For Quick Alerts
  ALLOW NOTIFICATIONS  
  For Daily Alerts

  ಮದುವೆ ಶಾಸ್ತ್ರಗಳ ಸಂಭ್ರಮದಲ್ಲಿ ನಿವೇದಿತಾ ಗೌಡ ಮತ್ತು ಚಂದನ್ ಶೆಟ್ಟಿ

  |

  ಗಾಯಕ ಚಂದನ್ ಶೆಟ್ಟಿ ಮತ್ತು ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ ಮನೆಯಲ್ಲಿ ಮದುವೆ ಸಂಭ್ರಮ ತುಂಬಿ ತುಳುಕುತ್ತಿದೆ. ನಿನ್ನೆಯಿಂದನೆ (24 ಫೆಬ್ರವರಿ) ಚಂದನ್ ಮತ್ತು ನಿವೇದಿತಾ ಮನೆಯಲ್ಲಿ ಮದುವೆ ಶಾಸ್ತ್ರಗಳು ಜೋರಾಗಿ ನಡೆಯುತ್ತಿದೆ. ನಿವೇದಿತಾ ಅವರ ಮೈಸೂರಿನ ನಿವಾಸದಲ್ಲಿ ಮದುವೆ ಶಾಸ್ತ್ರಗಳು ನಡೆಯುತ್ತಿದ್ದು, ಕುಟುಂಬದವರು ಮತ್ತು ಸ್ನೇಹಿತರು ಭಾಗಿಯಾಗಿದ್ದಾರೆ.

  ಶಾಸ್ತ್ರಗಳನ್ನು ಎಂಜಾಯ್ ಮಾಡುತ್ತಿರುವ ಚಂದನ್, ನಿವೇದಿತಾ | Chandan weds Niveditha | Filmibeat Kannada

  ಇಂದು ಬೆಳಗ್ಗೆಯಿಂದನೆ ಚಪ್ಪರ ಶಾಸ್ತ್ರ, ಅರಿಶಿನ ಶಾಸ್ತ್ರ್, ಆರತಿ ಶಾಸ್ತ್ರ ಸೇರಿದಂತೆ ಸಾಕಷ್ಟು ಶಾಸ್ತ್ರಗಳು ನಡೆಯುತ್ತಿದೆ. ಚಂದನ್ ಮತ್ತು ನಿವೇದಿತಾ ಇಬ್ಬರು ಮದುವೆ ಶಾಸ್ತ್ರಗಳನ್ನು ಸಖತ್ ಎಂಜಾಯ್ ಮಾಡುತ್ತಿದ್ದಾರೆ. ಮುಂದೆ ಓದಿ..

  ಮದುವೆ ಸಂಭ್ರಮದಲ್ಲಿ ರಾಪರ್ ಚಂದನ್ ಶೆಟ್ಟಿ, 'ಗೊಂಬೆ' ನಿವೇದಿತಾ ಗೌಡ.!ಮದುವೆ ಸಂಭ್ರಮದಲ್ಲಿ ರಾಪರ್ ಚಂದನ್ ಶೆಟ್ಟಿ, 'ಗೊಂಬೆ' ನಿವೇದಿತಾ ಗೌಡ.!

  ಗೋಲ್ಡನ್ ಕಲರ್ ಸೀರೆಯಲ್ಲಿ ನಿವೇದಿತಾ ಮಿಂಚಿಂಗ್

  ಗೋಲ್ಡನ್ ಕಲರ್ ಸೀರೆಯಲ್ಲಿ ನಿವೇದಿತಾ ಮಿಂಚಿಂಗ್

  ನಿವೇದಿತಾ ಗೌಡ ಮನೆಯಲ್ಲಿ ಬೆಳಗ್ಗೆಯಿಂದ ಚಪ್ಪರ ಶಾಸ್ತ್ರ, ಆರತಿ ಶಾಸ್ತ್ರ ನಡೆಯುತ್ತಿದೆ. ಶಾಸ್ತ್ರದಲ್ಲಿ ಮದುಮಗಳು ನಿವೇದಿತಾ ಗೋಲ್ಡನ್ ಕಲರ್ ಸೀರೆಯಲ್ಲಿ ಕಂಗೊಳಿಸುತ್ತಿದ್ದಾರೆ. ಕುಟುಂಬದವರು ಆರತಿ ಶಾಸ್ತ್ರ ಮಾಡುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

  ನೀಲಿ ಬಣ್ಣದ ಶರ್ಟ್, ಫಾರ್ಮಲ್ಸ್ ಲುಕ್ ನಲ್ಲಿ ಚಂದನ್

  ನೀಲಿ ಬಣ್ಣದ ಶರ್ಟ್, ಫಾರ್ಮಲ್ಸ್ ಲುಕ್ ನಲ್ಲಿ ಚಂದನ್

  ಈಗಾಗಲೆ ಚಂದನ್ ಕುಟುಂಬ ಮತ್ತು ನಿವೇದಿತಾ ಕುಟುಂಬ ಮೈಸೂರಿನ ಹುಣಸೂರು ರಸ್ತೆಯಲ್ಲಿರುವ ಸ್ಪೆಕ್ಟ್ರಾ ಕನ್ವೆನ್ಷನ್ ಹಾಲ್ ಗೆ ತೆರಳಿದೆ. ಅಲ್ಲಿಯೂ ಸಹ ಮದುವೆ ಶಾಸ್ತ್ರಗಳು ನಡೆಯುತ್ತಿವೆ. ನೀಲಿ ಬಣ್ಣದ ಶರ್ಟ್ ಧರಿಸಿ ಫಾರ್ಮಲ್ ಲುಕ್ ನಲ್ಲಿ ಚಂದನ್ ಕಂಗೊಳಿಸುತ್ತಿದ್ದಾರೆ. ಚಂದನ್ ಸಹ ಮದುವೆ ಶಾಸ್ತ್ರಗಳನ್ನು ಎಂಜಾಯ್ ಮಾಡುತ್ತಿದ್ದಾರೆ.

  ಚಂದನ್ ಶೆಟ್ಟಿ-ನಿವೇದಿತಾ ಗೌಡ ಮದುವೆ ಆಮಂತ್ರಣ ಪತ್ರಿಕೆ ಹೀಗಿದೆಚಂದನ್ ಶೆಟ್ಟಿ-ನಿವೇದಿತಾ ಗೌಡ ಮದುವೆ ಆಮಂತ್ರಣ ಪತ್ರಿಕೆ ಹೀಗಿದೆ

  ನಾಳೆ ಮದುವೆ

  ನಾಳೆ ಮದುವೆ

  ಮೈಸೂರಿನ ಹುಣಸೂರು ರಸ್ತೆಯಲ್ಲಿರುವ ಸ್ಪೆಕ್ಟ್ರಾ ಕನ್ವೆನ್ಷನ್ ಹಾಲ್ ನಲ್ಲಿ ನಿವೇದಿತಾ ಗೌಡ ಮತ್ತು ಚಂದನ್ ಶೆಟ್ಟಿ ಮದುವೆ ನಡೆಯಲಿದೆ. ನಾಳೆ ಬುಧವಾರ ಬೆಳಗ್ಗೆ 8.15 ರಿಂದ 9 ಗಂಟೆಯೊಳಗೆ ಇರುವ ಶುಭ ಲಗ್ನದಲ್ಲಿ ನಿವೇದಿತಾ ಗೌಡ ಕೊರಳಿಗೆ ಚಂದನ್ ಶೆಟ್ಟಿ ಮಾಂಗಲ್ಯಧಾರಣೆ ಮಾಡಲಿದ್ದಾರೆ.

  ಬೆಂಗಳೂರು ಇಂಟರ್ನ್ಯಾಷನಲ್ ಏರ್ ಪೋರ್ಟ್ ನಲ್ಲಿ ಕೆಲಸಕ್ಕೆ ಸೇರಿದ 'ಗೊಂಬೆ' ನಿವೇದಿತಾ.!ಬೆಂಗಳೂರು ಇಂಟರ್ನ್ಯಾಷನಲ್ ಏರ್ ಪೋರ್ಟ್ ನಲ್ಲಿ ಕೆಲಸಕ್ಕೆ ಸೇರಿದ 'ಗೊಂಬೆ' ನಿವೇದಿತಾ.!

  ಚಿತ್ರರಂಗದ ಗಣ್ಯರು ಬರುವ ನಿರೀಕ್ಷೆ

  ಸ್ಯಾಂಡಲ್ ವುಡ್ ಗಣ್ಯರಾದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ಚಾಲೆಂಜಿಂಗ್ ಸ್ಟಾರ್ ದರ್ಶನ್ ಸೇರಿದಂತೆ ಕನ್ನಡ ಚಿತ್ರರಂಗದ ದಿಗ್ಗಜರಿಗೆ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಮದುವೆ ಆಮಂತ್ರಣ ನೀಡಿದ್ದಾರೆ. ಹಾಗಾಗಿ ಚಂದು-ನಿವಿ ಮದುವೆಗೆ ಸ್ಯಾಂಡಲ್ ವುಡ್ ಸ್ಟಾರ್ ನಟರು ಸಾಕ್ಷಿ ಆಗುವ ಸಾಧ್ಯತೆ ಇದೆ.

  English summary
  Chandan Shetty and Niveditha Gowda wedding rituals are going in the their house.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X