For Quick Alerts
  ALLOW NOTIFICATIONS  
  For Daily Alerts

  ಕಿಚ್ಚ ಸುದೀಪ್ - ದರ್ಶನ್ ನಡುವೆ ಬಿರುಕು? ಟ್ವಿಟ್ಟರ್ ನಲ್ಲಿ ನಡೆದದ್ದೇನು?

  By ಹರಾ
  |

  ''ಇಬ್ಬರು ಚೆನ್ನಾಗಿದ್ದೀವಿ ಅಂದ್ರೆ ಖುಷಿ ಪಡಿ. ಒಟ್ಟಿಗೆ ಓಡಾಡುತ್ತಿದ್ದೇವೆ ಅಂದ್ರೆ ಸಂತೋಷ ಪಡಬೇಕಾದ ವಿಚಾರ. ಇದರ ಬಗ್ಗೆ ಪ್ರಶ್ನೆ ಮಾಡಬೇಡಿ'' ಹೀಗಂತ ಖುದ್ದು ಹೇಳಿದವರು ಚಾಲೆಂಜಿಂಗ್ ಸ್ಟಾರ್ ದರ್ಶನ್. ಅದು ಕಿಚ್ಚ ಸುದೀಪ್ ಪಕ್ಕದಲ್ಲಿ ನಿಂತಿರುವಾಗಲೇ.!!

  ಅಗಿನ್ನೂ 'ಸಂಗೊಳ್ಳಿ ರಾಯಣ್ಣ' ಚಿತ್ರ ಬಿಡುಗಡೆ ಆಗಿರ್ಲಿಲ್ಲ. ಸಿನಿಮಾಗೆ ವಾಯ್ಸ್ ಓವರ್ ಕೊಡುವುದಕ್ಕೆ ಕಿಚ್ಚ ಸುದೀಪ್ ಡಬ್ಬಿಂಗ್ ಸ್ಟುಡಿಯೋಗೆ ಬಂದಿದ್ದಾಗ ಮಾಧ್ಯಮಗಳಿಗೆ ನಟ ದರ್ಶನ್ ಕೊಟ್ಟ ಪ್ರತಿಕ್ರಿಯೆ ಇದು.

  ''ದರ್ಶನ್ ಹಾಗೂ ಸುದೀಪ್ ಎಲ್ಲೆಡೆ ಒಟ್ಟೊಟ್ಟಿಗೆ ಕಾಣಿಸಿಕೊಳ್ತಿದ್ದಾರೆ. ದರ್ಶನ್ ಸಿನಿಮಾಗೆ ಸುದೀಪ್ ವಾಯ್ಸ್ ಓವರ್ ನೀಡ್ತಿದ್ದಾರೆ. ಇಬ್ಬರ ಗೆಳೆತನ...'' ಅಂತ ಖಾಸಗಿ ವಾಹಿನಿಯ ವರದಿಗಾರರೊಬ್ಬರು ಇನ್ನೂ ಪ್ರಶ್ನೆ ಪೂರ್ಣ ಮಾಡುವ ಮುನ್ನವೇ ದರ್ಶನ್ ಹೀಗೆ ಅರಳು ಹುರಿದ ಹಾಗೆ ಮಾತನಾಡಿಬಿಟ್ಟರು.

  ಹಾಗೆ, ಗಳಸ್ಯಕಂಠಸ್ಯದಂತಿದ್ದ ಈ ಕುಚ್ಚಿಕ್ಕು ಗೆಳೆಯರ ಮಧ್ಯೆ ಎಲ್ಲವೂ ಸರಿಯಿಲ್ಲ ಅಂತ ಆಗಾಗ ಕಾಡ್ಗಿಚ್ಚಿನಂತೆ ಸುದ್ದಿ ಹಬ್ಬುತ್ತಲೇ ಇತ್ತು. ಆದ್ರೆ, ಬೆಂಕಿ ಕಿಡಿ ಹಚ್ಚಿದವರ ಬಗ್ಗೆ ಗೊತ್ತಾಗ್ತಿರ್ಲಿಲ್ಲ. [ಆಪ್ತಮಿತ್ರ ಸುದೀಪ್ ಎದುರಿಗೆ ದರ್ಶನ್ ಬರಲ್ಲ! ಯಾಕೆ?]

  ಈಗ ಇಬ್ಬರ ಮಧ್ಯೆ ಬಿರುಕು ಮೂಡಿದೆ ಅನ್ನೋದಕ್ಕೆ ಟ್ವಿಟ್ಟರ್ ನಲ್ಲಿ ಆಗಿರುವ ಒಂದು ಘಟನೆ ಸಾಕ್ಷಿ. ಅಂಥದ್ದೇನಾಗಿದೆ.? ಅದನ್ನ ತಿಳಿಯಲು ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ಕಿಸಿ.....

  ಇಬ್ಬರೂ ಒಳ್ಳೆ ಗೆಳೆಯರಾಗಿದ್ದವರು!

  ಇಬ್ಬರೂ ಒಳ್ಳೆ ಗೆಳೆಯರಾಗಿದ್ದವರು!

  ಕಿಚ್ಚ ಸುದೀಪ್ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಎಂತಹ ಒಳ್ಳೆಯ ಗೆಳೆಯರು ಅನ್ನೋದು ಸ್ಯಾಂಡಲ್ ವುಡ್ ಗೆ ಮಾತ್ರ ಅಲ್ಲ. ಇಡೀ ಕರ್ನಾಟಕದ ಜನತೆಗೆ ಗೊತ್ತು. ಅಂತಹ ಅನ್ಯೋನ್ಯ ಸ್ನೇಹಿತರ ನಡುವೆ ವೈಷಮ್ಯ ಮೂಡಿದ್ಯಾ? ಈ ಅನುಮಾನ ಬರಲು ಕಾರಣ......ಮುಂದಿನ ಸ್ಲೈಡ್ ಕ್ಲಿಕ್ ಮಾಡಿ...

  ಟ್ವಿಟ್ಟರ್ ನಲ್ಲಿ ಸುದೀಪ್ ರನ್ನ Unfollow ಮಾಡಿದ ದರ್ಶನ್!

  ಟ್ವಿಟ್ಟರ್ ನಲ್ಲಿ ಸುದೀಪ್ ರನ್ನ Unfollow ಮಾಡಿದ ದರ್ಶನ್!

  ನಂಬುವುದಕ್ಕೆ ಅಸಾಧ್ಯವಾದರೂ ಟ್ವಿಟ್ಟರ್ ನಲ್ಲಿ ಹೀಗಾಗಿರುವುದು ನಿಜ. ಕಿಚ್ಚ ಸುದೀಪ್ ರವರನ್ನ ದರ್ಶನ್ Unfollow ಮಾಡಿದ್ದಾರೆ.

  ಇದುವರೆಗೂ Follow ಮಾಡ್ತಿದ್ರು!

  ಇದುವರೆಗೂ Follow ಮಾಡ್ತಿದ್ರು!

  ಟ್ವಿಟ್ಟರ್ ನಲ್ಲಿ ಕಿಚ್ಚ ಸುದೀಪ್ ರನ್ನ ದರ್ಶನ್, ದರ್ಶನ್ ರನ್ನ ಕಿಚ್ಚ ಸುದೀಪ್ Follow ಮಾಡ್ತಿದ್ರು. ಈಗ ಇದ್ದಕ್ಕಿದ್ದ ಹಾಗೆ ಸುದೀಪ್ ರನ್ನ ದರ್ಶನ್ Unfollow ಮಾಡಿರುವುದು ಹಳೇ ಗಾಸಿಪ್ ಗಳಿಗೆ ಮರುಜೀವ ಸಿಕ್ಕ ಹಾಗಾಗಿದೆ. [ಕುಚುಕು ಸ್ನೇಹಿತರ ನಡುವೆ ವಿರಸ: ಸುದೀಪ್ ಸ್ಪಷ್ಟನೆ]

  ಯಾವಾಗ ಹೀಗೆ ಆಗಿದ್ದು?

  ಯಾವಾಗ ಹೀಗೆ ಆಗಿದ್ದು?

  ಕಿಚ್ಚ ಸುದೀಪ್ ರನ್ನ ದರ್ಶನ್ ಯಾವಾಗ Unfollow ಮಾಡಿದ್ರೋ ಗೊತ್ತಿಲ್ಲ, ಈಗ ಬೆಳಕಿಗೆ ಬಂದಿದೆ.

  ದರ್ಶನ್ ರನ್ನ ಸುದೀಪ್ Follow ಮಾಡ್ತಿದ್ದಾರೆ!

  ದರ್ಶನ್ ರನ್ನ ಸುದೀಪ್ Follow ಮಾಡ್ತಿದ್ದಾರೆ!

  ಅಚ್ಚರಿ ಅಂದ್ರೆ ಇದೇ, ಸುದೀಪ್ ರನ್ನ ದರ್ಶನ್ Unfollow ಮಾಡಿದ್ರೂ, ದರ್ಶನ್ ರನ್ನ ಸುದೀಪ್ ಇನ್ನೂ ಫಾಲೋ ಮಾಡ್ತಿದ್ದಾರೆ.

  ಟ್ವಿಟ್ಟರ್ ನಲ್ಲಿ ಸುದೀಪ್ ಅಭಿಮಾನಿಗಳ ಕಿಚ್ಚು?

  ಟ್ವಿಟ್ಟರ್ ನಲ್ಲಿ ಸುದೀಪ್ ಅಭಿಮಾನಿಗಳ ಕಿಚ್ಚು?

  ಸುದೀಪ್ ರನ್ನ ದರ್ಶನ್ Unfollow ಮಾಡಿರುವುದರಿಂದ, ದರ್ಶನ್ ರನ್ನ ಸುದೀಪ್ Unfollow ಮಾಡ್ಬೇಕು ಅಂತ ಸುದೀಪ್ ಅಭಿಮಾನಿಗಳು ಪಟ್ಟು ಹಿಡಿದಿದ್ದಾರೆ ಅಂತ ವರದಿ ಆಗಿತ್ತು. ಆದ್ರೆ ಆ ವರದಿಯನ್ನ ತಳ್ಳಿ ಹಾಕಿರುವ ಸುದೀಪ್ ಅಭಿಮಾನಿಗಳ ಬಳಗ ಸ್ಪಷ್ಟನೆ ನೀಡಿ ಟ್ವೀಟ್ ಮಾಡಿದೆ. [ಎಲ್ಲರ ಬಾಯಿಗೆ ಗೋದ್ರೇಜ್ ಬೀಗ ಹಾಕಿದ ದರ್ಶನ್, ಸುದೀಪ್]

  ಸುದೀಪ್ ಅಭಿಮಾನಿಗಳ ಟ್ವೀಟ್!

  ಸುದೀಪ್ ಅಭಿಮಾನಿಗಳ ಟ್ವೀಟ್!

  ''ಸುದೀಪ್ ರನ್ನ ದರ್ಶನ್ ಫಾಲೋ ಮಾಡಲಿ ಬಿಡಲಿ, ಆದರೆ ಕಿಚ್ಚನ ಅಭಿಮಾನಿಗಳು ಮಾತ್ರ ದರ್ಶನ್ ರನ್ನ ಸುದೀಪ್ Unfollow ಮಾಡ್ಬೇಕು ಅಂತ ಒತ್ತಾಯ ಮಾಡಿಲ್ಲ'' ಅಂತ ಸುದೀಪ್ ಅಭಿಮಾನಿ ಬಳಗ ಸ್ಪಷ್ಟಪಡಿಸಿದೆ.

  ಇಬ್ಬರಿಗೂ ಸಪೋರ್ಟ್ ಗ್ಯಾರೆಂಟಿ!

  ಇಬ್ಬರಿಗೂ ಸಪೋರ್ಟ್ ಗ್ಯಾರೆಂಟಿ!

  ''ಫಾಲೋ ಮಾಡಲಿ, ಬಿಡಲಿ ದರ್ಶನ್ ಹಾಗೂ ಸುದೀಪ್ ಅಭಿಮಾನಿ ಬಳಗ ಇಬ್ಬರನ್ನೂ ಸದಾ ಸಪೋರ್ಟ್ ಮಾಡುತ್ತಲೇ ಇರುತ್ತದೆ'' ಅಂತ ಸುದೀಪ್ ಅಭಿಮಾನಿ ಬಳಗ ಟ್ವೀಟ್ ಮಾಡಿದೆ.

  ಅಂದು ಡೈಲಾಗ್ ಹೊಡೆದಿದ್ರು ಅಲ್ಲವೇ?

  ಅಂದು ಡೈಲಾಗ್ ಹೊಡೆದಿದ್ರು ಅಲ್ಲವೇ?

  ''ಇಬ್ಬರು ಚೆನ್ನಾಗಿದ್ದೀವಿ ಅಂದ್ರೆ ಖುಷಿ ಪಡಿ'' ಅಂತ ಹಿಂದೊಮ್ಮೆ ಮಾಧ್ಯಮಗಳ ಮುಖಕ್ಕೆ ಹೊಡೆದ ಹಾಗೆ ಹೇಳಿಕೆ ನೀಡಿದ್ದ ದರ್ಶನ್ ಇಂದು ಅದನ್ನೆಲ್ಲಾ ಮರೆತುಬಿಟ್ರಾ? 'ಸ್ನೇಹಕ್ಕೆ ಸ್ನೇಹ' ಅಂತಿದ್ದ ಗೆಳೆತನ ಈಗ ಏನಾಯ್ತು?

  ದರ್ಶನ್ Unfollow ಮಾಡುವಂಥವರಾ?

  ದರ್ಶನ್ Unfollow ಮಾಡುವಂಥವರಾ?

  ಟ್ವಿಟ್ಟರ್ ಹಾಗೂ ಫೇಸ್ ಬುಕ್ ನಲ್ಲಿ ಕಿಚ್ಚ ಸುದೀಪ್ ಹಾಗೂ ದರ್ಶನ್ ತುಂಬಾ ಸಕ್ರಿಯ ನಿಜ. ಸಾಮಾಜಿಕ ಜಾಲತಾಣಗಳಲ್ಲಿ ಇಬ್ಬರಿಗೂ ಲಕ್ಷಾಂತರಗಟ್ಟಲೆ ಫ್ಯಾನ್ ಫಾಲೋವಿಂಗ್ ಇದೆ ಅನ್ನೋದು ಕೂಡ ಅಷ್ಟೇ ಸತ್ಯ. ಸ್ನೇಹಕ್ಕೆ ಅಪಾರ ಗೌರವ ಕೊಡುವ ದರ್ಶನ್, ಸುದೀಪ್ ರನ್ನ Unfollow ಮಾಡುತ್ತಾರೆ ಅಂದ್ರೆ ಅವರ ಅಭಿಮಾನಿಗಳಿಗೆ ನಂಬುವುದು ಸ್ವಲ್ಪ ಕಷ್ಟವೇ.

  ದರ್ಶನ್ ಗೆ ಗೊತ್ತಿಲ್ಲದೇ ಆಗಿದ್ರೆ?

  ದರ್ಶನ್ ಗೆ ಗೊತ್ತಿಲ್ಲದೇ ಆಗಿದ್ರೆ?

  ಅನೇಕರಿಗೆ ಗೊತ್ತಿಲ್ಲದ ವಿಚಾರ ಅಂದ್ರೆ, ಕೆಲವೊಮ್ಮೆ ಸ್ಟಾರ್ ನಟರು ಬಿಜಿಯಿರುವಾಗ, ಸಾಮಾಜಿಕ ಜಾಲತಾಣಗಳಲ್ಲಿರುವ ಅವರ ಅಫೀಶಿಯಲ್ ಅಕೌಂಟ್ ಗಳನ್ನ ನಟರ ಆಪ್ತರು ಹ್ಯಾಂಡಲ್ ಮಾಡುತ್ತಾರೆ. ಹಾಗೆ, ದರ್ಶನ್ ರವರ ಅಕೌಂಟ್ ನ ಬೇರೆಯವರು ಹ್ಯಾಂಡಲ್ ಮಾಡುವ ಬಗ್ಗೆ ಮಾಹಿತಿ ಇಲ್ಲ. ಒಂದ್ವೇಳೆ ಅದರಿಂದಲೇ ಈ ಎಡವಟ್ಟು ಆಗಿದ್ರೆ.??

  ದರ್ಶನ್ ಅಭಿಮಾನಿ ಬಳಗ ಸುದೀಪ್ ಫಾಲೋ ಮಾಡ್ತಿದೆ!

  ದರ್ಶನ್ ಅಭಿಮಾನಿ ಬಳಗ ಸುದೀಪ್ ಫಾಲೋ ಮಾಡ್ತಿದೆ!

  ದರ್ಶನ್ ರವರ ಅಭಿಮಾನಿ ಬಳಗ 'ಡಿ ಕಂಪನಿ' ಸುದೀಪ್ ರವರನ್ನ ಟ್ವಿಟ್ಟರ್ ನಲ್ಲಿ ಫಾಲೋ ಮಾಡುತ್ತಿದೆ.

  ಸುದೀಪ್ ಅಭಿಮಾನಿ ಬಳಗ ಕೂಡ!

  ಸುದೀಪ್ ಅಭಿಮಾನಿ ಬಳಗ ಕೂಡ!

  ಸುದೀಪ್ ಅಭಿಮಾನಿ ಬಳಗ ಕೂಡ ದರ್ಶನ್ ರನ್ನ ಟ್ವಿಟ್ಟರ್ ನಲ್ಲಿ ಫಾಲೋ ಮಾಡ್ತಿದೆ. ದರ್ಶನ್ ಮಾಡಿರುವ ಲೇಟೆಸ್ಟ್ ಟ್ವೀಟ್ ಗಳನ್ನ ಸುದೀಪ್ ಅಭಿಮಾನಿ ಬಳಗ ರೀಟ್ವೀಟ್ ಮಾಡಿದೆ.

  ಅಭಿಮಾನಿಗಳು ಬೇಡಿಕೊಳ್ತಿದ್ದಾರೆ!

  ಅಭಿಮಾನಿಗಳು ಬೇಡಿಕೊಳ್ತಿದ್ದಾರೆ!

  ಸುದೀಪ್ ರನ್ನ ದರ್ಶನ್ Unfollow ಮಾಡಿರುವುದರಿಂದ ಬೇಸರ ವ್ಯಕ್ತಪಡಿಸಿರುವ ಅಭಿಮಾನಿಗಳು 'ದಯವಿಟ್ಟು ಸುದೀಪ್ ರನ್ನ ಫಾಲೋ ಮಾಡಿ' ಅಂತ ದರ್ಶನ್ ರನ್ನ ಬೇಡಿಕೊಳ್ತಿದ್ದಾರೆ.

  ಹಾಗಾದ್ರೆ, ಮೌನ ಯಾಕೆ?

  ಹಾಗಾದ್ರೆ, ಮೌನ ಯಾಕೆ?

  ಸುದೀಪ್-ದರ್ಶನ್ ಮಧ್ಯೆ ಬಿರುಕು ಮೂಡಿದೆ ಅಂತ ಟ್ವಿಟ್ಟರ್ ನಲ್ಲೇ ಚರ್ಚೆ ಆಗುತ್ತಿದ್ದರೂ, ಈ ಬಗ್ಗೆ ಸುದೀಪ್ ಹಾಗೂ ದರ್ಶನ್ ಮೌನ ವಹಿಸಿರುವುದೇಕೆ ಅನ್ನೋದೇ ಈಗ ಎಲ್ಲರ ತಲೆಯಲ್ಲೂ ಕೊರೆಯುತ್ತಿರುವ ಪ್ರಶ್ನೆ.

  English summary
  Challenging Star Darshan has unfollowed Sudeep in Twitter leading to the speculation that all is not well between the close friends. But all of a sudden why Darshan stopped following Sudeep? The reason is not known

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X