»   » ಬೆಚ್ಚಿಬೀಳಿಸಲು 'ಆಕೆ' ಬರ್ತಿದ್ದಾಳೆ ಹುಷಾರ್!

ಬೆಚ್ಚಿಬೀಳಿಸಲು 'ಆಕೆ' ಬರ್ತಿದ್ದಾಳೆ ಹುಷಾರ್!

Posted By:
Subscribe to Filmibeat Kannada

ಚಿರಂಜೀವಿ ಸರ್ಜಾ ಹಾಗೂ ನಿರ್ದೇಶಕ ಕೆ.ಎಂ ಚೈತನ್ಯ ಕಾಂಬಿನೇಷನ್ ನಲ್ಲಿ ಮೂಡಿ ಬರುತ್ತಿರುವ 'ಆಕೆ' ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ಫೋಸ್ಟರ್ ಮತ್ತು ಟೀಸರ್ ಮೂಲಕ ಕುತೂಹಲ ಮೂಡಿಸಿರುವ 'ಆಕೆ' ಸದ್ಯದಲ್ಲೇ ತೆರೆಗೆ ಬರಲಿದೆ.[ಕನ್ನಡ ಚಿತ್ರ ನಿರ್ಮಾಣಕ್ಕೆ ಮುಂದಾದ ಬಾಲಿವುಡ್ ಖ್ಯಾತ ಸಂಸ್ಥೆ!]

ಈಗಾಗಲೇ ಕಂಪ್ಲೀಟ್ ಶೂಟಿಂಗ್ ಮುಗಿಸಿ, ಪೋಸ್ಟ್ ಪ್ರೊಡಕ್ಷನ್ ಕೂಡ ಮುಗಿಸಿರುವ 'ಆಕೆ' ಜೂನ್ ತಿಂಗಳಲ್ಲೇ ಬೆಳ್ಳಿತೆರೆಗೆ ಬರಲು ಯೋಚಿಸಿದೆ. ಮೂಲಗಳ ಪ್ರಕಾರ ಜೂನ್ 9 ಅಥವಾ ಜೂನ್ 16ಕ್ಕೆ 'ಆಕೆ' ಚಿತ್ರಮಂದಿರಕ್ಕೆ ಬರಲಿದೆಯಂತೆ.['ಆ ದಿನಗಳು' ಚಿತ್ರದ ಮೋಡಿ 'ಆಕೆ'ಯಲ್ಲಿ ಮರುಸೃಷ್ಟಿ: ಕೆ.ಎಂ.ಚೈತನ್ಯ]

Kannada Movie Aake Release Date Fixed

ಚಿರಂಜೀವಿ ಸರ್ಜಾ ಮತ್ತು ಶರ್ಮಿಳಾ ಮಾಂಡ್ರೆ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿರುವ 'ಆಕೆ' ಮಿಸ್ಟರಿ, ಸಸ್ಪೆನ್ಸ್ ಮತ್ತು ಹಾರರ್ ಕಥೆಯಾಗಿದೆ. ಉಳಿದಂತೆ ಪ್ರಕಾಶ್ ಬೆಳವಾಡಿ, ಬಾಲಾಜಿ ಮನೋಹರ್, ಅಚ್ಯುತ್ ಕುಮಾರ್, ಸ್ನೇಹಾ ಆಚಾರ್ಯ, ಅಮನ್ ಮುಂತಾದವರು ಕಾಣಿಸಿಕೊಂಡಿದ್ದಾರೆ.[ಕನ್ನಡದ 'ಆಕೆ'ಗೂ ತಮಿಳಿನ 'ಮಾಯ'ಗೂ ಸಂಬಂಧ! ಸಾಕ್ಷಿ ಇಲ್ಲಿದೆ]

'ಆಕೆ'.... ಈ ಚಿತ್ರದ ವಿಶೇಷ ಅಂದ್ರೆ, ಭಾರತೀಯ ತಂತ್ರಜ್ಞರು ಕೆಲಸ ಮಾಡಿದ್ದಾರೆ. ಯೋಗೀಶ್ ದ್ವಾರಕೀಶ್ ಅವರು ಕಾರ್ಯಕಾರಿ ನಿರ್ಮಾಪಕರಾಗಿದ್ದು, ಗುರುಕಿರಣ್ ಅವರ ಸಂಗೀತ, ರೋಹಿತ್ ಪದಕಿ ಅವರ ಸಂಭಾಷಣೆಯಿದೆ. 'ಆಕೆ' ತಮಿಳಿನ 'ಮಾಯಾ' ಚಿತ್ರದ ರೀಮೇಕ್ ಆಗಿದ್ದು, ಈ ಚಿತ್ರವನ್ನ 'ಇರೋಸ್ ಇಂಟರ್ ನ್ಯಾಷನಲ್' ಕೆ.ಎಸ್ ಡ್ರೀಮ್ಸ್ ಹಾಗೂ ನಕ್ಷತ್ರ ಸಂಸ್ಥೆ ಜೊತೆ ಜಂಟಿ ನಿರ್ಮಾಣ ಮಾಡಿದೆ.['ನೀರ್ ದೋಸೆ' ನಿರ್ದೇಶಕರಿಗಾಗಿ 120 ಕೆ.ಜಿ ತೂಗಲು ಶರ್ಮಿಳಾ ರೆಡಿ]

English summary
Chiranjeevi Sarja and Sharmila Mandre Starrer 'Aake' film is scheduled for release in June but there is a tossup between two dates, June 9 and June 16. the Movie Directed by KM Chaitanya.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada