For Quick Alerts
  ALLOW NOTIFICATIONS  
  For Daily Alerts

  ಡಿಸೆಂಬರ್‌ ತಿಂಗಳಿಗೂ ರಕ್ಷಿತ್ ಶೆಟ್ಟಿಗೂ ಅದೇನೋ ನಂಟು!

  |

  ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ನಟನೆಯ ಚಾರ್ಲಿ 777 ಸಿನಿಮಾ ಹೆಚ್ಚು ನಿರೀಕ್ಷೆ ಮೂಡಿಸಿದೆ. ಕಳೆದ ಬಾರಿ ಸಣ್ಣದೊಂದು ಟೀಸರ್ ಬಿಡುಗಡೆ ಮಾಡಿದ್ದ ಚಿತ್ರತಂಡ ವಿಶೇಷವಾದ ಅನುಭವ ನೀಡಿತ್ತು. ಕನ್ನಡದ ಜೊತೆಗೆ ಪರಭಾಷೆಯಲ್ಲಿ ಚಾರ್ಲಿ ಸಿನಿಮಾ ರಿಲೀಸ್ ಆಗುತ್ತಿದ್ದು, ದಕ್ಷಿಣ ಭಾರತದ ಪ್ರೇಕ್ಷಕರ ಗಮನ ಸೆಳೆದಿದೆ.

  Recommended Video

  ಡಿಸೆಂಬರ್ ನಲ್ಲಿ ಜಿದ್ದಾ ಜಿದ್ದಿಗೆ ಬೀಳಲಿದ್ದಾರೆ ರಕ್ಷಿತ್, ರಶ್ಮಿಕಾ

  ಇದೀಗ, ಚಾರ್ಲಿ ಸಿನಿಮಾದ ಬಿಡುಗಡೆ ದಿನಾಂಕ ಅಧಿಕೃತವಾಗಿ ಘೋಷಣೆಯಾಗಿದೆ. ಕೊರೊನಾ, ಲಾಕ್‌ಡೌನ್ ಸಮಸ್ಯೆಯಿಲ್ಲದೇ ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಇಷ್ಟೊತ್ತಿಗಾಗಲೇ ಚಾರ್ಲಿ ದರ್ಶನ ಆಗಬೇಕಿತ್ತು. ಬದಲಾದ ಪರಿಸ್ಥಿತಿಯ ನಡುವೆ ಈಗ ಹೊಸ ದಿನಾಂಕ ಪ್ರಕಟಿಸಿದೆ. ಗೌರಿ-ಗಣೇಶ ಹಬ್ಬದ ವಿಶೇಷವಾಗಿ ರಿಲೀಸ್ ದಿನಾಂಕ ಘೋಷಿಸಿರುವ ಚಿತ್ರತಂಡ ಡಿಸೆಂಬರ್ ತಿಂಗಳನ್ನು ಆಯ್ಕೆ ಮಾಡಿಕೊಂಡದೆ.

  ರಕ್ಷಿತ್ v/s ರಶ್ಮಿಕಾ; ಡಿಸೆಂಬರ್ ನಲ್ಲಿ 'ಪುಷ್ಪ' ಮತ್ತು '777 ಚಾರ್ಲಿ' ನಡುವೆ ಪೈಪೋಟಿ ರಕ್ಷಿತ್ v/s ರಶ್ಮಿಕಾ; ಡಿಸೆಂಬರ್ ನಲ್ಲಿ 'ಪುಷ್ಪ' ಮತ್ತು '777 ಚಾರ್ಲಿ' ನಡುವೆ ಪೈಪೋಟಿ

  ಸ್ವತಃ ಚಿತ್ರತಂಡವೇ ಪ್ರಕಟಿಸಿರುವಂತೆ ಡಿಸೆಂಬರ್ 31 ರಂದು ಚಾರ್ಲಿ 777 ಸಿನಿಮಾ ಥಿಯೇಟರ್‌ಗೆ ಬರಲಿದೆ. ಈ ಮೂಲಕ ಮತ್ತೊಮ್ಮೆ ಡಿಸೆಂಬರ್ ತಿಂಗಳ ಜೊತೆ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ ರಕ್ಷಿತ್ ಶೆಟ್ಟಿ. ಮುಂದೆ ಓದಿ...

  ಕಿರಿಕ್ ಪಾರ್ಟಿ ಬಂದಿದ್ದು ಡಿಸೆಂಬರ್‌ನಲ್ಲೇ

  ಕಿರಿಕ್ ಪಾರ್ಟಿ ಬಂದಿದ್ದು ಡಿಸೆಂಬರ್‌ನಲ್ಲೇ

  ರಕ್ಷಿತ್ ಶೆಟ್ಟಿ, ರಶ್ಮಿಕಾ ಮಂದಣ್ಣ, ಸಂಯುಕ್ತ ಹೆಗ್ಡೆ ನಟಿಸಿದ್ದ ಕಿರಿಕ್ ಪಾರ್ಟಿ ಸಿನಿಮಾ ಬಿಡುಗಡೆಯಾಗಿದ್ದು ಡಿಸೆಂಬರ್ ತಿಂಗಳಲ್ಲೇ. 2016ರ ಡಿಸೆಂಬರ್ 30 ರಂದು, ಅಂದ್ರೆ ಕೊನೆಯ ವಾರ ಕಿರಿಕ್ ಪಾರ್ಟಿ ಚಿತ್ರಮಂದಿರಕ್ಕೆ ಬಂದಿತ್ತು. ರಿಷಬ್ ಶೆಟ್ಟಿ ನಿರ್ದೇಶಿಸಿದ್ದ ಈ ಚಿತ್ರ ನಿರೀಕ್ಷೆಗೂ ಮೀರಿ ಯಶಸ್ಸು ಕಂಡಿತ್ತು.

  ರಕ್ಷಿತ್ ಶೆಟ್ಟಿ ಕಡೆಯಿಂದ ಗೌರಿ-ಗಣೇಶ ಹಬ್ಬಕ್ಕೆ ಸಿಕ್ತಿದೆ ಭರ್ಜರಿ ಗಿಫ್ಟ್ರಕ್ಷಿತ್ ಶೆಟ್ಟಿ ಕಡೆಯಿಂದ ಗೌರಿ-ಗಣೇಶ ಹಬ್ಬಕ್ಕೆ ಸಿಕ್ತಿದೆ ಭರ್ಜರಿ ಗಿಫ್ಟ್

  ಕಿರಿಕ್ ದಾರಿಯಲ್ಲಿ 'ಶ್ರೀಮನ್ನಾರಾಯಣ'

  ಕಿರಿಕ್ ದಾರಿಯಲ್ಲಿ 'ಶ್ರೀಮನ್ನಾರಾಯಣ'

  ಆ ನಂತರ ಬಂದ ಅವನೇ ಶ್ರೀಮನ್ನಾರಾಯಣ ಚಿತ್ರವೂ ಡಿಸೆಂಬರ್ ತಿಂಗಳಲ್ಲೇ ತೆರೆಗೆ ಬಂದಿದೆ. ಭಾರಿ ಬಜೆಟ್, ತೆಲುಗು, ತಮಿಳಿನಲ್ಲೂ ಈ ಚಿತ್ರ ರಿಲೀಸ್ ಆಗಿದ್ದು ವಿಶೇಷ. ಮೇಕಿಂಗ್‌ನಿಂದ ಹೆಚ್ಚು ಕುತೂಹಲ ಮೂಡಿಸಿದ್ದ ಈ ಸಿನಿಮಾ 2019ರ ಡಿಸೆಂಬರ್ 27 ರಂದು ರಿಲೀಸ್ ಆಗಿತ್ತು. ಕೆಜಿಎಫ್ ಚಿತ್ರ ಬಿಡುಗಡೆಯಾದ್ಮೇಲೆ ಬಂದಿದ್ದ ಕಾರಣ, ದೊಡ್ಡ ಹೈಪ್ ಇತ್ತು. ಗಳಿಕೆ ಸುಮಾರಾಗಿದ್ದರೂ, ನಿರೀಕ್ಷಿತ ಮಟ್ಟಕ್ಕೆ ಅವನೇ ಶ್ರೀಮನ್ನಾರಾಯಣ ಸಕ್ಸಸ್ ಕಂಡಿಲ್ಲ. ಸುಮಾರು ಮೂರು ಗಂಟೆಯ ಈ ಸಿನಿಮಾಗೆ ಸಚಿನ್ ನಿರ್ದೇಶನವಿತ್ತು. ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಣ ಮಾಡಿದ್ದರು. ರಕ್ಷಿತ್ ಶೆಟ್ಟಿ, ಶಾನ್ವಿ ಶ್ರೀವಾಸ್ತವ್, ಪ್ರಮೋದ್ ಶೆಟ್ಟಿ, ಅಚ್ಯುತ್ ಕುಮಾರ್, ಬಾಲಾಜಿ ಮನೋಹರ್, ಮಧುಸೂದನ್ ರಾವ್, ಚಂದನ್ ಆಚಾರ್ ಸೇರಿದಂತೆ ಹಲವರು ನಟಿಸಿದ್ದರು.

  ಈಗ ಚಾರ್ಲಿ 777

  ಈಗ ಚಾರ್ಲಿ 777

  ಈಗ ರಕ್ಷಿತ್ ಶೆಟ್ಟಿ ಅಭಿನಯದ ಚಾರ್ಲಿ 777 ಡಿಸೆಂಬರ್ 31ಕ್ಕೆ ಬರುವುದಾಗಿ ಪ್ರಕಟಿಸಿದೆ. ಇದನ್ನು ಗಮನಿಸಿದ ಸಿನಿಮಾ ಮಂದಿ ಡಿಸೆಂಬರ್ ತಿಂಗಳು ರಕ್ಷಿತ್ ಶೆಟ್ಟಿಗೆ ಅದೃಷ್ಟವಿರಬೇಕು ಎನ್ನುತ್ತಿದ್ದಾರೆ. ಗೌರಿ ಗಣೇಶ ಹಬ್ಬದ ಪ್ರಯುಕ್ತ 'ಟಾರ್ಚರ್' ವಿಡಿಯೋ ಹಾಡು ಸಾಂಗ್ ಬಿಡುಗಡೆಯಾಗಲಿದೆ. ರಕ್ಷಿತ್ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸಿರುವ ಈ ಚಿತ್ರಕ್ಕೆ ಕಿರಣ್ ರಾಜ್ ಆಕ್ಷನ್ ಕಟ್ ಹೇಳಿದ್ದಾರೆ. ರಕ್ಷಿತ್ ಜೊತೆಗೆ ಸಂಗೀತ ಶೃಂಗೇರಿ, ರಾಜ್ ಬಿ ಶೆಟ್ಟಿ, ದಾನಿಶ್ ಸೇಠ್, ಬಾಬಿ ಸಿಂಹ ಇನ್ನೂ ಹಲವರು ಕಾಣಿಸಿಕೊಂಡಿದ್ದಾರೆ.

  ರಿಚರ್ಡ್ ಆಂಟೋನಿ

  ರಿಚರ್ಡ್ ಆಂಟೋನಿ

  777 ಚಾರ್ಲಿ ಸಿನಿಮಾ ಹೊರತುಪಡಿಸಿ ರಕ್ಷಿತ್ ಶೆಟ್ಟಿ ತುಂಬಾ ಬ್ಯುಸಿ ಇದ್ದಾರೆ. ಹೇಮಂತ್ ರಾವ್ ನಿರ್ದೇಶನದಲ್ಲಿ ತಯಾರಾಗುತ್ತಿರುವ 'ಸಪ್ತಸಾಗರದಾಚೆ ಎಲ್ಲೋ' ಚಿತ್ರೀಕರಣ ಸಾಗುತ್ತಿದೆ. ಇತ್ತೀಚಿಗಷ್ಟೆ ಹೊಂಬಾಳೆ ಫಿಲಂಸ್ ಜೊತೆ ಹೊಸ ಸಿನಿಮಾ ಘೋಷಣೆ ಮಾಡಿದ್ದು, ಆ ಚಿತ್ರಕ್ಕೆ 'ರಿಚರ್ಡ್ ಆಂಟೋನಿ' ಎಂದು ಹೆಸರಿಡಲಾಗಿದೆ. ಇದಾದ ಬಳಿಕ 'ಪುಣ್ಯಕೋಟಿ' ಚಿತ್ರ ಕೈಗೆತ್ತಿಕೊಳ್ಳಲಿದ್ದು, ರಕ್ಷಿತ್ ನಿರ್ದೇಶನ ಮಾಡಲಿದ್ದಾರೆ.

  English summary
  Simple star Rakshit Shetty Starrer 777 Charlie Movie to Release on December 31.
  Friday, September 10, 2021, 10:10
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X