»   » ಚಂದನವನ ರಾಜಕುಮಾರಿ ರಾಧಿಕಾ ಸ್ಟೈಲ್, ಸ್ಮೈಲ್

ಚಂದನವನ ರಾಜಕುಮಾರಿ ರಾಧಿಕಾ ಸ್ಟೈಲ್, ಸ್ಮೈಲ್

By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ರಾಕಿಂಗ್ ಸ್ಟಾರ್ ಯಶ್ ಜೊತೆ ಮಿಸೆಸ್ ರಾಮಾಚಾರಿಯಾಗಿ ಯಶಸ್ಸು ಕಂಡಿರುವ 'ಚಂದನವನ ರಾಜಕುಮಾರಿ' ಬೆಡಗಿ ರಾಧಿಕಾ ಪಂಡಿತ್ ಅವರ ಮುಂದಿನ ಬಹು ನಿರೀಕ್ಷಿತ ಚಿತ್ರಗಳಾದ 'ಎಂದೆಂದಿಗೂ' ಹಾಗೂ 'ದೊಡ್ಮನೆ ಹುಡುಗ' ಯಾವಾಗ ರಿಲೀಸ್ ಆಗುವುದೋ ಎಂದು ಅಭಿಮಾನಿಗಳು ಕಾದಿದ್ದಾರೆ.

ಸ್ಟೈಲ್,ಸ್ಮೈಲ್ ಮೂಲಕ ಎಲ್ಲರ ಮನಗೆದ್ದಿರುವ ನೀಳ ಕಾಯದ ರಾಧಿಕಾ ಪಂಡಿತ್ ಅವರ ಅಭಿನಯದ ಬಗ್ಗೆ ಯಾರೂ ಕೆಮ್ಮಂಗಿಲ್ಲ. ಲಂಗ ದಾವಣಿ, ಸೀರೆ, ಸ್ಕರ್ಟ್, ಗೌನ್ ದಿರಿಸು ಯಾವುದೇ ಇರಲಿ ಸೊಗಸಾಗಿ ಕಾಣುತ್ತಾರೆ ನಮ್ಮ ಸ್ಯಾಂಡಲ್ ವುಡ್ ಪ್ರಿನ್ಸೆಸ್.[ಹತ್ತು ಭಾಷೆಗಳಿಗೆ ಶತಕ ಪೂರೈಸಿದ 'ರಾಮಾಚಾರಿ']

ಪುನೀತ್ ರಾಜ್ ಕುಮಾರ್ ಜೊತೆ ದೊಡ್ಮನೆ ಹುಡುಗ ಹಾಗೂ ಆಜಯ್ ರಾವ್ ಜೊತೆಗಿನ ಎಂದೆಂದಿಗೂ ಚಿತ್ರದಲ್ಲಿ ರಾಧಿಕಾ ಹಿಂದೆಂದಿಗಿಂತಲೂ ಮುದ್ದಾಗಿ ಕಾಣುತ್ತಿದ್ದಾರೆ.[ಕಿರುತೆರೆಯಿಂದ ಬೆಳ್ಳಿತೆರೆಗೆ ಲಗ್ಗೆ ಇಟ್ಟ ಪ್ರತಿಭೆಗಳು]

ನೃತ್ಯ ಸಂಯೋಜಕ ಇಮ್ರಾನ್ ಸರ್ದಾರಿಯಾ ನಿರ್ದೇಶನ ಕನಸಿನ ಚಿತ್ರ ಎಂದೆಂದಿಗೂ ಕೊನೆಗೂ ಮೇ.1ರಂದು ತೆರೆ ಕಾಣಲಿದೆ. ದೊಡ್ಮನೆ ಹುಡುಗ ಹಾಗೂ ಹುಡುಗಿ ಗಾಂಧಿನಗರ ಚಿತ್ರಮಂದಿರಕ್ಕೆ ಬರುವುದು ಸ್ವಲ್ಪ ತಡವಾಗುತ್ತದೆ. ಅಲ್ಲಿ ತನಕ ಈ ಎರಡು ಚಿತ್ರಗಳಲ್ಲಿ ರಾಧಿಕಾ ಹೇಗೆ ಕಾಣುತ್ತಾರೆ ಎಂಬ ಝಲಕ್ ಇಲ್ಲಿದೆ..

ಲೇಟಾದರೂ ಲೇಟೆಸ್ಟ್ ಆಗಿ ಎಂದೆಂದಿಗೂ

ಒಂದೂವರೆ ವರ್ಷವಾದ್ರೂ ರಿಲೀಸ್ ಆಗೋಕೆ ಲೇಟ್ ಆಗ್ತಾ ಇದ್ರೂ ಸಿನಿರಸಿಕರ ಆಸಕ್ತಿ ಕೆರಳಿಸಿದೆ. ವಿ ಹರಿಕೃಷ್ಣ ಸಂಗೀತ ನಿರ್ದೇಶನ ಇರುವ ಚಿತ್ರದ ಶೇಕಡಾ 80ರಷ್ಟು ಚಿತ್ರೀಕರಣ ಯೂರೋಪ್ ನಲ್ಲಿ ನಡೆದಿದ್ದರೆ ಉಳಿದ ಶೇ.20ರಷ್ಟು ಶೂಟಿಂಗ್ ಕರ್ನಾಟಕದಲ್ಲಿ ಮಾಡಲಾಗಿದೆ. ಎಸ್ ವಿ ಪ್ರೊಡಕ್ಷನ್ಸ್ ನ ಎಸ್ ವಿ ಬಾಬು ನಿರ್ಮಿಸಿರುವ ಭರ್ಜರಿ ಚಿತ್ರವಿದು. ಇಮ್ರಾನ್ ಸರ್ದಾರಿಯಾ ಚೊಚ್ಚಲ ನಿರ್ದೇಶನ ಹೇಗಿರುತ್ತೆ ಮೇ.1ರಂದು ತಪ್ಪದೇ ನೋಡಿ

ಅನುಪಮ ಸುಂದರಿಯ ಚಿತ್ರ ಅನುಪಮ ಟಾಕೀಸ್ ನಲ್ಲಿ

ಅನುಪಮ, ಪ್ರಸನ್ನ, ನಂದಿನಿ, ಉಮಾ, ಈಶ್ವರಿ, ವೀರಭದ್ರಶ್ವರ ಚಿತ್ರಮಂದಿರಗಳು, ಪಿವಿಆರ್, ಇನಾಕ್ಸ್, ಗೋಪಾಲನ್ ಸಿನಿಮಾಸ್, ಸಿನಿ ಮ್ಯಾಕ್ಸ್ ಸೇರಿದಂತೆ ಕರ್ನಾಟಕ ರಾಜ್ಯದೆಲ್ಲೆಡೆ ಮೇ.1 ರಂದು 110ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ರಾಧಿಕಾ ಪಂಡಿತ್ ಹಾಗೂ ಅಜಯ್ ರಾವ್ ಅವರ ಏಕ್ ದುಜೆ ಕೆ ಲಿಯೇ ಕಹಾನಿ ನೋಡಬಹುದು.

ಕೃಷ್ಣನ್ ಲವ್ ಸ್ಟೋರಿ ಜೋಡಿ

ಕೃಷ್ಣನ್ ಲವ್ ಸ್ಟೋರಿ ಜೋಡಿ ಮತ್ತೊಮ್ಮೆ ತೆರೆ ಮೇಲೆ ಮಿಂಚು ಹರಿಸಲು ನಿಮ್ಮ ಮುಂದೆ ಬಂದಿದೆ. ಸಾನಿಯಾ ಸರ್ದಾರಿಯಾ ಅವರ ವಸ್ತ್ರ ವಿನ್ಯಾಸದ ಬಗ್ಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

ಎಂದೆಂದಿಗೂ ಚಿತ್ರಕ್ಕೆ ಜಯತೀರ್ಥ ಕಥೆ

ಎಂದೆಂದಿಗೂ ಚಿತ್ರಕ್ಕೆ ಜಯತೀರ್ಥ ಕಥೆ ಒದಗಿಸಿದ್ದಾರೆ. ಇಮ್ರಾನ್ ಅವರು ತಮ್ಮ ಅನಿಸಿಕೆಗಳನ್ನು ಇದರಲ್ಲಿ ಸೇರಿಸಿದ್ದಾರೆ. ತುಂಬಾ ಇಷ್ಟಪಟ್ಟು ನಿರ್ದೇಶನ ಮಾಡಿದ್ದಾರೆ. ಹಾಡುಗಳ ಸಾಹಿತ್ಯ ಯೋಗರಾಜ್ ಭಟ್, ಕಲ್ಯಾಣ್ ಹಾಗೂ ಎಪಿ ಅರ್ಜುನ್ ಒದಗಿಸಿದ್ದಾರೆ.

ಅಜಯ್ -ರಾಧಿಕಾ -ಇಮ್ರಾನ್ ಗೆಲ್ಲುವರೇ?

ಅಜಯ್ -ರಾಧಿಕಾ ಪಂಡಿತ್ ಜೋಡಿ ಮತ್ತೆ ಕ್ಲಿಕ್ ಆಗುವುದೇ? ಎ. ಹರ್ಷ ನಂತರ ಕೊರಿಯಾಗ್ರಾಫರ್ ಕಮ್ ನಿರ್ದೇಶಕ ಇಮ್ರಾನ್ ಸರ್ದಾರಿಯಾ ಕೂಡಾ ನಿರ್ದೇಶನದ ಪರೀಕ್ಷೆಯಲ್ಲಿ ಪಾಸ್ ಆಗುವರೇ? ವಿಳಂಬವಾಗಿ ರಿಲೆಸ್ ಆಗುತ್ತಿರುವ ಚಿತ್ರಕ್ಕೆ ಪ್ರೇಕ್ಷಕ ಏನು ಹೇಳುತ್ತಾನೆ. ಹೆಚ್ಚಿನ ಮಾಹಿತಿಗೆ ಫಿಲ್ಮಿ ಬೀಟ್ ಕನ್ನಡ ಓದುತ್ತಿರಿ

ದೊಡ್ಮನೆ ಹುಡುಗ ಶೂಟಿಂಗ್ ಜಾರಿ

ಎಂ ಗೋವಿಂದು ಅವರು ನಿರ್ಮಿಸುತ್ತಿರುವ ಚಿತ್ರ ಇದಾಗಿದೆ. ಜಾಕಿ ಹಾಗೂ ಅಣ್ಣಾಬಾಂಡ್ ಚಿತ್ರಗಳ ಬಳಿಕ ಸೂರಿ, ಪುನೀತ್ ಕಾಂಬಿನೇಷನಲ್ಲಿ ಬರುತ್ತಿರುವ ಮೂರನೇ ಚಿತ್ರ ದೊಡ್ಮನೆ ಹುಡ್ಗ. ಆಕ್ಷನ್ ಚಿತ್ರಗಳಿಗೆ ಹೆಸರಾಗಿರುವ ದುನಿಯಾ ಸೂರಿ ಈ ಬಾರಿ ಫ್ಯಾಮಿಲಿ ಶೀರ್ಷಿಕೆ ಮೂಲಕ ಗಮನಸೆಳೆದಿದ್ದಾರೆ. ಹುಡುಗರು ನಂತರ ರಾಧಿಕಾ ಮತ್ತೊಮ್ಮೆ ಹಳ್ಳಿ ಹುಡುಗಿಯಂತೆ ಕಾಣಿಸಿಕೊಂಡಿದ್ದಾರೆ.

ಪಿಂಕ್ ಸೀರೆಯಲ್ಲಿ ರಾಧಿಕಾ ಪಂಡಿತ್

ಮಂಡ್ಯ, ಮದ್ದೂರು, ಪಾಂಡವಪುರದಲ್ಲಿ ದೊಡ್ಮನೆ ಹುಡುಗನ ಚಿತ್ರೀಕರಣ ಬಿರುಸಿನಿಂದ ಸಾಗಿದ್ದು, ಶೂಟಿಂಗ್ ವೇಳೆ ಪಿಂಕ್ ಸೀರೆಯಲ್ಲಿ ರಾಧಿಕಾ ಪಂಡಿತ್ ಕಾಣಿಸಿಕೊಂಡಿದ್ದು ಹೀಗೆ

ಲಂಗ ದಾವಣಿ, ಸೀರೆ ನಂತರ ಸ್ಕರ್ಟ್

ಲಂಗ ದಾವಣಿ, ಸೀರೆ ನಂತರ ಸ್ಕರ್ಟ್, ಹೊಸ ಹೇರ್ ಸ್ಟೈಲ್ ನಲ್ಲಿ ರಾಧಿಕಾ ಪಂಡಿತ್ ಗಮನ ಸೆಳೆದಿದ್ದಾರೆ. ಅಂದ ಹಾಗೆ ಈ ಚಿತ್ರ ಜೂಮ್ ಫಿಲಂದು. ಗೋಲ್ಡನ್ ಸ್ಟಾರ್ ಗಣೇಶ್ ನಾಯಕ.

English summary
Sandalwood Princess Actress Radhika Pandit is currently shooting for Puneeth Rajkumar starrer Dodmane Huduga and Endendigu with Ajai Rao. Both the movies created huge anticipation and Radhika's attire style make over has become talk of the town once again.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada