For Quick Alerts
  ALLOW NOTIFICATIONS  
  For Daily Alerts

  ಚಾಲೆಂಜಿಂಗ್ ಸ್ಟಾರ್ 'ವಿರಾಟ್' ದರ್ಶನ ಯಾವಾಗ?

  By ಜೀವನರಸಿಕ
  |

  ವಿರಾಟ್ ಅನ್ನೋ ಸಿನಿಮಾ ಸಾರಥಿಯ ನಂತ್ರ ಶುರುವಾದ ಅದ್ಧೂರಿ ಬಜೆಟ್ ನ ಸಿನಿಮಾ. ಎಲ್ಲವೂ ಅಂದುಕೊಂಡಂತೆ ಆಗಿದ್ರೆ 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' ಚಿತ್ರಕ್ಕಿಂತ ಮೊದಲೇ 'ವಿರಾಟ್' ರಿಲೀಸ್ ಆಗ್ಬೇಕಿತ್ತು. ಚಿತ್ರದಲ್ಲಿ ಬಾಂಬೆಯ ವಿಧಿಷಾ, ಬೆಂಗಳೂರು ಬ್ಯೂಟಿ ಚೈತ್ರಾ ಸೇರಿದಂತೆ ದರ್ಶನ್ ಗೆ ಮೂವರು ಬೆಡಗಿಯರು ಜೋಡಿಯಾಗಿದ್ದ ಚಿತ್ರ.

  ಹೀರೋಯಿನ್ ಒಬ್ಬರಿಗೆ ಹುಷಾರಿಲ್ಲದೆ ಒಂದಷ್ಟು ದಿನ ಚಿತ್ರೀಕರಣ ನಿಂತುಹೋಯ್ತು ಅಂತ ಸುದ್ದಿಯಾಯ್ತು. ಸಾರಥಿ ಸಕ್ಸಸ್ ನಿಂದ ಆಮೇಲೆ ದರ್ಶನ್ ಬ್ಯಾಕ್ ಟು ಬ್ಯಾಕ್ ದೊಡ್ಡ ದೊಡ್ಡ ಸಿನಿಮಾಗಳಲ್ಲಿ ಬಿಜಿಯಾದ್ರು. ಈಗ ಮತ್ತೆ ವಿರಾಟ್ ಚಿತ್ರ ಶುರುವಾಗುವ ಸುದ್ದಿ ಬರ್ತಿದೆ. ಅದಕ್ಕೆ ಕೆಲವು ಅಡೆತಡೆಗಳು ಇವೆ.

  ದರ್ಶನ್ ಓಕೆ ಅಂದ್ರೆ ಸಿನಿಮಾ ಶುರುವಾಗುತ್ತೆ. ಎಚ್ ವಾಸು ನಿರ್ದೇಶನದ ಚಿತ್ರವನ್ನು ಸಂದೇಶ್ ನಾಗರಾಜ್ ಹಾಗೂ ಟಾಲಿವುಡ್ ನಿರ್ಮಾಪಕ ರತ್ನಕುಮಾರ್ ನಿರ್ಮಿಸುತ್ತಿದ್ದಾರೆ. ಹಾಗಾದ್ರೆ ವಿರಾಟ್ ಕಥೆ ಏನು ಈ ಸ್ಲೈಡ್ ನಲ್ಲಿ ವಿವರಗಳಿವೆ ನೋಡ್ತಾ ಸಾಗಿ.

  ವಿರಾಟ್ ಚಿತ್ರದ ಬಗ್ಗೆ ದರ್ಶನ್ ಬೇಸರ

  ವಿರಾಟ್ ಚಿತ್ರದ ಬಗ್ಗೆ ದರ್ಶನ್ ಬೇಸರ

  ವಿರಾಟ್ ಚಿತ್ರತಂಡ ಎರಡು ವರ್ಷ ಕಾಯಿಸಿದ ಬಗ್ಗೆ ದರ್ಶನ್ ಗೆ ಬೇಸರವಿದೆ. ದರ್ಶನ್ ಮನಸ್ಸು ಮಾಡಿದ್ರೆ ಚಿತ್ರದ ಶೂಟಿಂಗ್ ಗೆ ಚಿತ್ರತಂಡ ರೆಡಿಯಿದೆ.

  ಬಾಬಾಬುಡನ್ ಗಿರಿಯಲ್ಲಿ ರು.55 ಲಕ್ಷದ ಸೆಟ್

  ಬಾಬಾಬುಡನ್ ಗಿರಿಯಲ್ಲಿ ರು.55 ಲಕ್ಷದ ಸೆಟ್

  ವಿರಾಟ್ ಚಿತ್ರತಂಡ ಚಿಕ್ಕಮಗಳೂರಿನ ಬಾಬಾ ಬುಡನ್ ಗಿರಿಯಲ್ಲಿ ರು.55 ಲಕ್ಷ ವೆಚ್ಚದ ಅದ್ಧೂರಿ ಸೆಟ್ ಹಾಕಿ ಶೂಟ್ ಮಾಡಿತ್ತು.

  ಸ್ಟೈಲಿಷ್ ಇಮೇಜ್ ಕೊಡೋ ಚಿತ್ರ

  ಸ್ಟೈಲಿಷ್ ಇಮೇಜ್ ಕೊಡೋ ಚಿತ್ರ

  ದರ್ಶನ್ ಗೆ ಸ್ಟೈಲಿಷ್ ಇಮೇಜ್ ಕೊಡೋ ಚಿತ್ರ ವಿರಾಟ್.

  ಚಿಂಗಾರಿಗಿಂತಲೂ ಮೊದಲೇ ಬರಬೇಕಿತ್ತು

  ಚಿಂಗಾರಿಗಿಂತಲೂ ಮೊದಲೇ ಬರಬೇಕಿತ್ತು

  ಅಂದುಕೊಂಡಂತೆ ಆಗಿದ್ರೆ ಹರ್ಷ ಡೈರೆಕ್ಷನ್ ನ 'ಚಿಂಗಾರಿ'ಗಿಂತ ಮೊದಲು ವಿರಾಟ್ ರಿಲೀಸ್ ಆಗ್ಬೇಕಿತ್ತು.

  ವಿರಾಟ್ ಗೂ ಮುಂಚೆ ಬಂದು ಯಶಸ್ವಿಯಾದ ಚಿತ್ರಗಳು

  ವಿರಾಟ್ ಗೂ ಮುಂಚೆ ಬಂದು ಯಶಸ್ವಿಯಾದ ಚಿತ್ರಗಳು

  ಚಿಂಗಾರಿಯ ನಂತರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ಬುಲ್ ಬುಲ್ ಯಶಸ್ವಿಯಾದ್ವು.

  ಬೃಂದಾವನವೂ ರಿಲೀಸ್ ಆಯ್ತು

  ಬೃಂದಾವನವೂ ರಿಲೀಸ್ ಆಯ್ತು

  ಈಗ ಬೃಂದಾವನ ಕೂಡ ರಿಲೀಸಾಗಿ ಯಶಸ್ವಿಯಾಗಿ ಮುನ್ನುಗ್ಗುತ್ತಿದೆ.

  ಈಗ ಅಂಬರೀಷ ಚಿತ್ರ ಸೆಟ್ಟೇರುತ್ತಿದೆ

  ಈಗ ಅಂಬರೀಷ ಚಿತ್ರ ಸೆಟ್ಟೇರುತ್ತಿದೆ

  ದರ್ಶನ್ ಈಗ ಮಹೇಶ್ ಸುಖಧರೆ ನಿರ್ದೇಶನದ ಅಂಬರೀಷ ಚಿತ್ರದಲ್ಲಿ ಬಿಜಿ.

  ಅಂಬರೀಷನ ಬಳಿಕ ಐರಾವತ

  ಅಂಬರೀಷನ ಬಳಿಕ ಐರಾವತ

  ಅಂಬರೀಷ ನಂತರ ಅರ್ಜುನ್ ನಿರ್ದೇಶನದ ಐರಾವತ ಚಿತ್ರ ಶೂಟಿಂಗ್ ಶುರು ಮಾಡಲಿದೆ.

  ಹಾಗಾದ್ರೆ ವಿರಾಟ್ ದರ್ಶನ ಯಾವಾಗ?

  ಹಾಗಾದ್ರೆ ವಿರಾಟ್ ದರ್ಶನ ಯಾವಾಗ?

  ಇವೆಲ್ಲದ್ರ ನಡುವೆ ದರ್ಶನ್ ಮನಸ್ಸು ಮಾಡಿ ಬಿಡುವು ಮಾಡ್ಕೊಂಡ್ರೆ ದರ್ಶನ್ ರ 'ವಿರಾಟ್' ರೂಪ ನೋಡಬಹುದು.

  English summary
  Challenging Star Darshan's much talked movie 'Viraat' release delayed further. Actor Darshan plays the lead protagonist while newcomers Vidhisha Srivatsav, Isha Chawla and Chaitra Chandranath play the female lead characters.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X