»   » ಹಿಂದೆಂದೂ ಮಾಡದ ಪಾತ್ರದಲ್ಲಿ 'ಒಡೆಯರ್' ದರ್ಶನ್ ದರ್ಶನ

ಹಿಂದೆಂದೂ ಮಾಡದ ಪಾತ್ರದಲ್ಲಿ 'ಒಡೆಯರ್' ದರ್ಶನ್ ದರ್ಶನ

Posted By:
Subscribe to Filmibeat Kannada

ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ 49ನೇ ಸಿನಿಮಾ 'ತಾರಕ್' ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. 50ನೇ ಸಿನಿಮಾ 'ಕುರುಕ್ಷೇತ್ರ' ಚಿತ್ರೀಕರಣ ಬಿರುಸಿನಿಂದ ಸಾಗುತ್ತಿದೆ. ಹೀಗಿರುವಾಗಲೇ, ದರ್ಶನ್ ರವರ 51ನೇ ಸಿನಿಮಾ 'ಒಡೆಯರ್' ಟಾಕ್ ಆಫ್ ದಿ ಟೌನ್ ಆಗಿದೆ.

ಪವನ್ ಒಡೆಯರ್ ನಿರ್ದೇಶನದಲ್ಲಿ ದರ್ಶನ್ ರವರ 51ನೇ ಸಿನಿಮಾ 'ಒಡೆಯರ್' ಮೂಡಿಬರಲಿದೆ. ಈಗಾಗಲೇ ವರದಿ ಆಗಿರುವ ಪ್ರಕಾರ, 'ಒಡೆಯರ್' ಒಂದು ರೋಮ್ಯಾಂಟಿಕ್ ಸಿನಿಮಾ. ಅಂದ್ಮೇಲೆ, ರೋಸ್ ಹಿಡಿದುಕೊಂಡು ಹುಡುಗಿಯರ ಹಿಂದೆ ಸುತ್ತುವುದೇ 'ಒಡೆಯರ್' ದರ್ಶನ್ ಕೆಲಸ ಎಂದುಕೊಳ್ಳಬೇಡಿ.

ಹಿಂದೆಂದೂ ಮಾಡದ ಪಾತ್ರವೊಂದರಲ್ಲಿ 'ದಾಸ' ದರ್ಶನ್ 'ಒಡೆಯರ್' ಸಿನಿಮಾದಲ್ಲಿ ದರ್ಶನ ಕೊಡಲಿದ್ದಾರೆ. ಅದ್ಯಾವ ಪಾತ್ರ ಅಂದ್ರೆ....

'ಬಾಕ್ಸರ್' ಒಡೆಯರ್

'ಒಡೆಯರ್' ಸಿನಿಮಾದಲ್ಲಿ ನಟ ದರ್ಶನ್ 'ಬಾಕ್ಸರ್' ಆಗಿ ದರ್ಶನ ಕೊಡಲಿದ್ದಾರೆ. ಬಾಕ್ಸಿಂಗ್ ರಿಂಗ್ ನಲ್ಲಿ ದರ್ಶನ್ ಸೆಣಸಾಡಲಿದ್ದಾರೆ.

'ಒಡೆಯರ್'ಗಾಗಿ ದರ್ಶನ್ ಎದುರಿಸಬೇಕಾಗಿದೆ ಬಹುದೊಡ್ಡ 'ಚಾಲೆಂಜ್'

ಆಕ್ಷನ್ ಕಮ್ ರೋಮ್ಯಾನ್ಸ್

ದರ್ಶನ್ ಬಾಕ್ಸರ್ ಆಗಿ ಕಾಣಿಸಿಕೊಳ್ಳುವುದರಿಂದ 'ಒಡೆಯರ್' ಸಿನಿಮಾದಲ್ಲಿ ಆಕ್ಷನ್ ಹಾಗೂ ರೋಮ್ಯಾನ್ಸ್ ಮಿಶ್ರಣ ಇರಲಿದೆ.

ಹಿಂದೆಂದೂ ಮಾಡಿಲ್ಲ

ಕಾಲೇಜು ವಿದ್ಯಾರ್ಥಿ, ರೌಡಿ, ಡಾನ್, ಗಾಯಕ, ಐತಿಹಾಸಿಕ ಹಾಗೂ ಪೌರಾಣಿಕ ಪಾತ್ರಗಳನ್ನು ಇಲ್ಲಿಯವರೆಗೂ ನಿರ್ವಹಿಸಿರುವ ನಟ ದರ್ಶನ್ ಇದೀಗ ಬಾಕ್ಸರ್ ಆಗಿ ಅಭಿಮಾನಿಗಳಿಗೆ ಕಿಕ್ ಕೊಡಲಿದ್ದಾರೆ.

ಇಬ್ಬರು ಹೀರೋಯಿನ್

'ಒಡೆಯರ್' ಸಿನಿಮಾದಲ್ಲಿ ಇಬ್ಬರು ಹೀರೋಯಿನ್ ಗಳ ಜೊತೆ ದರ್ಶನ್ ಡ್ಯುಯೆಟ್ ಹಾಡಲಿದ್ದಾರಂತೆ. ಆದ್ರೆ, ನಟಿಯರ ಆಯ್ಕೆ ಇನ್ನೂ ಆಗಿಲ್ಲ.

Darshan live Now | Filmibeat Kannada

ಸದ್ಯದಲ್ಲಿಯೇ ಪ್ರೀ ಪ್ರೊಡಕ್ಷನ್ ಕೆಲಸ ಶುರು

ಈಗಾಗಲೇ 'ಒಡೆಯರ್' ಚಿತ್ರದ ಸ್ಕ್ರಿಪ್ಟ್ ಬಹುತೇಕ ಮುಗಿದಿದ್ದು, ಸದ್ಯದಲ್ಲಿಯೇ ಪ್ರೀ ಪ್ರೊಡಕ್ಷನ್ ಕೆಲಸಕ್ಕೆ ಪವನ್ ಒಡೆಯರ್ ನಾಂದಿ ಹಾಡಲಿದ್ದಾರೆ. 'ಕುರುಕ್ಷೇತ್ರ' ಚಿತ್ರದ ಶೂಟಿಂಗ್ ಮುಗಿದ ಕೂಡಲೆ 'ಒಡೆಯರ್' ಚಿತ್ರಕ್ಕೆ ಚಾಲನೆ ಸಿಗಲಿದೆ.

English summary
Challenging Star Darshan to play 'Boxer' in 'Wadeyar' directed by Pawan Wadeyar.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada