twitter
    For Quick Alerts
    ALLOW NOTIFICATIONS  
    For Daily Alerts

    ಬಹುಕೋಟಿ ವಂಚನೆ: ನಿರ್ಮಾಪಕ ಆನಂದ್ ಅಪ್ಪುಗೋಳ ವಿರುದ್ಧ ಚಾರ್ಜ್ ಶೀಟ್

    |

    ದರ್ಶನ್ ಅಭಿನಯದ ಹಿಟ್ ಸಂಗೊಳ್ಳಿರಾಯಣ್ಣ ಸಿನಿಮಾ ನಿರ್ಮಾಪಕ ಆನಂದ್ ಅಪ್ಪುಗೋಳ ವಿರುದ್ಧ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚಾರ್ಜ್‌ಶೀಟ್ ದಾಖಲಾಗಿದೆ.

    Recommended Video

    ಮೊದಲ ಸಿನಿಮಾದಲ್ಲೇ Superstar Niranjan 6 packs | Filmibeat Kannada

    ಸಂಗೊಳ್ಳಿ ರಾಯಣ್ಣ ಸೊಸೈಟಿಯಲ್ಲಿ ಕೋಟ್ಯಂತರ ಹಣದ ಅವ್ಯವಾಹ ನಡೆದಿರುವ ಬಗ್ಗೆ ಈ ಹಿಂದೆಯೇ ದೂರು ದಾಖಲಾಗಿ ತನಿಖೆ ನಡೆಸಲಾಗುತ್ತಿತ್ತು. ಇದಕ್ಕೆ ಸಂಬಂಧಿಸಿದಂತೆಯೇ ಇದೀಗ ತನಿಖೆ ನಡೆಸುತ್ತಿದ್ದ ಸಿಐಡಿ ಚಾರ್ಜ್‌ಶೀಟ್ ದಾಖಲಿಸಿದೆ.

    'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' ನಿರ್ಮಾಪಕ ಆನಂದ್ ಅಪ್ಪುಗೋಳ ಆಸ್ತಿ ಹರಾಜು ಕೋರಿ ಅರ್ಜಿ'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' ನಿರ್ಮಾಪಕ ಆನಂದ್ ಅಪ್ಪುಗೋಳ ಆಸ್ತಿ ಹರಾಜು ಕೋರಿ ಅರ್ಜಿ

    ನಿರ್ಮಾಪಕ ಆನಂದ್ ಅಪ್ಪುಗೋಳ ಸೇರಿ ಒಟ್ಟು 13 ಮಂದಿಯ ವಿರುದ್ಧ ಬೆಳಗಾವಿಯ ಜಿಲ್ಲಾ ಸತ್ರ ನ್ಯಾಯಾಲಯದಲ್ಲಿ 2063 ಪುಟಗಳ ಚಾರ್ಜ್ ಶೀಟ್ ಅನ್ನು ಸಿಐಡಿ ಸಲ್ಲಿಸಿದೆ.

    278 ಕೋಟಿ ರೂಪಾಯಿ ವಂಚನೆ

    278 ಕೋಟಿ ರೂಪಾಯಿ ವಂಚನೆ

    ಆನಂದ್ ಅಪ್ಪುಗೋಳ ಒಡೆತನದ ಸಂಗೊಳ್ಳಿ ರಾಯಣ್ಣ ಸೊಸೈಟಿಯಲ್ಲಿ ಬರೋಬ್ಬರಿ 278 ಕೋಟಿ ರೂಪಾಯಿ ವಂಚನೆ ಆಗಿದೆ ಎಂದು ಆರೋಪಿಸಲಾಗಿದೆ. ಸಾವಿರಾರು ಮಂದಿ ಆನಂದ್ ಅಪ್ಪುಗೋಳ ಹಾಗೂ ಸೊಸೈಟಿ ವಿರುದ್ಧ ದೂರು ನೀಡಿದ್ದಾರೆ.

    ಸಾವಿರಾರು ಮಂದಿಯಿಂದ ಹಣ ವಸೂಲಿ

    ಸಾವಿರಾರು ಮಂದಿಯಿಂದ ಹಣ ವಸೂಲಿ

    ಹಣ ದ್ವಿಗುಣಗೊಳಿಸುವ ಆಮೀಷ ಒಡ್ಡಿ ಸಾವಿರಾರು ಮಂದಿ ಸಾರ್ವಜನಿಕರಿಂದ ಆನಂದ್ ಅಪ್ಪುಗೋಳ ಹಣ ವಸೂಲಿ ಮಾಡಿದ್ದರು. ಆದರೆ ಠೇವಣಿದಾರರಿಗೆ ಹಣ ಮರಳಿಸದೆ ಸ್ವಂತಕ್ಕೆ ಹಣ ಬಳಸಿಕೊಂಡಿದ್ದಾರೆ ಎಂದು ಆನಂದ್ ಅಪ್ಪುಗೋಳ ಹಾಗೂ ಸೊಸೈಟಿಯ ನಿರ್ದೇಶಕರ ವಿರುದ್ಧ ದೂರು ದಾಖಲಾಗಿದೆ.

    ಆನಂದ್ ಅಪ್ಪುಗೊಲ್ ಜೀವನಚರಿತ್ರೆ

    26,000 ಕ್ಕೂ ಹೆಚ್ಚು ಮಂದಿಯಿಂದ ಹಣ ಠೇವಣಿ

    26,000 ಕ್ಕೂ ಹೆಚ್ಚು ಮಂದಿಯಿಂದ ಹಣ ಠೇವಣಿ

    ಬಾಗಲಕೋಟೆಯಲ್ಲಿ 13 ಶಾಖೆಯನ್ನು ಹೊಂದಿರುವ ಸಂಗೊಳ್ಳಿ ರಾಯಣ್ಣ ಸೊಸೈಟಿಯಲ್ಲಿ 26,000 ಕ್ಕೂ ಹೆಚ್ಚು ಮಂದಿ ತಮ್ಮ ಹಣ ಹೂಡಿಕೆ ಮಾಡಿದ್ದರು. ಕೆಲವೇ ವರ್ಷಗಳಲ್ಲಿ ಹಣವನ್ನು ದ್ವಿಗುಣಗೊಳಿಸುವ ಆಮೀಷವನ್ನು ಇವರಿಗೆ ಒಡ್ಡಲಾಗಿತ್ತು.

    2017 ರಲ್ಲಿ ದೂರು ದಾಖಲಿಸಲಾಗಿತ್ತು

    2017 ರಲ್ಲಿ ದೂರು ದಾಖಲಿಸಲಾಗಿತ್ತು

    ಈ ಸಂಬಂಧ ಸಹಕಾರ ಇಲಾಖೆ ಪ್ರಬಂಧಕರು 2017ರ ಪ್ರಕರಣ ದಾಖಲಿಸಿದ್ದರು. ಗ್ರಾಹಕರ ಒತ್ತಾಯದ ಮೇರೆಗೆ ರಾಜ್ಯ ಸರ್ಕಾರ ಈ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಿತ್ತು. ಇದೀಗ ತನಿಖೆ ಪೂರ್ಣಗೊಂಡಿದ್ದು, ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಲಾಗಿದೆ.

    English summary
    Charge Sheet submitted against producer Anand Appugol and 13 others in money fraud case by CID.
    Wednesday, August 19, 2020, 21:11
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X