»   » ಚೀಟಿಂಗ್ ಕೇಸ್; ಕಡೆಗೂ ಬಾಯ್ಬಿಟ್ಟ ನಟಿ ಮೇಘನಾ ರಾಜ್!

ಚೀಟಿಂಗ್ ಕೇಸ್; ಕಡೆಗೂ ಬಾಯ್ಬಿಟ್ಟ ನಟಿ ಮೇಘನಾ ರಾಜ್!

Posted By:
Subscribe to Filmibeat Kannada

ಇಂದು ಬೆಳಗ್ಗಿನಿಂದ ಸ್ಯಾಂಡಲ್ ವುಡ್ ಅಂಗಳದಲ್ಲಿ ಒಂದೇ ಸುದ್ದಿ. ನಟಿ ಮೇಘನಾ ರಾಜ್ ಗೆ ಮದುವೆ ಆಗಿದೆ. ತಮಿಳುನಾಡಿನ ಧರ್ಮಪುರಿ ಮೂಲದ ಜನಾರ್ಧನ್ ಎಂಬುವರನ್ನ ಮದುವೆ ಆಗಿ ಮೇಘನಾ ರಾಜ್ ವಂಚನೆ ಮಾಡಿದ್ದಾರೆ ಅಂತ.

ಅಷ್ಟಕ್ಕೂ ಈ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬಲು ಕಾರಣ ಜನಾರ್ಧನ್ ಎಂಬುವರು ಬೆಂಗಳೂರು ಪೊಲೀಸ್ ಕಮಿಷನರ್ ಗೆ ನೀಡಿದ್ದ ದೂರು. [ನಟಿ ಮೇಘನಾ ರಾಜ್ ಬಗ್ಗೆ ಕೇಳಿಬಂದಿರುವ ವಂಚನೆ ಆರೋಪ ನಿಜವೇ?]

ಸೂಕ್ತ ಸಾಕ್ಷಿ-ಆಧಾರಗಳಿಲ್ಲದ ಕಾರಣ ನಟಿ ಮೇಘನಾ ರಾಜ್ ಮೇಲೆ ಹಾಕಲಾಗಿದ್ದ ಚೀಟಿಂಗ್ ಕೇಸ್ ಕ್ಲೋಸ್ ಮಾಡಲಾಗಿದೆ. [ಇದೆಲ್ಲಾ ಮೇಘನಾ ರಾಜ್ ಹೆಸರಿಗೆ ಮಸಿ ಬಳಿಯುವ ಕೆಲಸ?]

ಬೆಳಗ್ಗಿನಿಂದ ಈ ವಿವಾದದ ಬಗ್ಗೆ ತುಟಿಕ್ ಪಿಟಿಕ್ ಎನ್ನದ ನಟಿ ಮೇಘನಾ ರಾಜ್ ಇದೀಗ ಟ್ಟೀಟ್ ಮಾಡಿದ್ದಾರೆ. ಮುಂದೆ ಓದಿ....

ಕಡೆಗೂ ಮಾತನಾಡಿದ ಮೇಘನಾ ರಾಜ್

ಟಿಂಗ್ ಕೇಸ್ ವಿವಾದದ ಬಗ್ಗೆ ನಟಿ ಮೇಘನಾ ರಾಜ್ ತಾಯಿ ಪ್ರಮೀಳಾ ಜೋಷಾಯಿ ಮಾತ್ರ ಮಾಧ್ಯಮಗಳ ಮುಂದೆ ಮಾತನಾಡಿದ್ದರು. ಬೆಂಗಳೂರಿನಲ್ಲಿ ಇರದ ಮೇಘನಾ ರಾಜ್ ಯಾರ ಫೋನ್ ಕಾಲ್ ಗೂ ಸಿಕ್ಕಿರ್ಲಿಲ್ಲ. ಇದೀಗ ಟ್ವೀಟ್ ಮಾಡುವ ಮೂಲಕ ವಿವಾದದ ಬಗ್ಗೆ ಮಾತನಾಡಿದ್ದಾರೆ. [ಮದುವೆ-ಗಂಡ ಬಗ್ಗೆ ನಟಿ ಮೇಘನಾ ರಾಜ್ ಏನಂದಿದ್ದರು ಗೊತ್ತೇ?]

ಮೇಘನಾ ರಾಜ್ ಟ್ವೀಟ್!

''ಆತ್ಮೀಯ ಸ್ನೇಹಿತರೇ, ನನ್ನ ವಿರುದ್ಧ ಕೇಳಿಬಂದ ಸುಳ್ಳು ಆರೋಪ ಇಂದು ಇಡೀ ದಿನ ಸುದ್ದಿ ಆಯ್ತು'' ಎಂದು ಮೇಘನಾ ರಾಜ್ ಟ್ವೀಟ್ ಮಾಡಿದ್ದಾರೆ. [ಜನಾರ್ಧನ್ ರವರಿಗೆ ಮೇಘನಾ ರಾಜ್ ಎಷ್ಟನೇ ಹೆಂಡತಿ?]

ಕರ್ನಾಟಕ ಪೊಲೀಸ್ ಗೆ ಧನ್ಯವಾದ

''ಕರ್ನಾಟಕ ಪೊಲೀಸ್, ಪ್ರತಿಕೆ, ಮಾಧ್ಯಮ ಹಾಗೂ ನನ್ನ ಪರ ನಿಂತ ನನ್ನೆಲ್ಲಾ ಅಭಿಮಾನಿಗಳಿಗೆ ಧನ್ಯವಾದಗಳು. ಇಂತಹ ಆಧಾರ ರಹಿತ ಆರೋಪಗಳು ನನ್ನ ಡಿಸ್ಟರ್ಬ್ ಮಾಡುವುದಿಲ್ಲ'' - ಮೇಘನಾ ರಾಜ್ [ನಟಿ ಮೇಘನಾ ರಾಜ್ ವಿರುದ್ಧದ ಕೇಸ್ ಕ್ಲೋಸ್ ಆಗಿದ್ದೇಕೆ?]

ಕೇಸ್ ಕ್ಲೋಸ್!

''ಕೇಸ್ ಕ್ಲೋಸ್ ಮಾಡಿರುವುದಕ್ಕೆ ಎಲ್ಲರಿಗೂ ಧನ್ಯವಾದ ಸಲ್ಲಿಸುತ್ತೇನೆ'' - ಮೇಘನಾ ರಾಜ್

English summary
Kannada Actress Meghana Raj has taken her twitter account to react on the Cheating complaint which was lodged against her by Janardhan from Tamil Nadu. Janardhan alleged that Meghana Raj married him in 2015 but denied to give marriage certificate.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada