Just In
Don't Miss!
- News
ಎಫ್ಡಿಎ ಪ್ರಶ್ನೆ ಪತ್ರಿಕೆ ಸೋರಿಕೆ: ಭಾನುವಾರದ ಪರೀಕ್ಷೆ ಮುಂದೂಡಿಕೆ
- Automobiles
ಕೋವಿಡ್ ಲಸಿಕೆ ಸಾಗಾಣಿಕೆಗಾಗಿ ವಿಶೇಷ ಟ್ರಕ್ ಅಭಿವೃದ್ದಿಪಡಿಸಿದ ಟಾಟಾ ಮೋಟಾರ್ಸ್
- Sports
ಐಎಸ್ಎಲ್: ಕೇರಳ ಬ್ಲಾಸ್ಟರ್ಸ್ vs ಎಫ್ಸಿ ಗೋವಾ, Live ಸ್ಕೋರ್
- Lifestyle
ಮಕರ ರಾಶಿಗೆ ಶುಕ್ರನ ಸಂಚಾರ: ಯಾವೆಲ್ಲಾ ರಾಶಿಗೆ ಶುಕ್ರದೆಸೆ
- Finance
ಮೂರನೇ ತ್ರೈಮಾಸಿಕದಲ್ಲಿ ಭಾರೀ ಲಾಭಗಳಿಸಿದ ರಿಲಯನ್ಸ್ ಇಂಡಸ್ಟ್ರೀಸ್
- Education
NIT Recruitment 2021: ಜ್ಯೂನಿಯರ್ ರಿಸರ್ಚ್ ಫೆಲೋ ಜೆಆರ್ಎಫ್ಹುದ್ದೆಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ವರಮಹಾಲಕ್ಷ್ಮಿ ಹಬ್ಬಕ್ಕು ಮೊದಲೆ ರಿಲೀಸ್ ಆಗುತ್ತೆ ದರ್ಶನ್ 'ಕುರುಕ್ಷೇತ್ರ'?
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 50ನೇ ಸಿನಿಮಾ 'ಕುರುಕ್ಷೇತ್ರ'. ಸದ್ಯ ರಿಲೀಸ್ ಗೆ ತಯಾರಿಗಳನ್ನು ಮಾಡಿಕೊಳ್ಳುತ್ತಿರುವ 'ಕುರುಕ್ಷೇತ್ರ' ಮೊದಲು ಆಡಿಯೋ ಮೂಲಕ ಅಭಿಮಾನಿಗಳ ಮುಂದೆ ಬರುತ್ತಿದೆ. 'ಕುರುಕ್ಷೇತ್ರ'ಕ್ಕಾಗಿ ಡಿ ಬಾಸ್ ಅಭಿಮಾನಿಗಳು ವರ್ಷದಿಂದ ಉಸಿರು ಬಿಗಿ ಹಿಡಿದು ಕಾಯುತ್ತಿದ್ದಾರೆ.
ಚಿತ್ರ ಯಾವಾಗ ರಿಲೀಸ್ ಆಗುತ್ತೆ ಅಂತ ನಿರ್ಮಾಪಕ ಮುನಿರುತ್ನ ಅವರು ಹೋದಲ್ಲಿ ಬಂದಲ್ಲಿ ಕಾಡಿಸುತ್ತಿದ್ದರು ಅಭಿಮಾನಿಗಳು. ಕೊನೆಗೂ ಕುರುಕ್ಷೇತ್ರ ರಿಲೀಸ್ ಡೇಟನ್ನು ಬಹಿರಂಗ ಪಡಿಸಿದ್ರು ನಿರ್ಮಾಪಕ ಮುನಿರತ್ನ. ಆಗಸ್ಟ್ ನಲ್ಲಿ ಅಂದ್ರೆ ವರಮಹಾಲಕ್ಷ್ಮಿ ಹಬ್ಬದ ದಿನ ಚಿತ್ರ ದೇಶದಾದ್ಯಂತ ತೆರೆಗೆ ಬರುತ್ತಿದೆ ಎಂದು ಅನೌನ್ಸ್ ಮಾಡಿದ್ರು.
'ಕುರುಕ್ಷೇತ್ರ' ಪಾಸ್ ನಲ್ಲಿ ದರ್ಶನ್ ಫೋಟೋನೇ ಇಲ್ಲ : ಅಭಿಮಾನಿಗಳ ಆಕ್ರೋಶ
ಅಂತೂ ಆ ಶುಭ ಘಳಿಗೆ ಬಂತು ಎಂದು ದಚ್ಚು ಅಭಿಮಾನಿಗಳು ಸಂತಸ ಪಡುತ್ತಿದ್ದಾರೆ. ಯಾವುದೆ ಕಾರಣಕ್ಕು ಚಿತ್ರದ ರಿಲೀಸ್ ಡೇಟ್ ಬದಲಾಗುವುದಿಲ್ಲ ಎಂದು ಮುನಿರತ್ನ ಖಡಕ್ ಆಗಿ ಹೇಳಿದ್ದರು. ಆದ್ರೀಗ ಮೂಲಗಳ ಪ್ರಕಾರ ಚಿತ್ರ ವರಮಹಾಲಕ್ಷ್ಮಿ ಹಬ್ಬಕ್ಕೂ ಮುಂಚಿತವಾಗಿ ರಿಲೀಸ್ ಆಗುತ್ತಿದೆ ಎಂದು ಹೇಳಲಾಗುತ್ತಿದೆ.

ಆಗಸ್ಟ್ 2ಕ್ಕೆ ಕುರುಕ್ಷೇತ್ರ?
ಚಿತ್ರತಂಡ ಅನೌನ್ಸ್ ಮಾಡಿದ ಪ್ರಕಾರ ಕುರುಕ್ಷೇತ್ರ ಆಗಸ್ಟ್ 9ಕ್ಕೆ ತೆರೆಗೆ ಬರಲು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಆದ್ರೀಗ ಮೂಲಗಳ ಮಾಹಿತಿ ಪ್ರಕಾರ 'ಕುರುಕ್ಷೇತ್ರ' ಆಗಸ್ಟ್ 2ಕ್ಕೆ ತೆರೆಗೆ ಬರುತ್ತಿದೆಯಂತೆ. ಚಿತ್ರವನ್ನು ಒಂದು ವಾರ ಮುಂಚಿತವಾಗಿ ತೆರೆಗೆ ತರಲು ನಿರ್ಮಾಪಕ ಮುನಿರತ್ನ ಮತ್ತು ತಂಡ ಪ್ಲಾನ್ ಮಾಡುತ್ತಿದೆಯಂತೆ. ಆದ್ರೆ ಈ ಬಗ್ಗೆ ಇನ್ನು ಅಧಿಕೃತವಾಗಿಲ್ಲ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

ಅಂತಿಮ ನಿರ್ಧಾರ ಇನ್ನು ಆಗಿಲ್ಲ
ಈಗಾಗಲೆ ನಿರ್ಮಾಪಕ ಮುನಿರತ್ನ ಆಗಸ್ಟ್ 9ಕ್ಕೆ ಚಿತ್ರ ರಿಲೀಸ್ ಮಾಡುವುದಾಗಿ ಅನೌನ್ಸ್ ಮಾಡಿದ್ದಾರೆ. ಅಲ್ಲದೆ ಯಾವುದೆ ಕಾರಣಕ್ಕು ರಿಲೀಸ್ ಡೇಟ್ ಬದಲಾಗುವುದಿಲ್ಲ ಎಂದು ಖಡಕ್ ಆಗಿ ಹೇಳಿದ್ದರು. ಆದ್ರೀಗ ಒಂದು ವಾರ ಮುಂಚಿತವಾಗಿ ರಿಲೀಸ್ ಮಾಡಲು ತಯಾರಿ ಮಾಡಿಕೊಳ್ಳುತ್ತಿದೆಯಂತೆ. ಆದ್ರೆ ಈ ಬಗ್ಗೆ ಇನ್ನು ಅಧಿಕೃತವಾದ ಮಾಹಿತಿ ಎಲ್ಲೂ ಹೊರಬಿದ್ದಿಲ್ಲ. ಹಾಗಾಗಿ ಚಿತ್ರ ಆಗಸ್ಟ್ 9ಕ್ಕೆ ತೆರೆಗೆ ಬರುತ್ತೋ ಅಥವ ಮುಂಚಿತವಾಗಿ ಆಗಸ್ಟ್ 2ಕ್ಕೆ ತೆರೆಗೆ ಬರುತ್ತೊ ಎನ್ನುವುದು ಸಧ್ಯದಲ್ಲೆ ಬಹಿರಂಗವಾಗಲಿದೆ.
'ಶಿವನಂದಿ' ಟೈಟಲ್ ರಿಜಿಸ್ಟರ್ ಮಾಡಿಸಿದ ದಿನಕರ್ ತೂಗುದೀಪ್

ಆಗಸ್ಟ್ 9ಕ್ಕೆ 'ಪೈಲ್ವಾನ್' ರಿಲೀಸ್
ದರ್ಶನ್ ಅಭಿನಯದ 'ಕುರುಕ್ಷೇತ್ರ' ಮತ್ತು ಸುದೀಪ್ ಅಭಿನಯದ 'ಪೈಲ್ವಾನ್' ಸಿನಿಮಾ ಒಟ್ಟಿಗೆ ತೆರೆಗೆ ಬರುತ್ತಿದೆ. 'ಕುರುಕ್ಷೇತ್ರ' ರಿಲೀಸ್ ಡೇಟ್ ಫಿಕ್ಸ್ ಆಗುವ ಮೊದಲೆ ಸುದೀಪ್ ಅಭಿನಯದ 'ಪೈಲ್ವಾನ್' ಸಿನಿಮಾ ವರಮಹಾಲಕ್ಷ್ಮಿ ಹಬ್ಬಕ್ಕೆ ತೆಗೆ ಬರುವುದಾಗಿ ಹೇಳಲಾಗುತ್ತಿತ್ತು. ಅದೆ ದಿನ 'ಕುರುಕ್ಷೇತ್ರ' ಸಿನಿಮಾವನ್ನು ಅನೌನ್ಸ್ ಮಾಡಿದ್ರು ಮುನಿರತ್ನ. ಆದ್ರೀಗ 'ಕುರುಕ್ಷೇತ್ರ' ಮುಂಚಿತವಾಗಿ ತೆರೆಗೆ ಬರುವ ಸಾಧ್ಯತೆ ಇದೆ.

ಜುಲೈ 7ಕ್ಕೆ ಆಡಿಯೋ ರಿಲೀಸ್
ಕುರುಕ್ಷೇತ್ರ ಚಿತ್ರದ ಆಡಿಯೋ ಜುಲೈ 7ಕ್ಕೆ ತೆರೆಗೆ ಬರುತ್ತಿದೆ. ದೊಡ್ಡ ಕಾರ್ಯಕ್ರಮದ ಮೂಲಕ ಚಿತ್ರದ ಆಡಿಯೋವನ್ನು ರಿಲೀಸ್ ಮಾಡುತ್ತಿದೆ ಚಿತ್ರತಂಡ. ಚಿತ್ರಕ್ಕೆ ವಿ ಹರಿಕೃಷ್ಣ ಸಂಗೀತ ಸಂಯೋಜನೆ ಮಾಡಿದ್ದಾರೆ. ಆಡಿಯೋ ಹಕ್ಕು ಲಹರಿ ಕಂಪೆನಿಯ ಪಾಲಾಗಿದೆ. ಚಿತ್ರದ ಹಾಡುಗಳಿಗೆ ವಿ ನಾಗೇಂದ್ರ ಪ್ರಸಾದ್ ಸಾಹಿತ್ಯ ರಚಿಸಿದ್ದಾರೆ.