For Quick Alerts
  ALLOW NOTIFICATIONS  
  For Daily Alerts

  ಡಿ ಬಾಸ್ ಅಭಿಮಾನಿಯೇ 'ರಾಬರ್ಟ್'ಗೆ ಡೈಲಾಗ್ ರೈಟರ್

  |
  ಡಿ ಬಾಸ್ ಅಭಿಮಾನಿಯೇ 'ರಾಬರ್ಟ್'ಗೆ ಡೈಲಾಗ್ ರೈಟರ್..! | Oneindia Kannada

  ಅತ್ತ ದರ್ಶನ್ 'ಯಜಮಾನ' ಸಿನಿಮಾದ ಟ್ರೇಲರ್ ನ ಡೈಲಾಗ್ ಚರ್ಚೆಗೆ ಕಾರಣವಾಗಿದೆ. ಆದರೆ, ಇತ್ತ 'ರಾಬರ್ಟ್' ಸಿನಿಮಾಗೆ ಡೈಲಾಗ್ ರೈಟರ್ ಆಯ್ಕೆ ಆಗಿದ್ದಾರೆ. ದರ್ಶನ್ ಅಭಿಮಾನಿಯೇ ಈ ಚಿತ್ರಕ್ಕೆ ಡೈಲಾಗ್ ಬರೆಯುತ್ತಿದ್ದಾರೆ ಎನ್ನುವುದು ವಿಶೇಷ ಸಂಗತಿ.

  ಇವರೇ 'ಕೆಜಿಎಫ್'ಗೆ ಶಿಳ್ಳೆ ಹೊಡೆಯುವ ಸಂಭಾಷಣೆ ಬರೆದವರು

  'ಕೆಜಿಎಫ್' ಸಿನಿಮಾಗೆ ಸಂಭಾಷಣೆ ಬರೆದ ಚಂದ್ರಮೌಳಿ ಮೊದಲ ಚಿತ್ರದಲ್ಲಿಯೇ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದರು. ಅವರ ಬಗ್ಗೆ 'ಫಿಲ್ಮಿಬೀಟ್ ಕನ್ನಡ' ಒಂದು ವಿಶೇಷ ಲೇಖನ ಸಹ ಪ್ರಕಟ ಮಾಡಿತ್ತು. ಇದೀಗ ಇಂತಹ ಪ್ರತಿಭಾವಂತ ಹುಡುಗನಿಗೆ ಮತ್ತೊಂದು ದೊಡ್ಡ ಸಿನಿಮಾದ ಅವಕಾಶ ಸಿಕ್ಕಿದೆ.

  ಈ ಬಗ್ಗೆ ಮಾತನಾಡಿರುವ ಚಂದ್ರಮೌಳಿ ''ನಾನು ದರ್ಶನ್ ಸರ್ ಅವರ ದೊಡ್ಡ ಅಭಿಮಾನಿ. ಅವರ ಮೆಜೆಸ್ಟಿಕ್ ಚಿತ್ರದಿಂದ ಇಲ್ಲಿಯವರೆಗೆ ಎಲ್ಲ ಸಿನಿಮಾವನ್ನು ಎಷ್ಟೋ ಬಾರಿ ನೋಡಿದ್ದೇನೆ. ಅವರ ಸಿನಿಮಾಗೆ ಈಗ ಡೈಲಾಗ್ ಬರೆಯುತ್ತಿರುವುದು ಖುಷಿಯ ಸಂಗತಿ'' ಎಂದರು.

  ಚಂದ್ರಮೌಳಿ ಮಾತ್ರವಲ್ಲ 'ರಾಬರ್ಟ್' ಚಿತ್ರದ ಪೋಸ್ಟರ್ ಡಿಸೈನ್ ಮಾಡಿದ್ದು ಕೂಡ ಪರಿ ಎಂಬ ದರ್ಶನ್ ಅಭಿಮಾನಿ. ಈ ಚಿತ್ರದ ಎರಡು ಪೋಸ್ಟರ್ ಗಳು ಸದ್ಯ ಹೊರಬಂದಿವೆ.

  ತರುಣ್ ಸುಧೀರ್ ಈ ಚಿತ್ರದ ನಿರ್ದೇಶನ ಮಾಡುತ್ತಿದ್ದಾರೆ. 'ಹೆಬ್ಬುಲಿ' ನಿರ್ಮಾಪಕ ಉಮಾಪತಿ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. ಸದ್ಯಕ್ಕೆ ಈ ಚಿತ್ರದ ಸ್ಕ್ರಿಪ್ಟ್ ವರ್ಕ್ ನಡೆಯುತ್ತಿದೆ.

  English summary
  Writer Chandramouli m will be write Challenging Star Darshan's 'Robert' kannada movie dialogues.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X