For Quick Alerts
  ALLOW NOTIFICATIONS  
  For Daily Alerts

  'ಬೆಲ್ ಬಾಟಮ್' ಪಾಸು, 'ಕೆಮಿಸ್ಟ್ರಿ ಆಫ್ ಕರಿಯಪ್ಪ'ನ ಫಾರ್ಮೂಲಾ ವರ್ಕೌಟ್

  |

  ಕಳೆದ ಶುಕ್ರವಾರ ಬಿಡುಗಡೆಯಾದ ಎರಡು ಕನ್ನಡ ಚಿತ್ರಗಳು ಅದ್ಭುತ ಪ್ರತಿಕ್ರಿಯೆ ಪಡೆದು ಯಶಸ್ವಿಯಾಗಿ ಮುನ್ನುಗ್ಗುತ್ತಿದೆ. ಕಾಮಿಡಿ, ಸಸ್ಪೆನ್ಸ್, ಟ್ವಿಸ್ಟ್ ಮೂಲಕ ಬೆಲ್ ಬಾಟಮ್ ಪ್ರೇಕ್ಷಕರನ್ನ ರಂಜಿಸಿದ್ರೆ, ಫ್ಯಾಮಿಲಿ ಎಲಿಮೆಂಟ್ಸ್ ಮೂಲಕ ಕೆಮಿಸ್ಟ್ರಿ ಆಪ್ ಕರಿಯಪ್ಪ ನೋಡುಗರನ್ನ ನಕ್ಕು ನಗಿಸುತ್ತಿದ್ದಾನೆ. ಅಲ್ಲಿಗೆ ಈ ವಾರದ ಎರಡು ಚಿತ್ರಗಳು ಪಾಸ್ ಆಗಿದೆ.

  ರಿಷಬ್ ಶೆಟ್ಟಿ ಮತ್ತು ಹರಿಪ್ರಿಯಾ ನಟನೆಯ ಬೆಲ್ ಬಾಟಮ್ ಚಿತ್ರದ ಕಥೆ ಹೊಸದಾಗಿದ್ದು, ನಿರೂಪಣೆ ಮಜವಾಗಿದೆ. 70-80ರ ದಶಕದ ಕಾಲಘದಲ್ಲಿ ನಡೆಯುವ ಪತ್ತೆದಾರಿ ಕಥೆಯಲ್ಲಿ ಪ್ರತಿ ದೃಶ್ಯವೂ ಫ್ರೆಶ್ ಆಗಿ ಕಾಣುತ್ತೆ.

  Bell Bottom Review : ಕಿಲಾಡಿ ದಿವಾಕರನ ಕಳ್ಳ, ಪೊಲೀಸ್ ಆಟ

  ಕಾಮಿಡಿ, ಡೈಲಾಗ್ಸ್, ಟ್ವಿಸ್ಟ್, ಸಸ್ಪೆನ್ಸ್ ಎಲ್ಲವೂ ಸೇರಿ ಫಸ್ಟ್ ಹಾಫ್ ಸಖತ್ ಕಿಕ್ ಕೊಡುತ್ತೆ. ಸೆಕೆಂಡ್ ಹಾಫ್ ಕುತೂಹಲದ ಜೊತೆಜೊತೆಗೆ ನಗಿಸುತ್ತಾ ಹೋಗುತ್ತೆ. ರಿಷಬ್ ಅಭಿನಯದ ಮತ್ತು ಮ್ಯಾನರಿಸಂ ಹಾಗೂ ಹರಿಪ್ರಿಯ ಅಭಿನಯ ಗಮನ ಸೆಳೆಯುತ್ತೆ. ರೆಟ್ರೋ ಶೈಲಿಯಲ್ಲಿರುವ ಬೆಲ್ ಬಾಟಮ್ ಒಂದೊಳ್ಳೆ ಪ್ರಯತ್ನ. ರೆಗ್ಯುಲರ್ ಸಿನಿಮಾಗಳ ಮಧ್ಯ ಈ ಚಿತ್ರದ ಕಲರ್ ಮತ್ತು ಫಾರ್ಮ್ಯಾಟು ಪ್ರೇಕ್ಷಕರಿಗೆ ಖುಷಿ ಕೊಡುತ್ತೆ.

  ಬೆಲ್ ಬಾಟಮ್ ಹ್ಯಾಂಗ್ ಓವರ್ ಬಹಳ ದಿನ ಮುಂದುವರೆಯಲಿದೆ

  ಕೆಮಿಸ್ಟ್ರಿ ಆಫ್ ಕರಿಯಪ್ಪ

  ಎಲ್ಲಾ ಅಪ್ಪ ಅಮ್ಮಂದಿರಿಗೂ ಮತ್ತು ಮದುವೆಯಾಗಲಿರುವ ಮತ್ತು ಮದುವೆಯಾಗಿರುವ ಮಗ, ಮಗಳಿಗೂ ಮತ್ತು ಅವರಿಗಿರೋ ಸ್ನೇಹಿತರಿಗೂ ನೇರವಾಗಿ ಈ ಕತೆ ನಮ್ಮದೇ ಅಲ್ವಾ, ನಮ್ಮ ಲೈಫಿನಲ್ಲೂ ಈ ವಿಚಾರದಲ್ಲಿ ಹೀಗೆ ಆಗಿತ್ತಲ್ಲ, ಅಂತ ಅನ್ನಿಸುತ್ತೆ. ಒಂದೇ ಮಾತಲ್ಲಿ ಹೇಳೋದಾದ್ರೆ, ಸಿನಿಮಾ ತುಂಬಾ ನೈಜವಾಗಿದೆ. ಪದೇ ಪದೇ ನೋಡುವಂತಹ ಸೀನ್ಸ್ ಇವೆ. ಪದೇ ಪದೇ ಕೇಳುವಂತಹ ಡೈಲಾಗ್ಸ್ ಇವೆ. ಪಕ್ಕಾ ಫ್ಯಾಮಿಲಿ ಸಿನಿಮಾ.

  'ಯೋಧ ಗುರು' ಕುಟುಂಬಕ್ಕೆ 'ಕೆಮಿಸ್ಟ್ರಿ ಕರಿಯಪ್ಪ' ಚಿತ್ರತಂಡ ನೆರವು

  ಮೊದಲ ದೃಶ್ಯದಿಂದಲೇ ನಗಿಸುತ್ತಾ ಹೋಗುವ ಸಿನಿಮಾ ಕಾಮಿಡಿಯಿಂದಲೇ ಇರುತ್ತೆ. ಇದ್ರಲ್ಲೊಂದು ಲವ್ ಸ್ಟೋರಿ ಕೂಡ ಇದ್ದು, ಅದರಲ್ಲಿ ಟ್ವಿಸ್ಟ್ ಕೂಡ ಇದೆ. ಕನ್ನಡ ಸಿನಿಪ್ರಿಯರು ಈ ಸಿನಿಮಾವನ್ನ ನೋಡಿ ಮನಸಾರೆ ಮೆಚ್ಚಿಕೊಳ್ತಿದ್ದಾರೆ. ಬಾಕ್ಸ್ ಆಫೀಸ್ ನಲ್ಲಿ ಕರಿಯಪ್ಪನ ಕಮಾಲ್ ದಿನದಿಂದ ದಿನಕ್ಕೆ ದೊಡ್ಡದಾಗುತ್ತಲೇ ಹೋಗ್ತಿದೆ.

  English summary
  Actor Rishab Shett and Hariprriya' 'Bell Bottom' and Chemistry of kariyappa movie team get positive response from audience.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X