»   » ಚಾಲೆಂಜಿಂಗ್ ಸ್ಟಾರ್ ಗಜ ಮತ್ತು ಟಾಕಿಂಗ್ ಸ್ಟಾರ್ ಸುಜ!

ಚಾಲೆಂಜಿಂಗ್ ಸ್ಟಾರ್ ಗಜ ಮತ್ತು ಟಾಕಿಂಗ್ ಸ್ಟಾರ್ ಸುಜ!

Posted By: ಕುಸುಮ
Subscribe to Filmibeat Kannada

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಪ್ರಾಣಿಪ್ರೇಮ ಎಂಥದೆಂದು ಎಲ್ಲರಿಗೂ ಗೊತ್ತು. ಮೈಸೂರಿನಲ್ಲಿರುವ ಅವರ ಫಾರ್ಮ್ ಹೌಸ್ನಲ್ಲಿ ಜಗತ್ತಿನ ಅತ್ಯಂತ ವಿಶಿಷ್ಟ ಪ್ರಾಣಿಪಕ್ಷಿಗಳನ್ನು ಬೆಳೆಸುತ್ತಿದ್ದಾರೆ. ಅದಕ್ಕಾಗಿಯೇ ತಿಂಗಳಿಗೆ ಲಕ್ಷಗಟ್ಟಲೆ ಹಣ ಖರ್ಚನ್ನೂ ಮಾಡ್ತಾರೆ ದರ್ಶನ್.

ತಮಗೆ ತುಂಬಾ ಬೇಸರವಾದಾಗ, ನೋವಾದಾಗ ಅದನ್ನು ಹಂಚಿಕೊಳ್ಳೋದು ಮೂಕಪ್ರಾಣಿಗಳ ಬಳಿ ಅಂತ ದರ್ಶನ್ ಸಾಕಷ್ಟು ಬಾರಿ ಹೇಳಿಕೊಂಡಿದ್ದಾರೆ ಕೂಡ. ಪ್ರಾಣಿಗಳು ನಮ್ಮ ನೋವನ್ನು ಅರ್ಥಮಾಡಿಕೊಳ್ತವೆ ಎನ್ನುವ ಅಪಾರ ನಂಬಿಕೆ ದರ್ಶನ್ ಅವರದ್ದು. ['ಚಕ್ರವರ್ತಿ' ದರ್ಶನ್ ಜೊತೆ 'ಗುರಾಯಿಸುವ ಗುಮ್ಮ'ನಾದ ಸೃಜನ್.!]

Challenging Star Gaja and Talking Star Suja

ಚಾಲೆಂಜಿಂಗ್ ಸ್ಟಾರ್ ಬೇಸರವಾದಾಗಲೆಲ್ಲ ಧಾವಿಸುವ ಈ ತಮ್ಮ ನೆಚ್ಚಿನ ಪ್ರಾಣಿಗಳಿರುವ ಫಾರ್ಮ್ ಹೌಸ್ನಲ್ಲಿ ಎರಡು ಹ್ಯಾಂಡಸಮ್ ಎತ್ತುಗಳಿವೆ. ಈಗ ಎತ್ತುಗಳಿಗೆ ನಾಮಕರಣ ಮಾಡಲಾಗಿದೆ. ಏನಂತ ಗೊತ್ತಾ? ಚಾಲೆಂಜಿಂಗ್ ಸ್ಟಾರ್ ಗಜ, ಟಾಕಿಂಗ್ ಸ್ಟಾರ್ ಸುಜ ಅಂತ. ನಾಮಕರಣ ಮಾಡಿ ಎತ್ತುಗಳ ಜೊತೆ ನಿಂತು ತಮ್ಮ ತಮ್ಮ ಹೆಸರಿನ ಎತ್ತುಗಳೊಂದಿಗೆ ಪೋಸ್ ಕೊಟ್ಟಿದ್ದಾರೆ ದರ್ಶನ್ ಮತ್ತು ಸೃಜನ್ ಲೋಕೇಶ್. [ವಿಮರ್ಶೆ: 'ಜಗ್ಗುದಾದಾ' ಮದುವೆ ಊಟದ ರುಚಿ ಸ್ವಲ್ಪ ಸಿಹಿ, ಸ್ವಲ್ಪ ಸಪ್ಪೆ]

ಹಿಂದಿನಿಂದಲೂ ದರ್ಶನ್ ಮತ್ತು ಸೃಜನ್ ಆತ್ಮೀಯ ಗೆಳೆಯರು. ಈಗ ಸಿನಿಮಾದಲ್ಲೂ ಕೂಡ ಈ ಗೆಳೆಯರ ಕೆಮಿಸ್ಟ್ರಿ ವರ್ಕೌಟ್ ಆಗುತ್ತಿದೆ. ಇನ್ನು ಕೆಲವು ತಿಂಗಳ ಹಿಂದೆ ಫಾರ್ಮ್ ಹೌಸ್ನಲ್ಲಿ ದರ್ಶನ್ ಮತ್ತು ಸೃಜನ್ ಭರ್ಜರಿ ಬಾಡೂಟ ತಯಾರಿಸಿ ಪೋಸ್ ಕೂಡ ಕೊಟ್ಟಿದ್ರು. ಆ ಫೋಟೋಗಳೂ ಕೂಡ ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಮಾಡಿತ್ತು. ಈಗ ಮತ್ತೊಮ್ಮೆ ಈ ಆತ್ಮೀಯ ಗೆಳೆಯರು ಸುದ್ದಿಯಲ್ಲಿದ್ದಾರೆ.

English summary
Challenging Star Darshan has names his two bullocks challenging star Gaja and talking star Suja. It is known that Darshan and Srujan are close buddies and spend lot of time in Darshan's farm house in Mysuru.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada