»   » ಪುನೀತ್ 'ಯಾರೇ ಕೂಗಾಡಲಿ'ಗೆ ಚಾರ್ಮಿ ಐಟಂ ಸಾಂಗ್

ಪುನೀತ್ 'ಯಾರೇ ಕೂಗಾಡಲಿ'ಗೆ ಚಾರ್ಮಿ ಐಟಂ ಸಾಂಗ್

Posted By:
Subscribe to Filmibeat Kannada

ನಟಿ ಚಾರ್ಮಿ ಕೌರ್ ಕನ್ನಡದ ಚಿತ್ರವೊಂದರಲ್ಲಿ ಮೊದಲಬಾರಿಗೆ 'ಐಟಂ ನಂಬರ್' ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಬರಲಿರುವ 'ಯಾರೇ ಕೂಗಾಡಲೀ' ಚಿತ್ರದಲ್ಲಿ ಅವರು ಐಟಂ ಸಾಂಗ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಮೊದಲು ದಿಗಂತ್ ನಟನೆಯ 'ದೇವ್, ಸನ್ ಆಫ್ ಮುದ್ದೇಗೌಡ' ಹಾಗೂ ಶಿವರಾಜ್ ಕುಮಾರ್ ನಾಯಕತ್ವದ 'ಲವ-ಕುಶ' ಚಿತ್ರದಲ್ಲಿ ಅವರು ನಾಯಕಿ ನಟಿಯಾಗಿ ಕಾಣಿಸಿಕೊಂಡಿದ್ದರು.

ಈ ವಿಷಯವನ್ನು ಸ್ವತಃ ನಟಿ ಚಾರ್ಮಿ ಕೌರ್ ತಮ್ಮ ಟ್ವಿಟ್ಟರಿನಲ್ಲಿ ಬಹಿರಂಗಗೊಳಿಸಿದ್ದಾರೆ. ""Flite to B'lore in 1 hr.. Shooting a special song in a Kannada film starring Mr Puneet Rajkumar, hope my Karnataka fans r happy vit dis news," ಎಂದು ಟ್ವೀಟ್ ಮಾಡಿದ್ದಾರೆ ಚಾರ್ಮಿ. ಈ ಹಾಡಿನ ಸಾಹಿತ್ಯವನ್ನು ಯೋಗರಾಜ್ ಭಟ್ ಬರೆದಿದ್ದು ಸಂಗೀತ ನೀಡಿರುವವರು ವಿ ಹರಿಕೃಷ್ಣ.

'ಯಾರೇ ಕೂಗಾಡಲೀ' ಚಿತ್ರದಲ್ಲಿ ಪುನೀತ್ ಜೋಡಿಯಾಗಿ ಭಾವನಾ ಅಭಿನಯಿಸಿದ್ದಾರೆ. ಪುನೀತ್ ರಾಜ್ ಕುಮಾರ್ ಜೊತೆ ಇನ್ನೊಬ್ಬ ನಾಯಕರಾಗಿ ಅಭಿನಯಿಸಿರುವ ಲೂಸ್ ಮಾದ ಯೋಗೇಶ್ ಜೋಡಿಯಾಗಿ ನಟಿ ಸಿಂಧು ಲೋಕನಾಥ್ ಇದ್ದಾರೆ. ಈ ಚಿತ್ರವು ತಮಿಳು ಸೂಪರ್ ಹಿಟ್ ಚಿತ್ರ 'ಪೊರಾಲಿ' ರೀಮೇಕ್. ಮೂಲ ಚಿತ್ರದ ನಿರ್ದೇಶಕ ಸಮುದ್ರಕನಿ ಅವರೇ ಕನ್ನಡದ ಈ ರೀಮೇಕ್ ಚಿತ್ರಕ್ಕೂ ನಿರ್ದೇಶಕರು.

ಈ ಚಿತ್ರವನ್ನು ರಾಘವೇಂದ್ರ ರಾಜ್ ಕುಮಾರ್ ನಿರ್ಮಿಸುತ್ತಿದ್ದು ಚಿತ್ರಕ್ಕೆ ವಿ ಹರಿಕೃಷ್ಣ ಸಂಗೀತ ಹಾಗೂ ಸುಕುಮಾರ್ ಛಾಯಾಗ್ರಹಣವಿದೆ. ಒಟ್ಟಿನಲ್ಲಿ, ಈ ಮೊದಲು ಕನ್ನಡದಲ್ಲಿ ನಾಯಕಿಯಾಗಿ ನಟಿಸಿದ್ದ ಚಾರ್ಮಿ, ಸದ್ಯದಲ್ಲೇ 'ಐಟಂ ಸಾಂಗ್'ನಲ್ಲಿ ಕಾಣಿಸಿಕೊಳ್ಳುತ್ತಿರುವುದು ಹೊಸ ಬೆಳವಣಿಗೆ. ಚಾರ್ಮಿ ಅಭಿಮಾನಿಗಳಿಗೆ ಈ ಸಮಾಚಾರ ಖುಷಿ ತಂದಿರಬಹುದು. ಸ್ವತಃ ಚಾರ್ಮಿ ಈ ಅವಕಾಶದಿಂದ ಪುಳಕಿತರಾಗಿ ಟ್ವೀಟ್ ಮಾಡಿದ್ದಾರೆ. (ಒನ್ ಇಂಡಿಯಾ ಕನ್ನಡ)

English summary
Actress Charmy Kaur, who had acted in two Sandalwood movies before, is doing an item number in Kannada. Well, she will be doing the special song in Puneet Rajkumar's upcoming movie Yaare Koogadali.
 
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada