»   » ಲಯೇಂದ್ರ ವಿರುದ್ಧ ರು.3 ಲಕ್ಷಗಳ ವಂಚನೆ ಆರೋಪ

ಲಯೇಂದ್ರ ವಿರುದ್ಧ ರು.3 ಲಕ್ಷಗಳ ವಂಚನೆ ಆರೋಪ

Posted By:
Subscribe to Filmibeat Kannada

ಬಿಗ್ ಬಾಸ್ ರಿಯಾಲಿಟಿ ಶೋನಿಂದ ಹೊರಬಂದ ಬಳಿಕ ಸುದ್ದಿಯೇ ಇಲ್ಲದಂತಿದ್ದ ಪೋಷಕ ನಟ ಹಾಗೂ ಸಂಗೀತ ನಿರ್ದೇಶಕ ಲಯೇಂದ್ರ ಅವರು ಇದೀಗ ವಂಚನ ಆರೋಪ ಪ್ರಕರಣದಲ್ಲಿ ಸಿಲುಕಿದ್ದಾರೆ. ಲಯೇಂದ್ರ ಅಲಿಯಾಸ್ ಲಯ ಕೋಕಿಲ ಅವರ ಮೇಲೆ ವಂಚನೆ ಆರೋಪ ಮಾಡುತ್ತಿರುವವರು ನಿರ್ಮಾಪಕ ಕುಮಾರ್.

ಇವರು 'ಶಂಭೋ ಮಹದೇವ' ಎಂಬ ಚಿತ್ರವನ್ನು ನಿರ್ಮಿಸಿದ್ದು ಅದರ ಡಿಜಿಟಲೈಸ್ ಸಂಬಂಧ ಲಯೇಂದ್ರ ಅವರಿಗೆ ರು.3 ಲಕ್ಷ ಕೊಟ್ಟಿದ್ದರಂತೆ. ಈಗ ಕೆಲಸವನ್ನೂ ಮಾಡಿಕೊಡದೆ ಹಣವನ್ನೂ ವಾಪಸು ಮಾಡದೆ ತಮ್ಮನ್ನು ಸತಾಯಿಸುತ್ತಿದ್ದಾರೆ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ದೂರು ನೀಡಿದ್ದಾರೆ. [ಬಿಗ್ ಬಾಸ್ ಮನೆಯ ಖತರ್ನಾಕ್ ಕಿಲಾಡಿಗಳು]

Layendra and Sadhu Kokila

ಈ ಸಂಬಂಧ ವಾಣಿಜ್ಯ ಮಂಡಳಿಯಲ್ಲಿ ಇಂದು (ಸೆ.20) ವಿಚಾರಣೆಗೆ ಲಯೇಂದ್ರ ಹಾಜರಾಗಬೇಕಿತ್ತು. ಆದರೆ ಅವರು ಗೈರುಹಾಜರಾಗಿದ್ದು, ತಮ್ಮ ಸಂಪರ್ಕಕ್ಕೂ ಸಿಗುತ್ತಿಲ್ಲ ಎಂದು ಕುಮಾರ್ ದೂರಿದ್ದಾರೆ. ಲಯೇಂದ್ರ ಅವರನ್ನು ಐದು ವರ್ಷ ಬ್ಯಾನ್ ಮಾಡಬೇಕು ಎಂದೂ ಅವರು ಆಗ್ರಹಿಸಿದ್ದಾರೆ.

ಸದಾ ವಿವಾದಗಳಿಂದ ದೂರ ಉಳಿದಿದ್ದ ಲಯೇಂದ್ರ ಅವರ ಸಾಧು ಕೋಕಿಲ ಅವರ ಸಹೋದರ. ಬಿಗ್ ಬಾಸ್ ಮನೆಯಲ್ಲಿದ್ದಾಗಲೂ ಅವರು ತಮ್ಮ ಸೌಮ್ಯ ಸ್ವಭಾವದಿಂದ ಮನೆಯ ಸದಸ್ಯರಿಗೆ ಪರಮಾಪ್ತರಾಗಿದ್ದರು. ಇದೀಗ ಅವರ ಮೇಲೆ ವಂಚನೆ ಆರೋಪ ಕೇಳಿಬಂದ್ದಿದ್ದು ಈ ಬಗ್ಗೆ ಅವರು ಇನ್ನಷ್ಟೇ ಪ್ರತಿಕ್ರಿಯಿಸಬೇಕಾಗಿದೆ. (ಏಜೆನ್ಸೀಸ್)

English summary
Sandalwood producer Kumar of Kannada movie 'Shambo Mahadeva' had made allegation against music director and character artist Layendra. He alleges that, "Layendra cheats Rs 3 lakh to him". In this connection, Kumar had filed a complaint against him at KFCC.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada