»   » 19 ವರ್ಷದ ನಂತರ ಮತ್ತೆ ಒಂದಾದ ಉಪೇಂದ್ರ-ಚಾಂದಿನಿ ಜೋಡಿ

19 ವರ್ಷದ ನಂತರ ಮತ್ತೆ ಒಂದಾದ ಉಪೇಂದ್ರ-ಚಾಂದಿನಿ ಜೋಡಿ

Posted By:
Subscribe to Filmibeat Kannada

ರಿಯಲ್ ಸ್ಟಾರ್ ಉಪೇಂದ್ರ ಮೊದಲ ಬಾರಿಗೆ ನಟನಾಗಿ ಕಾಣಿಸಿಕೊಂಡಿದ್ದು 'ಎ' ಸಿನಿಮಾದ ಮೂಲಕ. ಈ ಸಿನಿಮಾದಲ್ಲಿ ಉಪ್ಪಿ ಅವರ ಜೋಡಿಯಾಗಿ ಮಿಂಚಿದ್ದು ನಟಿ ಚಾಂದಿನಿ. 'ಎ' ಸಿನಿಮಾದ ಬಳಿಕ ತಮ್ಮದೇ ಆದ ಸಿನಿಮಾಗಳಲ್ಲಿ ಬಿಜಿ ಇದ್ದ ಈ ಇಬ್ಬರು, ಈಗ ಮತ್ತೊಂದು ಸಿನಿಮಾದಲ್ಲಿ ಒಟ್ಟಿಗೆ ನಟಿಸುತ್ತಿದ್ದಾರೆ.

19 ವರ್ಷದ ಬಳಿಕ ಉಪೇಂದ್ರ ಮತ್ತು ಚಾಂದಿನಿ ಜೋಡಿ ಮತ್ತೆ ಒಂದಾಗಿದೆ. ಉಪೇಂದ್ರ ಮತ್ತು ಚಾಂದಿನಿ ಕಾಂಬಿನೇಶನ್ ನಲ್ಲಿ ಬರುತ್ತಿರುವ ಈ ಸ್ಪೆಷಲ್ ಸಿನಿಮಾದ ಕೆಲ ಮೇಕಿಂಗ್ ಫೋಟೋಗಳು ಈಗ ಹೊರಬಂದಿದೆ. ಮುಂದೆ ಓದಿ....

'ಉಪೇಂದ್ರ ಮತ್ತೆ ಹುಟ್ಟಿ ಬಾ'

ಉಪೇಂದ್ರ ನಟನೆಯ 'ಉಪೇಂದ್ರ ಮತ್ತೆ ಹುಟ್ಟಿ ಬಾ.. ಇಂತಿ ನಿನ್ನ ಪ್ರೇಮಾ ' ಚಿತ್ರದಲ್ಲಿ ಈಗ ನಟಿ ಚಾಂದಿನಿ ಕಾಣಿಸಿಕೊಂಡಿದ್ದಾರೆ.['ಉಪೇಂದ್ರ' ಮತ್ತೆ ಹುಟ್ಟಿ ಬರ್ಬೇಕಂತೆ.! ಇದು 'ಪ್ರೇಮ' ಬಯಕೆ.!]

ಸ್ಪೆಷಲ್ ಸಾಂಗ್

'ಉಪೇಂದ್ರ ಮತ್ತೆ ಹುಟ್ಟಿ ಬಾ.. ಇಂತಿ ನಿನ್ನ ಪ್ರೇಮಾ' ಸಿನಿಮಾದ ಸ್ಪೆಷಲ್ ಸಾಂಗ್ ಒಂದರಲ್ಲಿ ಉಪ್ಪಿ ಜೊತೆ ಚಾಂದಿನಿ ಹೆಜ್ಜೆ ಹಾಕಿದ್ದಾರೆ.[ಉಪ್ಪಿ ಕೈಯಿಂದ ಗೋರಂಟಿ ಹಾಕಿಸಿಕೊಳ್ಳಲಿರುವ ಹರ್ಷಿಕಾ ಪೂಣಚ್ಚ]

ಮೇಕಿಂಗ್ ಫೋಟೋಗಳು

'ಉಪೇಂದ್ರ ಮತ್ತೆ ಹುಟ್ಟಿ ಬಾ.. ಇಂತಿ ನಿನ್ನ ಪ್ರೇಮಾ' ಸಿನಿಮಾದ ಹಾಡಿನ ಚಿತ್ರೀಕರಣ ಸದ್ಯ ನಡೆಯುತ್ತಿದ್ದು, ಕೆಲ ಮೇಕಿಂಗ್ ಫೋಟೋಗಳು ರಿವಿಲ್ ಆಗಿದೆ. ಇದರಲ್ಲಿ ನಟಿ ಚಾಂದಿನಿ ಸಹ ಇದ್ದಾರೆ.[ಯಡಿಯೂರಪ್ಪ ಕುರಿತ ಚಿತ್ರದಲ್ಲಿ ಸೂಪರ್ ಸ್ಟಾರ್ ಉಪೇಂದ್ರ?]

ಕೃಷ್ಣನಾದ ಉಪ್ಪಿ

ಉಪೇಂದ್ರ ಈ ಹಾಡಿನಲ್ಲಿ 'ಶ್ರೀ ಕೃಷ್ಣ'ನ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಕಳ್ಳ ಕೃಷ್ಣನಿಗೆ ರಾಧೆಯಾಗಿ ಚಾಂದಿನಿ ಸಾಥ್ ನೀಡಿದ್ದಾರೆ.['ಉಪ್ಪಿ-ರುಪ್ಪಿ'ಯ ಫಸ್ಟ್ ಲುಕ್ ರಿಲೀಸ್]

19 ವರ್ಷದ ಬಳಿಕ

ಉಪೇಂದ್ರ ಮತ್ತು ಚಾಂದಿನಿ ಜೋಡಿಯ 'ಎ' ಸಿನಿಮಾವನ್ನು ಇವತ್ತಿಗೂ ಜನ ಮರೆತ್ತಿಲ್ಲ. ಇದೀಗ ಮತ್ತೆ ಇದೇ ಜೋಡಿ 19 ವರ್ಷದ ಬಳಿಕ ಕಾಣಿಸಿಕೊಂಡಿದ್ದು ಚಿತ್ರದ ಬಗ್ಗೆ ನಿರೀಕ್ಷೆ ಹೆಚ್ಚಾಗಿದೆ.

ನಾಯಕಿಯರ ದಂಡು

ಉಪೇಂದ್ರ ಅವರ ಈ ಸಿನಿಮಾದಲ್ಲಿ ನಾಯಕಿಯರ ದೊಡ್ಡ ದಂಡು ಇದೆ. ಪ್ರೇಮಾ, ಶ್ರುತಿ ಹರಿಹರನ್, 'ಕೋಮಾ' ಚಿತ್ರದ ಖ್ಯಾತಿಯ ಶೃತಿ, ಹರ್ಷಿಕಾ ಪೂಣಚ್ಛ, ದೀಪ್ತಿ ಕಪ್ಸೆ, ಮತ್ತು ಚಾಂದಿನಿ ಚಿತ್ರದಲ್ಲಿದ್ದಾರೆ.

ಚಿತ್ರದ ಬಗ್ಗೆ

'ಉಪೇಂದ್ರ ಮತ್ತೆ ಹುಟ್ಟಿ ಬಾ.. ಇಂತಿ ನಿನ್ನ ಪ್ರೇಮಾ' ಚಿತ್ರ ತೆಲುಗಿನ 'ಸೋಗೆಡೆ ಚಿನ್ನ ನಾಯನ' ಚಿತ್ರದ ರಿಮೇಕ್ ಆಗಿದೆ. ಉಪ್ಪಿ ಶಿಷ್ಯ ಅರುಣ್ ಲೋಕನಾಥ್ 'ಹೆಚ್ ಟು ಒ' ಚಿತ್ರದ ನಂತರ ಮತ್ತೆ ಉಪ್ಪಿಗೆ ನಿರ್ದೇಶನ ಮಾಡುತ್ತಿದ್ದಾರೆ. ಸದ್ಯ ಸಿನಿಮಾದ ಮಾತಿನ ಭಾಗದ ಚಿತ್ರೀಕರಣ ಮುಗಿದಿದ್ದು, ಸಾಂಗ್ ಶೂಟಿಂಗ್ ಭರದಿಂದ ಸಾಗಿದೆ.

English summary
Kannada Actress chandini, of 'A' movie Fame is all set to shake her legs in Kannada Movie 'upendra matte hutti baa' which features Upendra in the lead.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada