'ಚಕ್ರವರ್ತಿ'ಯನ್ನ ತಡರಾತ್ರಿಯೇ ಅಭಿಮಾನಿಗಳು ಗ್ರ್ಯಾಂಡ್ ಆಗಿ ಬರಮಾಡಿಕೊಂಡಿದ್ದಾರೆ.['ಚಕ್ರವರ್ತಿ'ಯ ದರ್ಶನಕ್ಕೂ ಮುನ್ನ ನೀವು ಗಮನಿಸಬೇಕಾದ ವಿಶೇಷತೆಗಳು]

ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಕಡೆ ಮಧ್ಯರಾತ್ರಿ 12 ಗಂಟೆಗೆ ಸಿನಿಮಾ ರಿಲೀಸ್ ಆಗಿದ್ದು, 'ಡಿ ಬಾಸ್' ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ತಮ್ಮ ನೆಚ್ಚನ ನಟ ಸಿನಿಮಾವನ್ನ ಮೊದಲ ದಿನವೇ ಮೊದಲ ಶೋನೇ ನೋಡಿ ಎಂಜಾಯ್ ಮಾಡಿದ್ದಾರೆ. ಮುಂದೆ ಓದಿ......

ರಾಜ್ಯಾದ್ಯಂತ 'ಚಕ್ರವರ್ತಿ'ಯ ಅಬ್ಬರ ಶುರು

ದರ್ಶನ್ ಅಭಿನಯದ 'ಚಕ್ರವರ್ತಿ'ಯ ಅಬ್ಬರ ರಾಜ್ಯಾದ್ಯಂತ ಶುರುವಾಗಿದೆ. ಮಧ್ಯರಾತ್ರಿಯಿಂದಲೇ ಹಬ್ಬ ಮಾಡುತ್ತಿರುವ ಅಭಿಮಾನಿಗಳು, ದರ್ಶನ್ ಸಿನಿಮಾವನ್ನ ಗ್ರ್ಯಾಂಡ್ ಆಗಿ ಸ್ವಾಗತಿಸಿದ್ದಾರೆ.[ಕರ್ನಾಟಕದಾಚೆಯೂ ಸುನಾಮಿ ಎಬ್ಬಿಸಲು 'ಚಕ್ರವರ್ತಿ' ರೆಡಿ!]

'ವೈಷ್ಣವಿ'ಯಲ್ಲಿ ಮಿಡ್ ನೈಟ್ ಶೋ

ಮೊದಲೇ ಹೇಳಿದಾಗೆ ಉತ್ತರಳ್ಳಿಯ ವೈಷ್ಣವಿ ಚಿತ್ರಮಂದಿರದಲ್ಲಿ ಮಧ್ಯರಾತ್ರಿ 12 ಗಂಟೆಗೆ 'ಚಕ್ರವರ್ತಿ' ಸಿನಿಮಾ ರಿಲೀಸ್ ಆಗಿದೆ. ಮೊದಲ ಶೋನೇ 'ಚಕ್ರವರ್ತಿ'ಯನ್ನ ನೋಡಿ ಪ್ರೇಕ್ಷಕರು ಕಣ್ತುಂಬಿಕೊಂಡಿದ್ದಾರೆ.[ಪರಭಾಷೆ ಚಿತ್ರಗಳ ವಿರುದ್ಧ ಬಹಿರಂಗವಾಗಿ ತೊಡೆ ತಟ್ಟಿದ ದರ್ಶನ್]

'ವೈಷ್ಣವಿ'ಯಲ್ಲಿ ಜನಸಾಗರ

ಇದೇ ಮೊದಲ ಬಾರಿಗೆ ಕನ್ನಡ ಚಿತ್ರವೊಂದು ಮಧ್ಯರಾತ್ರಿ ತೆರೆಕಂಡಿದ್ದು, ಸಿನಿಮಾ ನೋಡಲು ಜನಸಾಗರವೇ ಹರಿದು ಬಂದಿತ್ತು. ಜನಗಳನ್ನ ನಿಯಂತ್ರಿಸಲು ಪೊಲೀಸರು ಮತ್ತು ಥಿಯೇಟರ್ ಸಿಬ್ಬಂದಿಗಳು ಹರಸಾಹಸ ಪಟ್ಟರು. ಹೌಸ್ ಪುಲ್ ಆಗಿದ್ದರೂ ಚಿತ್ರಮಂದಿರದಲ್ಲಿ ನಿಂತುಕೊಂಡು ಸಿನಿಮಾ ನೋಡಿ ಖುಷಿ ಪಟ್ಟರು.['ಚಕ್ರವರ್ತಿ' ಕಥೆ ಕುರಿತು ಕಡೆಗೂ ಸುಳಿವು ಕೊಟ್ಟ 'ದಾಸ' ದರ್ಶನ್.!]

ದಾವಣಗೆರೆಯಲ್ಲಿ 'ಚಕ್ರವರ್ತಿ' ಕ್ರೇಜ್

ದಾವಣೆಗೆರೆಯ ಚಿತ್ರಮಂದಿರದಲ್ಲೂ ದರ್ಶನ್ 'ಚಕ್ರವರ್ತಿ'ಯನ್ನ ತಡರಾತ್ರಿಯೇ ಬರ ಮಾಡಿಕೊಂಡಿದ್ದಾರೆ. ನಿನ್ನೆಯಿಂದಲೇ ಚಿತ್ರಮಂದಿರ ಬಳಿ ಕಾಯುತ್ತಿದ್ದ ಅಭಿಮಾನಿಗಳು ಕೊನೆಗೂ ಫಸ್ಟ್ ಶೋನೇ ಸಿನಿಮಾ ನೋಡಿ ಸಂತಸ ಪಟ್ಟರು.[ಡೈಲಾಗ್ ಇಲ್ಲದ ಟ್ರೈಲರ್ ಹಿಂದಿನ ಕಥೆ ಬಿಚ್ಚಿಟ್ಟ ದರ್ಶನ್!]

ಶಿವಮೊಗ್ಗದಲ್ಲಿ ಫ್ಯಾನ್ಸ್ ಶೋ!

ಶಿವಮೊಗ್ಗದಲ್ಲಿ ಅಭಿಮಾನಿಗಳಿಗೊಸ್ಕರವೇ ಮಧ್ಯರಾತ್ರಿ ವಿಶೇಷ ಪ್ರದರ್ಶನ ಏರ್ಪಡಿಸಲಾಗಿತ್ತು. ನಿರೀಕ್ಷೆಗೂ ಮೀರಿದ ಜನರು ಮೊದಲ ಶೋ ನೋಡಿದ್ದು, ಹೌಸ್ ಪುಲ್ ಪ್ರದರ್ಶನ ಕಂಡಿದೆ.[ಕನ್ನಡ ಚಿತ್ರರಂಗದಲ್ಲಿ ಹೊಸ ಇತಿಹಾಸ ಸೃಷ್ಟಿಸಿದ 'ಚಕ್ರವರ್ತಿ']

ದೊಡ್ಡಬಳ್ಳಾಪುರದಲ್ಲಿ 'ಡಿ-ಬಾಸ್' ಸಿನಿಮಾ

ಇನ್ನು ದೊಡ್ಡಬಳ್ಳಾಪುರದಲ್ಲಿ ಮುಂಜಾನಯೇ 'ಚಕ್ರವರ್ತಿ'ಯ ಎಂಟ್ರಿ ಆಗಿದ್ದು, ಚಿತ್ರ ಅಭಿಮಾನಿಗಳು ಅದ್ದೂರಿಯಾಗಿ ವೆಲ್ ಕಮ್ ಮಾಡಿಕೊಂಡಿದ್ದಾರೆ. ಪ್ರೊಜೆಕ್ಟರ್ ಗೆ ಪೂಜೆ ಮಾಡಿ ಸಿನಿಮಾ ಶುರು ಮಾಡಿದ್ದಾರೆ.

'ಹಾಸನ'ದಲ್ಲಿ ಗ್ರ್ಯಾಂಡ್ ಎಂಟ್ರಿ

ಹಾಸನದಲ್ಲಿ ಬೆಳ್ಳಂಬೆಳಿಗ್ಗೆ 'ಚಕ್ರವರ್ತಿ' ಎಂಟ್ರಿ ಕೊಟ್ಟಿದ್ದು, ಹಾಸನ ಜನರು ದರ್ಶನ್ ಸಿನಿಮಾವನ್ನ ಗ್ರ್ಯಾಂಡ್ ಆಗಿ ಸ್ವಾಗತಿಸಿದ್ದಾರೆ. ದರ್ಶನ್ ಕಟೌಟ್ ಗಳಿಂದ ಚಿತ್ರಮಂದಿರವನ್ನ ಅಲಂಕರಿಸಿದ್ದು, ಚಕ್ರವರ್ತಿ ಮೇನಿಯಾ ಜೋರಾಗಿದೆ.

ಚನ್ನಪಟ್ಟಣದಲ್ಲಿ ಚಕ್ರವರ್ತಿ ಸಂಭ್ರಮ

ಚನ್ನಪಟ್ಟಣದಲ್ಲಿ ಚಕ್ರವರ್ತಿಯನ್ನ ಸಂಭ್ರಮದಿಂದ ಬರ ಮಾಡಿಕೊಂಡಿದ್ದಾರೆ. ಕಳೆದ ಒಂದು ವಾರದಿಂದ 'ಚಕ್ರವರ್ತಿ'ಗಾಗಿ ತಯಾರಿ ನಡೆಸಿದ್ದು, ಚಿತ್ರಮಂದಿರಕ್ಕೆ ಲೈಟ್ ಗಳನ್ನ ಹಾಕಿ, ಸಖತ್ ಆಗಿ ಸಂಭ್ರಮಿಸಿದ್ದಾರೆ.

English summary
Challenging Star Darshan Starrer Chakravarthy Movie Released Today (April 14th) All Over Karnataka. The Movie Direcetd by Chinthan.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada