'ಚೌಕಿದಾರ್' ಸಿನಿಮಾ ನಿಂತು ಹೋಯ್ತಾ ? : ಏನಂತಾರೆ ನಿರ್ದೇಶಕರು?

Recommended Video

ಗಣೇಶ್ ಸಿನೆಮಾ ಬಗ್ಗೆ ನಿದೇಶಕರು ಏನಂತಾರೆ? | FILMIBEAT KANNADA

ಗೋಲ್ಟನ್ ಸ್ಟಾರ್ ಗಣೇಶ್ 'ಚೌಕಿದಾರ್' ಎಂಬ ಸಿನಿಮಾ ಮಾಡುತ್ತಾರೆ. ಎರಡು ರೀತಿಯ ಡಿಫರೆಂಟ್ ಲುಕ್ ನಲ್ಲಿ ಗಣೇಶ್ ಈ ಚಿತ್ರದಲ್ಲಿ ಇರುತ್ತಾರೆ. ಆ ಸಿನಿಮಾವನ್ನು 'ರಥಾವರ' ನಿರ್ದೇಶಕ ಚಂದ್ರಶೇಖರ್ ಬಂಡಿಯಪ್ಪ ನಿರ್ದೇಶನ ಮಾಡುತ್ತಾರೆ. ಎಂಬ ವಿಷಯ ಕೆಲ ತಿಂಗಳಿನ ಹಿಂದೆ ದೊಡ್ಡ ಸುದ್ದಿ ಮಾಡಿತ್ತು.

ಆದರೆ, ಈಗ ಈ ಸಿನಿಮಾ ನಿಂತು ಹೋಗುತ್ತದೆ ಎನ್ನುವ ಮತ್ತೊಂದು ಸುದ್ದಿ ಬಂದಿದೆ. ಸಂಪೂರ್ಣ ಕಥೆ ಹೇಳಿದೆ, ಗಣೇಶ್ ಅವರ ಅಧಿಕೃತ ಒಪ್ಪಿಗೆ ಪಡೆಯದೆ ಚಂದ್ರಶೇಖರ್ ಬಂಡಿಯಪ್ಪ ಸಿನಿಮಾದ ಬಗ್ಗೆ ಮಾತನಾಡಿದ್ದಾರೆ. ಹೀಗಾಗಿ 'ಚೌಕಿದಾರ್' ಸಿನಿಮಾ ಶುರು ಆಗುವುದಿಲ್ಲ ಎನ್ನುವ ಸುದ್ದಿ ಶುರುವಾಗಿದೆ.

ಹಾಗಾದರೆ, 'ಚೌಕಿದಾರ್' ಸಿನಿಮಾ ಬರುತ್ತದೆಯೋ, ಇಲ್ವೋ? ಎನ್ನುವ ಅನುಮಾನ ಮೂಡಿದೆ. ಇದೀಗ ಈ ಗೊಂದಲದ ಬಗ್ಗೆ ಚಂದ್ರಶೇಖರ್ ಬಂಡಿಯಪ್ಪ ಸ್ಪಷ್ಟನೆ ನೀಡಿದ್ದಾರೆ. ಫಿಲ್ಮಿಬೀಟ್ ಕನ್ನಡದ ಜೊತೆಗೆ ಮಾತನಾಡಿದ ನಿರ್ದೇಶಕರು ಆಡಿದ ಮಾತುಗಳು ಹೀಗಿವೆ.

ನಾನು ಹೇಳಿದ್ದು ಕೂಡ ಅದೇ

ನಾನು ಹೇಳಿದ್ದು ಕೂಡ ಅದೇ

ಚಿತ್ರದ ಗೊಂದಲದ ಬಗ್ಗೆ ಮಾತನಾಡಿರುವ ಚಂದ್ರಶೇಖರ್ ಬಂಡಿಯಪ್ಪ ''ನಾನು ಕೂಡ ಸಿನಿಮಾ ಇನ್ನೂ ಅಂತಿಮ ಆಗಿಲ್ಲ ಅಂತಲೇ ಹೇಳಿದ್ದೆ. ಗಣೇಶ್ ಸರ್ ಗೆ ನಾನು ಹೇಳಿದ ಲೈನ್ ಇಷ್ಟ ಆಗಿದೆ. ಆದರೆ, ಇನ್ನು ಫೈನಲ್ ರೀಡಿಂಗ್ ನೀಡುವುದು ಬಾಕಿ ಇದೆ. ಇದನ್ನೇ ನಾನು ಆಗಲೂ ಹೇಳಿದೆ.'' ಎಂದಿದ್ದಾರೆ.

'ಚೌಕಿದಾರ್' ಎನ್ನುವ ಹೆಸರೇ ಸುದ್ದಿಯಾಯ್ತು

'ಚೌಕಿದಾರ್' ಎನ್ನುವ ಹೆಸರೇ ಸುದ್ದಿಯಾಯ್ತು

''ಚೌಕಿದಾರ್' ಸಿನಿಮಾ ಮಾಡುತ್ತಿದ್ದೇನೆ ಎಂದು ನಾನು ಎಲ್ಲಿಯೂ ಅನೌನ್ಸ್ ಮಾಡಿರಲಿಲ್ಲ. ಸಿನಿಮಾದ ಬಗ್ಗೆ ಸಣ್ಣ ಗಾಸಿಪ್ ಬಂದಾಗ, ಹೌದು.. ಚಿತ್ರ ಮಾಡುವ ತಯಾರಿ ನಡೆದಿದೆ ಎಂದು ಆ ಸುದ್ದಿಗೆ ಪ್ರತಿಕ್ರಿಯೆ ನೀಡಿದ್ದೆ ಅಷ್ಟೇ. ಆದರೆ, ಬಳಿಕ 'ಚೌಕಿದಾರ್' ಎನ್ನುವ ಟೈಟಲ್ ದೊಡ್ಡ ಮಟ್ಟಿಗೆ ಪ್ರಚಾರ ಆಯ್ತು.''

ಮಾತುಕತೆಗಳು ಇನ್ನು ಮುಗಿದಿಲ್ಲ

ಮಾತುಕತೆಗಳು ಇನ್ನು ಮುಗಿದಿಲ್ಲ

''ಚೌಕಿದಾರ್' ಸಿನಿಮಾದ ಬಗ್ಗೆ ಗಣೇಶ್ ಸರ್ ಜೊತೆಗೆ ಮಾತುಕತೆಗಳು ಇನ್ನು ನಡೆಯುತ್ತಿದೆ. ಅವರಿಗೆ ಪೂರ್ಣ ಕಥೆ ಹೇಳಬೇಕು, ಅವರು ಆ ಪಾತ್ರವನ್ನು ಮಾಡಲು ಸಿದ್ಧರಾಗಬೇಕು, ಸಂಭಾವನೆ, ಪ್ರೊಡಕ್ಷನ್ ಟೀಮ್ ಎಲ್ಲವೂ ಅವರಿಗೂ ಸರಿ ಎನಿಸಬೇಕು. ಹೀಗೆ ಅನೇಕ ಕೆಲಸಗಳು ಬಾಕಿದೆ ಇದೆ.''

ಗಣೇಶ್ ಸಿನಿಮಾ ಮಾಡ್ತಾರಾ, ಇಲ್ವಾ?

ಗಣೇಶ್ ಸಿನಿಮಾ ಮಾಡ್ತಾರಾ, ಇಲ್ವಾ?

ಹಾಗಾದ್ರೆ, 'ಚೌಕೀದಾರ್' ಸಿನಿಮಾ ಆಗುತ್ತದೆಯೇ ಇಲ್ವಾ ಎನ್ನುವ ಪ್ರಶ್ನೆಗೆ ಬಂಡಿಯಪ್ಪ ನೇರವಾಗಿ ಉತ್ತರ ನೀಡಿದ್ದಾರೆ. ''ಸಿನಿಮಾ ಆಗಬೇಕು ಎಂದು ಇದ್ದರೆ, ಖಂಡಿತ ಆಗೇ ಆಗುತ್ತದೆ. ಅದಕ್ಕೆ ಎಲ್ಲ ಕೂಡಿ ಬರಬೇಕು.'' ಎಂದಿದ್ದಾರೆ. ಗಣೇಶ್ ಜೊತೆಗೆ ಯಾವುದೇ ಮನಸ್ತಾಪ ಇಲ್ಲ ಅವರ ನಾಳೆ ಹುಟ್ಟುಹಬ್ಬಕ್ಕೂ ಹೋಗಬೇಕು ಎಂದು ತಿಳಿಸಿದ್ದಾರೆ.

ಗಣೇಶ್ ಚಿತ್ರಗಳಲ್ಲಿ ಬಂಡಿಯಪ್ಪ ಕೆಲಸ

ಗಣೇಶ್ ಚಿತ್ರಗಳಲ್ಲಿ ಬಂಡಿಯಪ್ಪ ಕೆಲಸ

ಚಂದ್ರಶೇಖರ್ ಬಂಡಿಯಪ್ಪ ಈ ಹಿಂದೆ ಗಣೇಶ್ ಅವರ 'ಚೆಲುವಿನ ಚಿತ್ತಾರ' ಹಾಗೂ 'ಶೈಲೂ' ಚಿತ್ರಗಳಿಗೆ ಸಹಾಯಕ ಹಾಗೂ ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ಎರಡು ವರ್ಷದಿಂದ ಗಣೀಗೆ ಒಂದು ಚಿತ್ರ ಮಾಡಬೇಕು ಎನ್ನುವ ಪ್ಲಾನ್ ಇತ್ತು. ಹೀಗಾಗಿ, 'ಚೌಕಿದಾರ್' ಸಿನಿಮಾ ಶುರು ಆಗಿತ್ತು.

More from Filmibeat

English summary
Kannada director Chandrashekhar Bandiyappa spoke about 'Chowkidar' movie gossip. 'Chowkidar' movie will be starring Kannada actor Ganesh.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X