»   » ಚಿರಂಜೀವಿ 'ಆಕೆ' ಪ್ರೋಮೋ ನೋಡಿ ದಾಸ ದರ್ಶನ್ ಏನಂದ್ರು ನೋಡಿ..!

ಚಿರಂಜೀವಿ 'ಆಕೆ' ಪ್ರೋಮೋ ನೋಡಿ ದಾಸ ದರ್ಶನ್ ಏನಂದ್ರು ನೋಡಿ..!

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ನಲ್ಲಿ ಸದ್ಯಕ್ಕೆ ಸಖತ್ ಸದ್ದು ಮಾಡುತ್ತಿರುವ ಹಾರರ್ ಸಿನಿಮಾ ಅಂದ್ರೆ 'ಆಕೆ'. ಚಿರಂಜೀವಿ ಸರ್ಜಾ ಹಾಗೂ ನಿರ್ದೇಶಕ ಕೆ.ಎಂ.ಚೈತನ್ಯ ಕಾಂಬಿನೇಷನ್‌ನಲ್ಲಿ ಮೂಡಿ ಬಂದಿರುವ ಈ ಚಿತ್ರ ಪೋಸ್ಟರ್ ಮತ್ತು ಟೀಸರ್ ಮೂಲಕವೇ ಹಾರರ್ ಚಿತ್ರ ಪ್ರೇಮಿಗಳಲ್ಲಿ ಕುತೂಹಲ ಕೆರಳಿಸಿದೆ.[ಬೆಚ್ಚಿಬೀಳಿಸಲು 'ಆಕೆ' ಬರ್ತಿದ್ದಾಳೆ ಹುಷಾರ್!]

ಅಂದಹಾಗೆ 'ಆಕೆ' ಚಿತ್ರದ ಪ್ರೋಮೋವನ್ನು ದಾಸ ದರ್ಶನ್ ಇತ್ತೀಚೆಗೆ ನೋಡಿದ್ದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ದರ್ಶನ್ ಏನು ಹೇಳಿದರು ಎಂದು ತಿಳಿಯಲು ಮುಂದೆ ಓದಿರಿ..

ಅದ್ಭುತವಾಗಿದೆ 'ಆಕೆ'

'ಚಿರಂಜೀವಿ ಸರ್ಜಾ ಆಕ್ಟ್ ಮಾಡಿರುವ 'ಆಕೆ' ಒಂದೊಳ್ಳೆ ಕನ್ನಡ ಸಿನಿಮಾ. ಇಂಗ್ಲೀಷ್ ಚಿತ್ರದ ರೀತಿಯಲ್ಲಿ ಬಂದಿರುವ ಪ್ರೋಮೋ ನೋಡಿದೆ. ಅದ್ಭುತವಾಗಿ ಮಾಡಿದ್ದಾರೆ" - ದರ್ಶನ್, ನಟ

ಇಂಗ್ಲೀಷ್ ಚಿತ್ರ ನೋಡಿದ ಫೀಲ್

"ಬರೀ ಒಂದು ಪ್ರಮೋದಲ್ಲೇ ಇಂಗ್ಲೀಷ್ ಸಿನಿಮಾ ನೋಡಿದ ಫೀಲ್ ಕೊಡುವ ಹಾಗೆ ಕೆ.ಎಂ.ಚೈತನ್ಯ ಡೈರೆಕ್ಟ್ ಮಾಡಿದ್ದಾರೆ. ದೃಶ್ಯಗಳು ಆಗಿರಬಹುದು, ಮೇಕಿಂಗ್ ಆಗಿರಬಹುದು, ಸ್ಕ್ರಿಪ್ಟಿಂಗ್ ಆಗಿರಬಹುದು ತುಂಬಾ ಚೆನ್ನಾಗಿದೆ. ಕನ್ನಡ ಸಿನಿಮಾಗಳಲ್ಲೇ ಒಂದು ವಿಭಿನ್ನವಾದ ಸಿನಿಮಾ' -ದರ್ಶನ್, ನಟ

ಕಣ್ಣು ತೆರೆದು ನೋಡಿ..

"ಹಾರರ್ ಸಿನಿಮಾ. ಬಹಳ ಅದ್ಭುತವಾಗಿ ಮೂಡಿಬಂದಿದೆ. ಎಲ್ಲರೂ ಕೂಡ ತುಂಬಾ ಎಂಜಾಯ್ ಮಾಡಬಹುದಾದ ಸಿನಿಮಾ. ಕಿವಿ ಮುಚ್ಚಿಕೊಂಡು ಬರೀ ಕಣ್ಣಲ್ಲಿ ನೋಡಿದರೆ ಯಾವುದೋ ಇಂಗ್ಲೀಷ್ ಸಿನಿಮಾ ನೋಡಿದ ಹಾಗೆ ಫೀಲ್ ಆಗುತ್ತೆ. ಆದರೆ ಕಣ್ಣು ತೆರೆದು ಕಿವಿಯಲ್ಲಿ ಸೌಂಡ್ ಕೇಳುತ್ತ ನೋಡಿದರೇನೆ ಕನ್ನಡ ಸಿನಿಮಾ ಎಂಬ ಫೀಲ್ ಆಗೋದು. ಮಿಸ್ ಮಾಡದೇ ಈ ಚಿತ್ರ ನೋಡಿ 'ಆಕೆ'ಯನ್ನು ಪ್ರೋತ್ಸಾಹಿಸಿ" ಎಂದು ನಟ ದರ್ಶನ್ ಹೇಳಿದ್ದಾರೆ. ಅವರು ಮಾತನಾಡಿರುವ ವಿಡಿಯೋ ನೋಡಿ..

ಚಿತ್ರ ಬಿಡುಗಡೆ ಯಾವಾಗ?

ಚಿರಂಜೀವಿ ಸರ್ಜಾ ಮತ್ತು ಶರ್ಮಿಳಾ ಮಾಂಡ್ರೆ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ 'ಆಕೆ' ಮಿಸ್ಟರಿ, ಸಸ್ಪೆನ್ಸ್ ಮತ್ತು ಹಾರರ್ ಚಿತ್ರವಾಗಿದೆ. ಈ ಚಿತ್ರ ಜೂನ್ 30 ರಂದು ತೆರೆಗೆ ಬರಲಿದೆ.

English summary
Kannada Actor Challenging star darshan speak about 'aake' movie promo. 'Aake' movie is all set to release on June 30th.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada