»   » ಚಂದನ್ ಶೆಟ್ಟಿ ಅವರ 'ಆಪಲ್' ಆನ್‌ಲೈನ್ ನಲ್ಲಿ ಫೇಮಸ್

ಚಂದನ್ ಶೆಟ್ಟಿ ಅವರ 'ಆಪಲ್' ಆನ್‌ಲೈನ್ ನಲ್ಲಿ ಫೇಮಸ್

Posted By:
Subscribe to Filmibeat Kannada
ಚಂದನ್ ಶೆಟ್ಟಿ ಜೀವ ಈ ಸ್ಪೆಷಲ್ ಪರ್ಸನ್ | Filmibeat Kannada

ಚಂದನ್ ಶೆಟ್ಟಿ ಈಗ ಸಾಕಷ್ಟು ಪ್ರಖ್ಯಾತಿ ಗಳಿಸಿರುವ ಸಂಗೀತ ನಿರ್ದೇಶಕ ಹಾಗೂ ಕಲಾವಿದ. ಚಂದನ್ ಬಿಗ್ ಬಾಸ್ ನಿಂದ ಹೊಸ ಬಂದ ನಂತರ ಚಂದನ್ ಅಭಿಮಾನಿಗಳು ದುಪ್ಪಟ್ಟಾಗಿದ್ದಾರೆ. ಇದಕ್ಕೆ ಕಾರಣ ಚಂದನ್ ಅವರಲ್ಲಿರುವ ಟ್ಯಾಲೆಂಟ್ ಅಂದರೆ ತಪ್ಪಾಗಲಾರದು.

ಚಂದರ್ ಅವರಿಗೆ ಬಿಗ್ ಬಾಸ್ ಮನೆಯಿಂದ ಬಂದ ನಂತರ ಅಪರೂಪದ ಉಡುಗೊರೆಯೊಂದು ಸಿಕ್ಕಿತ್ತು, ಯಾರು ಕೂಡ ಅದನ್ನ ಊಹಿಸಿಕೊಳ್ಳಲು ಸಾಧ್ಯವಿಲ್ಲದಂತದ್ದು. ಅಷ್ಟೇ ಯಾಕೆ ಚಂದನ್ ಎಂದಿಗೂ ಇಂತಹ ಗಿಫ್ಟ್ ಅನ್ನು ನಿರೀಕ್ಷೆಯೇ ಮಾಡಿರಲಿಲ್ಲ. ಅಂತದೊಂದು ಗಿಫ್ಟ್ ಸಿಕ್ಕಿತ್ತು.

ಚಂದನ್ ಶೆಟ್ಟಿ ಹೊಸ ಹೇರ್ ಸ್ಟೈಲ್ ಗೆ ಮಾರು ಹೋದ ಶೃತಿ ಹರಿಹರನ್

ಚಂದನ್ ಅವರಿಗೆ ಅಭಿಮಾನಿಗಳು ಇರುವಂತೆ ಅವರ ಬಳಿ ಇರುವ ಅಪರೂಪದ ಉಡುಗೊರೆಗೂ ಅಷ್ಟೇ ಅಭಿಮಾನಿಗಳು ಹುಟ್ಟುಕೊಂಡಿದ್ದಾರೆ. ಅದು ಎಷ್ಟರ ಮಟ್ಟಿಗೆ ಅಂದರೆ ಚಂದನ್ ಅವರಂತೆಯೇ ವೆಬ್ ದುನಿಯಾದಲ್ಲಿ ಸಖತ್ ಫೇಮಸ್ ಆಗಿದೆ. ಏನಾದು? ಇಷ್ಟೊಂದು ಫೇಮಸ್ ಆಗಲು ಹೇಗೆ ಸಾಧ್ಯವಾಯ್ತು? ಇದರ ಬಗ್ಗೆ ಕಂಪ್ಲೀಟ್ ಮಾಹಿತಿ ಇಲ್ಲಿದೆ ಮುಂದೆ ಓದಿ

ಚಂದನ್ ಶೆಟ್ಟಿಯ ಮುದ್ದು ಆಪಲ್

ಚಂದನ್ ಬಳಿ ಇರುವ ಅಪರೂಪದ ಉಡುಗೊರೆ ಅಂದರೆ ಅವರ ತಾಯಿ ಕೊಟ್ಟಿರುವ ನಾಯಿಮರಿ. ಬಿಗ್ ಬಾಸ್ ನಿಂದ ಹೊರ ಬಂದ ನಂತರ ಚಂದನ್ ಅವರಿಗಾಗಿ ಈ ಉಡುಗೊರೆಯನ್ನ ನೀಡಲಾಗಿತ್ತು. ಅದಕ್ಕೆ ಚಂದನ್ 'ಆಪಲ್' ಅಂತ ಹೆಸರಿಟ್ಟಿದ್ದಾರೆ. ಸದ್ಯ ಆಪರ್ ಸಖತ್ ಫೇಮಸ್ ಆಗಿದೆ.

ಆಪಲ್ ಇನ್‌ಸ್ಟಾಗ್ರಾಂ ಸ್ಟಾರ್

'ಆಪಲ್' ತುಂಬಾ ಚೂಟಿ ಆಗಿರುವ ನಾಯಿಮರಿ. ಅದಕ್ಕಾಗಿ ಚಂದನ್ ಶೆಟ್ಟಿ ಇನ್‌ಸ್ಟಾಗ್ರಾಂ ನಲ್ಲಿ ಅಕೌಂಟ್ ಕ್ರಿಯೆಟ್ ಮಾಡಿದ್ದಾರೆ. ಆಪಲ್ ಅಕೌಂಟ್ ನಲ್ಲಿ ಅದರ ಫೋಟೋಗಳು ಮತ್ತು ವಿಡಿಯೋಗಳನ್ನ ಅಪ್ಲೋಡ್ ಮಾಡಿದ್ದಾರೆ.

ಸ್ಟಾರ್ ಗಳ ಫೋಟೊ ತೆಗೆಸಿಕೊಂಡ ಆಪಲ್

ಆಪಲ್ ಅಕೌಂಟ್ ನಲ್ಲಿ ಸ್ಟಾರ್ ಗಳ ಜೊತೆ ತೆಗಿಸಿಕೊಂಡಿರುವ ಫೋಟೋಗಳನ್ನು ಅಪ್ಲೋಡ್ ಮಾಡಲಾಗಿದೆ. ಮಾಸ್ಟರ್ ಡ್ಯಾನ್ಸರ್ ಕಾರ್ಯಕ್ರಮಕ್ಕೆ ಚಂದನ್ ಆಪಲ್ ಅನ್ನು ಕರೆದುಕೊಂಡು ಹೋಗಿದ್ದಾರೆ. ಆ ಸಂದರ್ಭದಲ್ಲಿ ಶೃತಿ ಹರಿಹರನ್ ಹಾಗೂ ಮಯೂರಿ ಆಪಲ್ ಅನ್ನು ಎತ್ತಿಕೊಂಡು ಮುದ್ದಾಡಿದ್ದಾರೆ.

ಸಾವಿರಾರು ಫ್ಯಾನ್ಸ್ ಫಾಲೋವರ್ಸ್

ಆಪಲ್ ಸಾಕಷ್ಟು ಅಭಿಮಾನಿಗಳಿದ್ದಾರೆ. ಅದರ ವಿಡಿಯೋ ಮತ್ತು ಫೋಟೋಗಳನ್ನ ನೋಡಿ ಎರಡು ಸಾವಿರಕ್ಕೂ ಹೆಚ್ಚು ಅಭಿಮಾನಿಗಳು ಅಕೌಂಟ್ ಫಾಲೋ ಮಾಡುತ್ತಿದ್ದಾರೆ. ಚಂದರ್ ಅವರಂತೆ ಅವರ ಜೊತೆ ಇರುವ ಮುದ್ದು ನಾಯಿಮರಿ ಕೂಡ ಸಖತ್ ಫೇಮಸ್ ಆಗ್ತಿದೆ.

English summary
Kannada rapper Chandan Shetty has created new instagram account in the name of his dog pup. Puppies photos and videos uploaded in the account. There are currently over 2,000 followers in instagram.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X