Don't Miss!
- Sports
ಭಾರತ ತಂಡವನ್ನು ನೋಡಿ ಕಲಿಯಿರಿ: ಪಾಕಿಸ್ತಾನ ತಂಡವನ್ನು ತರಾಟೆಗೆ ತೆಗೆದುಕೊಂಡ ಮಾಜಿ ಕ್ರಿಕೆಟಿಗ
- Technology
ಐಟೆಲ್ನಿಂದ ಮತ್ತೊಂದು ಎಂಟ್ರಿ ಲೆವೆಲ್ ಫೋನ್ ಅನಾವರಣ! ಫೀಚರ್ಸ್ ಹೇಗಿದೆ?
- News
ರಾಜಕೀಯ ದ್ವೇಷಕ್ಕೆ 15 ವರ್ಷಗಳಿಂದ ಜಮೀನಿನ ದಾರಿ ಬಂದ್; ಡಿ.ಕೆ.ಶಿ ತವರಲ್ಲಿ ಬಡ ಕುಂಟುಂಬ ಕಣ್ಣೀರು
- Finance
ಎಚ್ಡಿಎಫ್ಸಿಯಿಂದ 10ವರ್ಷದಲ್ಲಿ 30ಶತಕೋಟಿ ಸಂಗ್ರಹದ ಚಿಂತನೆ
- Automobiles
ಬೆಲೆ ಇಳಿಸಿ, ಹೆಚ್ಚಿನ ಮೈಲೇಜ್ನೊಂದಿಗೆ ಟಾಟಾ ಬಿಡುಗಡೆಗೊಳಿಸಿದ ನೆಕ್ಸಾನ್ ಇವಿ ವಿಶೇಷತೆಗಳು
- Lifestyle
ವಾರ ಭವಿಷ್ಯ ಜ.22-ಜ.28: ಈ ವಾರ ಯಾವ ರಾಶಿಯವರಿಗೆ ಅದೃಷ್ಟ, ಯಾರು ಸ್ವಲ್ಪ ಜಾಗ್ರತೆವಹಿಸಬೇಕು ನೋಡಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
Niveditha Gowda: ಸಿಹಿ ಸುದ್ದಿ; ತಂದೆ, ತಾಯಿ ಆಗ್ತಿದ್ದಾರೆ ನಿವೇದಿತಾ ಗೌಡ, ಚಂದನ್ ಶೆಟ್ಟಿ!
ಸ್ಯಾಂಡಲ್ ವುಡ್ ನ ಮುದ್ದು ಜೋಡಿಗಳಲ್ಲಿ ನಟಿ ನಿವೇದಿತಾ ಗೌಡ ಮತ್ತು ಚಂದನ್ ಶೆಟ್ಟಿ ಜೋಡಿ ಕೂಡ ಒಂದು. ಇವರ ಜೋಡಿಗೆ ದೊಡ್ಡ ಅಭಿಮಾನಿ ಬಳಗವೇ ಇದೆ. ಹಲವರ ಅಚ್ಚು ಮೆಚ್ಚಿನ ಈ ಜೋಡಿ ಈಗ ಸಿಹಿ ಸುದ್ದಿ ಕೊಟ್ಟಿದೆ.
2020ರ ಫೆಬ್ರವರಿ 26ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟ ಈ ಜೋಡಿ ಈಗ ತಮ್ಮ ಕುಟುಂಬದ ಸದಸ್ಯರ ಸಂಖ್ಯೆಯನ್ನು ಹೆಚ್ಚಿಸುತ್ತಿದೆ. ಅಂದರೆ ನಿವೇದಿತಾ, ಚಂದನ್ ಮಡಿಲಿಗೆ ಪುಟ್ಟ ಪಾಪು ಬರಲಿದೆ. ಸದ್ಯ ಚಂದನ್, ನಿವೇದಿತಾ ಕುಟುಂಬ ಸಿಕ್ಕಾಪಟ್ಟೆ ಖುಷಿಯಲ್ಲಿದೆ.
Niveditha
Gowda:
ಹಾಟ್
ಅವತಾರದಲ್ಲಿ
ನಿವೇದಿತಾ
ಗೌಡ
ಅಚ್ಚರಿಯ
ಲುಕ್!
Recommended Video

ಬೇಬಿಡಾಲ್ ನಂತೆ ಇರುವ ನಿವೇದಿತಾ ಕೈಗೆ ಪುಟ್ಟ ಬೇಬಿ ಬರಲಿದೆ. ಪುಟ್ಟ ಮಗುವಿನಂತೆ ಇರುವ ನಿವಿ ಮಗುವಿಗೆ ತಾಯಿ ಆಗುತ್ತಿದ್ದಾರೆ. ನಟಿ ಅಮೂಲ್ಯ ನಂತರ ಸಿಹಿ ಸುದ್ದಿ ಕೊಡುತ್ತಾ ಇರುವ ಜೋಡಿ ಇದು.
ತಾಯಿ ಆಗುತ್ತಿದ್ದಾರೆ ನಿವೇದಿತಾ ಗೌಡ!
ರಿಯಾಲಿಟಿ ಶೋನಲ್ಲಿ ಭಾಗವಹಿಸಿದ ನಿವೇದಿತಾ ಕರುನಾಡ ಜನರ ಮನಸ್ಸಲ್ಲಿ ಜಾಗ ಪಡೆದುಕೊಂಡಿದ್ದಾರೆ. ಕನ್ನಡಿಗರ ಮುದ್ದು ಬೇಬಿ ಡಾಲ್ ನಿವೇದಿತಾ ಅಂದರೆ ತಪ್ಪಾಗಲಾರದು. ಇತ್ತೀಚೆಗೆ ಕಿರುತೆಯಲ್ಲಿ ಹೆಚ್ಚು ಸಕ್ರಿಯವಾಗಿದ್ದರು. ಜೊತೆಗೆ ಹೊಸದೊಂದು ರಿಯಾಲಿಟಿ ಶೋನಲ್ಲಿ ಭಾಗವಹಿಸಲು ಒಪ್ಪಿಕೊಂಡಿದ್ದರು. ಈ ಮಧ್ಯೆ ಅವರು ತಾಯಿ ಆಗುತ್ತಿರುವ ಸಿಹಿ ಸುದ್ದಿ ಹೊರ ಬಂದಿದೆ.
ಚಂದನ್ ಶೆಟ್ಡಿಗೆ ಹೆಣ್ಣು ಮಗು ಅಂದರೆ ಇಷ್ಟ!
ಅಪ್ಪ ಆಗುತ್ತಿದ್ದಾರೆ ಅಂದ ಮೇಲೆ ಯಾವ ಮಗು ಬೇಕು ಎನ್ನುವ ಬಗ್ಗೆ ಒಂದಷ್ಟು ಆಸೆ ಆಕಾಂಕ್ಷೆಗಳು ಇದ್ದೇ ಇರುತ್ತವೆ. ಚಂದನ್ ಶೆಟ್ಟಿಗೆ ಹೆಣ್ಣು ಮಗು ಅಂದರೆ ಬಹಳ ಇಷ್ಟವಂತೆ. ಹಾಗಾಗಿ ಅವರು ಹೆಣ್ಣು ಮಗುವಿನ ನಿರೀಕ್ಷೆಯಲ್ಲಿ ಇದ್ದಾರೆ. ಸದ್ಯ ಈ ಸುದ್ದಿಯ ಮೂಲಕ ಈ ಜೋಡಿ ಸಂಚಲನ ಮೂಡಿಸಿದೆ.
2020ರಲ್ಲಿ ಮದುವೆ ಆದ ಚಂದನ್, ನಿವೇದಿತಾ!
ಚಂದನ್ ಮತ್ತು ನಿವೇದಿತಾ ಮದುವೆ ಆಗಿ ಎರಡು ವರ್ಷ ಆಯ್ತು. 2020ರಲ್ಲಿ 26ರಂದು ಈ ಜೋಡಿ ಕುಟುಂಬಸ್ಥರು, ಗುರುಹಿರಿಯರ ಸಮ್ಮುಖದಲ್ಲಿ ಸಪ್ತಪದಿ ತುಳಿದಿದೆ. ಮೈಸೂರಿನಲ್ಲಿ ಈ ಜೋಡಿ ವಿವಾಹ ಅದ್ದೂರಿಯಾಗಿ ನೆರವೇರಿದೆ. ಸಾಕಷ್ಟು ಸಿನಿಮಾ ತಾರೆಯರು ಕೂಡ ಇವರ ಮದುವೆ ಸಾಕ್ಷಿ ಆಗಿದ್ದರು.
ಚಂದನ್ ಪ್ರೀತಿಗೆ ನಿವೇದಿತಾ ಬೋಲ್ಡ್!
ನಿವೇದಿತಾ ಮತ್ತು ಚಂದನ್ ಶೆಟ್ಟಿ ಅವರದ್ದು ಲವ್ ಕಮ್ ಅರೇಂಜ್ ಮ್ಯಾರೇಜ್. ಪರಿಚಯ ಸ್ನೇಹವಾಗಿ, ಸ್ನೇಹ ಪ್ರೀತಿಯಾಗಿ ಬೆಳೆದು ಮನೆಯವರ ಸಮ್ಮುಖದಲ್ಲಿ ಮದುವೆ ಆಯ್ತು. ಚಂದನ್ ನಿವೇದಿತಾಗೆ ಪ್ರಪೋಸ್ ಮಾಡಿದ ರೀತಿಯೂ ವಿಭಿನ್ನವಾಗಿತ್ತು. ಈಗ ಮಗುವಿನ ನಿರೀಕ್ಷೆಯಲ್ಲಿ ಇರುವ ಈ ಜೋಡಿಗೆ ಶುಭವಾಗಲಿ ಎಂದು ಹರಸೋಣ.
("ಈ ಸುದ್ದಿ ನಿಜ ಆಗಲಿ ಎನ್ನುವುದು ಎಲ್ಲರ ಆಶಯ... ಆದರೆ ಸ್ವಲ್ಪ ಸಾವಧಾನ.. ಇಂದು ಏಪ್ರಿಲ್ 1 ಆಗಿದ್ದರಿಂದ ಏಪ್ರಿಲ್ ಫೂಲ್‌ಗಾಗಿ ಈ ಸ್ಟೋರಿ. ತಾರೆಯರ ಒಪ್ಪಿಗೆಯ ಮೇರೆಗೆ ಈ ಸುದ್ದಿ ಪ್ರಕಟಿಸಲಾಗಿದೆ.")