For Quick Alerts
  ALLOW NOTIFICATIONS  
  For Daily Alerts

  ಚಂದನ್ ಶೆಟ್ಟಿ-ನಿವೇದಿತಾ ಗೌಡ ಮದುವೆ ಆಮಂತ್ರಣ ಪತ್ರಿಕೆ ಹೀಗಿದೆ

  |

  ಗಾಯಕ ಚಂದನ್ ಶೆಟ್ಟಿ ಮತ್ತು ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ ಮದುವೆಗೆ ಇನ್ನೇನು ಕೆಲವೇ ಕೆಲವು ದಿನಗಳು ಭಾಗಿ ಇದೆ. ಈಗಾಗಲೆ ಮದುವೆ ಆಮಂತ್ರಣ ಪತ್ರಿಕೆಯನ್ನು ಚಿತ್ರರಂಗದ ಗಣ್ಯರು ಮತ್ತು ಸ್ನೇಹಿತರಿಗೆ ತಲುಪಿಸುವಲ್ಲಿ ಇಬ್ಬರು ಬ್ಯುಸಿಯಾಗಿದ್ದಾರೆ. ಚಿತ್ರರಂಗದ ಬಹುತೇಕರಿಗೆ ಚಂದನ್ ಮತ್ತು ನಿವೇದಿತಾ ಮದುವೆ ಮಮತೆಯ ಕರೆಯೋಲೆ ತಲುಪಿದೆ.

  ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಫೋಟೋಗಳು ಅಂದರೆ ಚಂದನ್ ಚಿತ್ರರಂಗದ ಗಣ್ಯರಾದ ಪುನೀತ್ ರಾಜ್ ಕುಮಾರ್, ದರ್ಶನ್ ಸೇರಿದಂತೆ ಸಾಕಷ್ಟು ಕಲಾವಿದರಿಗೆ ಮದುವೆಗೆ ಪ್ರೀತಿಯ ಆಮಂತ್ರಣ ನೀಡಿದ್ದಾರೆ. ಪತ್ರಿಕೆ ಹಂಚುತ್ತಿರುವ ಒಂದಿಷ್ಟು ಫೋಟೋಗಳು ವೈರಲ್ ಆಗಿವೆ. ಅಂದ್ಹಾಗೆ ಈ ಕ್ಯೂಟ್ ಜೋಡಿಯ ಮದುವೆ ಪತ್ರಿಕೆ ಹೇಗಿದೆ ಗೊತ್ತಾ? ಮುಂದೆ ಓದಿ..

  ಶೈನ್ ಶೆಟ್ಟಿಗೆ ಮದುವೆ ಆಮಂತ್ರಣ ನೀಡಿದ 'ಬಿಗ್ ಬಾಸ್-5 'ವಿನ್ನರ್ ಚಂದನ್ ಶೆಟ್ಟಿಶೈನ್ ಶೆಟ್ಟಿಗೆ ಮದುವೆ ಆಮಂತ್ರಣ ನೀಡಿದ 'ಬಿಗ್ ಬಾಸ್-5 'ವಿನ್ನರ್ ಚಂದನ್ ಶೆಟ್ಟಿ

  ಆಕರ್ಷವಾಗಿದೆ ಆಮಂತ್ರಣ ಪತ್ರಿಕೆ

  ಆಕರ್ಷವಾಗಿದೆ ಆಮಂತ್ರಣ ಪತ್ರಿಕೆ

  ಸೆಲೆಬ್ರಿಟಿ ಮದುವೆ ಆಮಂತ್ರಣ ಪತ್ರಿಕೆ ಅಂದ್ಮೇಲೆ ಆಕರ್ಷಕವಾಗಿ, ದುಬಾರಿ ವೆಚ್ಚದಲ್ಲಿ ಡಿಸೈನ್ ಮಾಡಿಸಿರುತ್ತಾರೆ. ಆಮಂತ್ರಣ ಪತ್ರಿಕೆ ಹೇಗಿರಲಿದೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿಯೂ ಇರುತ್ತೆ. ಹಾಗೆ ನಿವೇದಿತಾ ಮತ್ತು ಚಂದನ್ ಕೂಡ ತಮ್ಮ ಮದುವೆ ಪತ್ರಿಕೆಯನ್ನು ಅದ್ಭುತವಾಗಿ ಮಾಡಿಸಿದ್ದಾರೆ. NC ಎಂದು ಬರೆದಿರುವ ಪತ್ರಿಕೆಯಲ್ಲಿ ಚಂದನ್ ಹಾಗೂ ನಿವೇದಿತಾ ಹಾಗೆ ಇರುವ ಎರಡು ಆಕರ್ಷಕ ಫೋಟೋವಿದೆ. ಕೆಂಪು ಬಣ್ಣದ ಡಿಸೈನ್ ನಲ್ಲಿ ಪತ್ರಿಕೆ ತಯಾರಾಗಿದೆ.

  ಚಂದನ್ ಶೆಟ್ಟಿ-ನಿವೇದಿತಾ ಗೌಡ ಮದುವೆ ದಿನಾಂಕ ನಿಗದಿ: ಎಲ್ಲಿ, ಯಾವಾಗ.?ಚಂದನ್ ಶೆಟ್ಟಿ-ನಿವೇದಿತಾ ಗೌಡ ಮದುವೆ ದಿನಾಂಕ ನಿಗದಿ: ಎಲ್ಲಿ, ಯಾವಾಗ.?

  25-26ರಂದು ಮದುವೆ

  25-26ರಂದು ಮದುವೆ

  ಇದೇ ತಿಂಗಳು 25 ಮತ್ತು 26 ರಂದು ಚಂದನ್ ಮತ್ತು ನಿವೇದಿತಾ ಗೌಡ ವಿವಾಹ ಮಹೋತ್ಸವ ನಡೆಯುತ್ತಿದೆ. ಅದ್ದೂರಿಯಾಗಿ ನಡೆಯುತ್ತಿರುವ ವಿವಾಹ ಮಹೋತ್ಸವಕ್ಕೆ ಮೈಸೂರಿನ ಸ್ಪೆಕ್ಟ್ರಾ ಕನ್ವೆಶ್ಷನ್ ಹಾಲ್ ಸಿದ್ಧವಾಗುತ್ತಿದೆ.

  ಮುಹೂರ್ತ ಮತ್ತು ಆರತಕ್ಷತೆ

  ಮುಹೂರ್ತ ಮತ್ತು ಆರತಕ್ಷತೆ

  ನಿವೇದಿತಾ ಮತ್ತು ಚಂದನ್ ಇಬ್ಬರು 26ರಂದು ಹಸೆಮಣೆ ಏರುತ್ತಿದ್ದಾರೆ. 26 ಬೆಳಗ್ಗೆ 8.15 ರಿಂದ 9 ಗಂಟೆವರೆಗಿನ ಮುಹೂರ್ತದಲ್ಲಿ ಇಬ್ಬರು ಪತಿ-ಪತ್ನಿಯರಾಗಲಿದ್ದಾರೆ. ಅಂದ್ಹಾಗೆ 25 ಸಂಜೆ 7ಗಂಟೆಗೆ ಮೈಸೂರಿನ ಸ್ಪೆಕ್ಟ್ರಾ ಕನ್ವೆಶ್ಷನ್ ಹಾಲ್ ನಲ್ಲಿ ಅದ್ದೂರಿ ಆರತಕ್ಷತೆ ಕಾರ್ಯಕ್ರಮ ಕೂಡ ನಡೆಯುತ್ತಿದೆ.

  ಪುನೀತ್ ದಂಪತಿ ಭೇಟಿ ಮಾಡಿದ ಚಂದನ್ ಶೆಟ್ಟಿ-ನಿವೇದಿತಾ ಗೌಡಪುನೀತ್ ದಂಪತಿ ಭೇಟಿ ಮಾಡಿದ ಚಂದನ್ ಶೆಟ್ಟಿ-ನಿವೇದಿತಾ ಗೌಡ

  ಕಳೆದ ವರ್ಷ ನಿಶ್ಚಿತಾರ್ಥ ಮಾಡಿಕೊಂಡಿದ್ದ ಜೋಡಿ

  ಕಳೆದ ವರ್ಷ ನಿಶ್ಚಿತಾರ್ಥ ಮಾಡಿಕೊಂಡಿದ್ದ ಜೋಡಿ

  ಬಿಗ್ ಬಾಸ್ ರಿಯಾಲಿಟಿ ಶೋ ಮೂಲಕ ಪರಿಚಿತರಾದ ಚಂದನ್ ಮತ್ತು ನಿವೇದಿತಾ ಉತ್ತಮ ಸ್ನೇಹಿತರಾಗಿದ್ದರು. ಇದೆ ಸ್ನೇಹ ಪ್ರೀತಿಗೆ ತಿರುಗಿ ಮನೆಯವರ ಒಪ್ಪಿಗೆ ಮೇರಿಗೆ ಈಗ ಮದುವೆ ಆಗುತ್ತಿದ್ದಾರೆ. ಕಳೆದ ವರ್ಷ ಯುವ ದಸರ ವೇದಿಕೆಯಲ್ಲಿ ಇಬ್ಬರ ಪ್ರೀತಿಯ ವಿಚಾರ ಬಹಿರಂಗವಾಗಿತ್ತು. ಆನಂತರ ಅಕ್ಟೋಬರ್ ನಲ್ಲಿ ಇಬ್ಬರ ನಿಶ್ಚಿತಾರ್ಥ ಅದ್ದೂರಿಯಾಗಿ ನೆರವೇರಿತ್ತು. ಈಗ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ.

  English summary
  Singer Chandan and Niveditha marriage invitation card specialities. Singer Chandan tie the knot to niveditha on february 26th.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X