»   » ಹತ್ತು ಭಾಷೆಗಳಿಗೆ ಶತಕ ಪೂರೈಸಿದ 'ರಾಮಾಚಾರಿ'

ಹತ್ತು ಭಾಷೆಗಳಿಗೆ ಶತಕ ಪೂರೈಸಿದ 'ರಾಮಾಚಾರಿ'

Posted By:
Subscribe to Filmibeat Kannada

ಬರೀ ಒಂದು ವಾರ, ಎರಡು ವಾರಗಳಿಗೆ ಸಿನಿಮಾಗಳು ಎತ್ತಂಗಡಿ ಆಗುತ್ತಿರುವ ಈಗಿನ ಕಾಲದಲ್ಲಿ ರಾಕಿಂಗ್ ಸ್ಟಾರ್ ಯಶ್, ಅನೇಕ ಚಿತ್ರಮಂದಿರಗಳಲ್ಲಿ ಅಂಟಿಕೊಂಡು ಕೂತಿದ್ದಾರೆ. ಯಶ್ ಮತ್ತು ರಾಧಿಕಾ ಪಂಡಿತ್ ಅಭಿನಯದ 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಸಿನಿಮಾ ಅಮೋಘ 100 ದಿನಗಳನ್ನ ಪೂರೈಸಿದೆ.

ಹಂಡ್ರೆಡ್ ಡೇಸ್ ಆಚರಿಸಿಕೊಳ್ಳುವ ಪದ್ಧತಿಯೇ ಕಣ್ಮರೆ ಆಗುತ್ತಿರುವಾಗ, 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಬೆಂಗಳೂರಿನ ಸಂತೋಷ್ ಮತ್ತು ವೀರೇಶ್ ಚಿತ್ರಮಂದಿರಗಳಲ್ಲಿ 100 ದಿನಗಳ ಸಂಭ್ರಮವನ್ನ ಆಚರಿಸುತ್ತಿದೆ. [ತೆಲುಗು ತೆರೆಗೆ ರಾಕಿಂಗ್ ಸ್ಟಾರ್ ರಾಮಾಚಾರಿ!]


Yash starrer MR and MRS Ramachari to be remade in Telugu and Tamil

ಇದೇ ಖುಷಿಯಲ್ಲಿ ರಾಮಾಚಾರಿ ಅಡ್ಡದಿಂದ ಹೊಸ ಸುದ್ದಿ ಬ್ರೇಕ್ ಆಗಿದೆ. ಮರಾಠಿ, ಪಂಜಾಬಿ, ಹಿಂದಿ, ಮಲೆಯಾಳಂ ಮತ್ತು ಭೋಜ್ ಪುರಿ ಸೇರಿದಂತೆ ಹತ್ತು ಭಾಷೆಗಳಿಗೆ 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಡಬ್ ಆಗುತ್ತಿದೆ. [ಬಾಕ್ಸಾಫೀಸಲ್ಲಿ 'ರಾಮಾಚಾರಿ' ಕೆಣಕುವ ಗಂಡು ಯಾರೂ ಇಲ್ಲ!]


ಇದರೊಂದಿಗೆ ತೆಲುಗು ಮತ್ತು ತಮಿಳು ಭಾಷೆಗೆ ರಾಮಾಚಾರಿ ರೀಮೇಕ್ ಆಗುತ್ತಿದ್ದಾನೆ. ಟಾಲಿವುಡ್ ನಲ್ಲಿ 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ರೀಮೇಕ್ ಆಗುತ್ತಿರುವ ವಿಷಯವನ್ನ ನಾವೇ ನಿಮಗೆ ಹೇಳಿದ್ದು ನೆನಪಿದೆ ಅಲ್ವಾ. 'ಮೈತ್ರಿ' ನಿರ್ಮಾಪಕ ರಾಜ್ ಕುಮಾರ್, ತೆಲುಗಿನಲ್ಲಿ ರೀಮೇಕ್ ಮಾಡುವುದಕ್ಕೆ ಮುಂದೆ ಬಂದಿದ್ದಾರೆ. [ವಿಷ್ಣು ಅಭಿಮಾನಿಗಳೇ, 'ರಾಮಾಚಾರಿ' ನೋಡಲು ಮರೆಯದಿರಿ..]


Yash starrer MR and MRS Ramachari to be remade in Telugu and Tamil

ಈಗ ಟಾಲಿವುಡ್ ನೊಂದಿಗೆ ಕಾಲಿವುಡ್ ನಲ್ಲೂ 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ರೀಮೇಕ್ ಆಗುತ್ತಿರುವುದನ್ನ ಖುದ್ದು ನಿರ್ದೇಶಕ ಸಂತೋಷ್ ಅನಂದರಾಮ್ ಸ್ಪಷ್ಟಪಡಿಸಿದ್ದಾರೆ. ಕನ್ನಡದಲ್ಲಿ ಪರಭಾಷೆಯ ರೀಮೇಕ್ ಚಿತ್ರಗಳೇ ಹೆಚ್ಚಾಗುತ್ತಿರುವಾಗ ಕನ್ನಡದ ಸಿನಿಮಾ ಬೇರೆಲ್ಲಾ ಭಾಷೆಗಳಲ್ಲಿ ಸದ್ದು ಮಾಡೋಕೆ ಹೊರಟಿರುವುದು ಹೆಮ್ಮೆಯ ಸಂಗತಿ. ಏನಂತೀರಿ...(ಫಿಲ್ಮಿಬೀಟ್ ಕನ್ನಡ)

English summary
Rocking Star Yash starrer MR and MRS Ramachari to be remade in Telugu and Tamil. Director Santhosh Ananddram confirms the news by saying that the film will be remade and dubbed to 10 languages including Marathi, Pujabi, Hindi, Doria, Malayalam, Bhojpuri.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada