ಭಾವಿ ಪತ್ನಿ ನಿವೇದಿತಾಗೆ ಕೆನಡಾದಿಂದ ಸ್ವೀಟ್ ಸರ್ಪ್ರೈಸ್ ಕೊಟ್ಟ ಚಂದನ್ ಶೆಟ್ಟಿ
Recommended Video
ಇತ್ತೀಚೆಗಷ್ಟೇ ನಿಶ್ಚಿತಾರ್ಥ ಮಾಡಿಕೊಂಡ 'ಬಿಗ್ ಬಾಸ್' ವಿನ್ನರ್ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಈ ಬಾರಿ ಒಟ್ಟಿಗೆ ನ್ಯೂ ಇಯರ್ ಸೆಲೆಬ್ರೇಟ್ ಮಾಡಿಲ್ಲ. ಯಾಕಂದ್ರೆ, ಚಂದನ್ ಶೆಟ್ಟಿ ದೂರದ ಕೆನಡಾಗೆ ಹಾರಿದ್ದರೆ, ನಿವೇದಿತಾ ಗೌಡ ಮಾತ್ರ ಮೈಸೂರಿನಲ್ಲೇ ಇದ್ದಾರೆ.
2020 ಯನ್ನ ಬರಮಾಡಿಕೊಳ್ಳುವಾಗ ಭಾವಿ ಪತ್ನಿ ನಿವೇದಿತಾ ಗೌಡ ಜೊತೆ ಚಂದನ್ ಶೆಟ್ಟಿ ಇರಲಿಲ್ಲ. ಹೀಗಾಗಿ, 'ನಿವಿ' (ನಿವೇದಿತಾ ಗೌಡ) ಗೆ ಕುಕಿ (ಚಂದನ್ ಶೆಟ್ಟಿ) ಕೆನಡಾದಿಂದಲೇ ಸ್ವೀಟ್ ಸರ್ಪ್ರೈಸ್ ನೀಡಿದ್ದಾರೆ.

ಏನಪ್ಪಾ ಆ ಸರ್ಪ್ರೈಸ್.?
ಕೆನಡಾದಲ್ಲಿ ಸ್ನೋ ಏಂಜಲ್ ತಯಾರಿಸಿ, ಆ ವಿಡಿಯೋನ ನಿವೇದಿತಾ ಗೌಡಗೆ ಚಂದನ್ ಶೆಟ್ಟಿ ಕಳುಹಿಸಿದ್ದಾರೆ. ಚಂದನ್ ಶೆಟ್ಟಿ ಕಳುಹಿಸಿದ ವಿಡಿಯೋನ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡ ನಿವೇದಿತಾ, ''ಇದು ತುಂಬಾ ಕ್ಯೂಟ್ ಆಗಿದೆ. ಐ ಲವ್ ಯು ಸೋ ಮಚ್. ಹೊಸ ವರ್ಷದಂದು ನಿನ್ನನ್ನ ತುಂಬಾ ಮಿಸ್ ಮಾಡಿಕೊಂಡೆ. ಹ್ಯಾಪಿ ನ್ಯೂ ಇಯರ್ ಕುಕಿ'' ಎಂದು ಬರೆದುಕೊಂಡಿದ್ದಾರೆ.

'ಬಿಗ್ ಬಾಸ್' ಮನೆಯಲ್ಲಿ ಭೇಟಿ ಆದ ಜೋಡಿ
ಅಸಲಿಗೆ, ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಭೇಟಿ ಆಗಿದ್ದು 'ಬಿಗ್ ಬಾಸ್' ಮನೆಯೊಳಗೆ. 'ಬಿಗ್ ಬಾಸ್' ಮನೆಯಲ್ಲಿ ಕ್ಲೋಸ್ ಫ್ರೆಂಡ್ಸ್ ಆಗಿದ್ದ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ, ಕಾರ್ಯಕ್ರಮ ಮುಗಿದ ಮೇಲೂ ಗೆಳೆತನವನ್ನು ಮುಂದುವರೆಸಿದರು.

ಪ್ರಪೋಸ್ ಮಾಡಿದ ಚಂದನ್ ಶೆಟ್ಟಿ
ಚಂದನ್ ಶೆಟ್ಟಿ ಮತ್ತು ನಿವೇದಿತಾ ನಡುವಿನ ಗೆಳೆತನ ಪ್ರೀತಿಗೆ ತಿರುಗಿತು. ಮೈಸೂರು ಯುವ ದಸರಾ ವೇದಿಕೆ ಮೇಲೆ ನಿವೇದಿತಾ ಗೌಡ ಕೈಬೆರಳಿಗೆ ಉಂಗುರ ತೊಡಿಸಿ, ತಮ್ಮ ಪ್ರೀತಿಯನ್ನ ನಿವೇದಿಸಿಕೊಂಡಿದ್ದರು ಚಂದನ್ ಶೆಟ್ಟಿ. ಕೊಂಚ ಶಾಕ್ ಆಗಿದ್ದರೂ, ಚಂದನ್ ಶೆಟ್ಟಿ ಪ್ರೀತಿಗೆ ನಿವೇದಿತಾ ಗೌಡ ಸಮ್ಮತಿಸಿದರು.

ನಿಶ್ಚಿತಾರ್ಥ ಮಾಡಿಕೊಂಡ ಜೋಡಿ
ಪಬ್ಲಿಕ್ ಸ್ಟೇಜ್ ನಲ್ಲಿ ಲವ್ ಪ್ರಪೋಸಲ್ ಮಾಡಿದ್ಮೇಲೆ, ಇಬ್ಬರ ಪ್ರೀತಿಗೆ ಕುಟುಂಬ ಕೂಡ ಗ್ರೀನ್ ಸಿಗ್ನಲ್ ನೀಡಿತು. ಪರಿಣಾಮ, ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ನಿಶ್ಚಿತಾರ್ಥ ಸಮಾರಂಭ ಗ್ರ್ಯಾಂಡ್ ಆಗಿ ನಡೆಯಿತು. ಅಫೀಶಿಯಲಿ ಎಂಗೇಜ್ ಆಗಿರುವ ಈ ಜೋಡಿಯ ಮದುವೆ ದಿನಾಂಕ ಇನ್ನೂ ನಿಗದಿ ಆಗಿಲ್ಲ.


Click it and Unblock the Notifications











