»   » ಚೆನ್ನೈ ಸಂತ್ರಸ್ತರಿಗೆ ಸಹಾಯ ಹಸ್ತ ಚಾಚಿದ ಸ್ಯಾಂಡಲ್ ವುಡ್ ಸ್ಟಾರ್ಸ್.!

ಚೆನ್ನೈ ಸಂತ್ರಸ್ತರಿಗೆ ಸಹಾಯ ಹಸ್ತ ಚಾಚಿದ ಸ್ಯಾಂಡಲ್ ವುಡ್ ಸ್ಟಾರ್ಸ್.!

Posted By:
Subscribe to Filmibeat Kannada

ಚೆನ್ನೈನಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಗೆ ತಮಿಳುನಾಡಿನ ಜನತೆಯ ಜೀವನ ಅಸ್ತವ್ಯಸ್ತಗೊಂಡಿದ್ದು, 'ಒಮ್ಮೆ ಸುರಿಯುವುದನ್ನು ನಿಲ್ಲಿಸಪ್ಪ' ಎಂದು ಎಲ್ಲರೂ ವರುಣ ದೇವನಿಗೆ ಕೈಯೆತ್ತಿ ಮುಗಿಯುತ್ತಿದ್ದಾರೆ.

ಇದೀಗ ಚೆನ್ನೈನ ಈ ಪರಿಸ್ಥಿತಿಗೆ ನಮ್ಮ ಕರ್ನಾಟಕದ ಜನತೆ ಕೂಡ ಓಗೊಟ್ಟಿದೆ. ಅಲ್ಲದೇ ನಮ್ಮ ಕನ್ನಡದ ತಾರೆಯರು ಕೂಡ ಸಹಾಯ ಹಸ್ತ ಚಾಚಿದ್ದರೆ, ಮಾತ್ರವಲ್ಲದೇ ಕೆಲವು ತಾರೆಯರು ಟ್ವಿಟ್ಟರ್ ಮೂಲಕ ಪ್ರಾರ್ಥಿಸಿದ್ದಾರೆ.[ಚೆನ್ನೈ ಮಳೆ: ಹೆದರಬೇಡಿ ನಿಮಗೆ ನಾವಿದ್ದೇವೆ ಎಂದ ಕಾಲಿವುಡ್ ಸ್ಟಾರ್ಸ್..!]

ಸ್ಯಾಂಡಲ್ ವುಡ್ ನಟಿ, ಬಿಜೆಪಿ ಸದಸ್ಯೆ ಆಗಿರುವ ನಟಿ ತಾರಾ ಅವರು ಸುಮಾರು ಒಂದು ಲಕ್ಷ ರೂಪಾಯಿಗಳನ್ನು ಚೆನ್ನೈ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಿ ಮಾನವೀಯತೆ ಮೆರೆದಿದ್ದಾರೆ.

ಚಂದನವನದ ಸ್ಟಾರ್ ನಟರು ಯಾರು ಯಾರೆಲ್ಲಾ ಚೆನ್ನೈನ ಜನತೆಗಾಗಿ ಪ್ರಾರ್ಥಿಸಿದ್ದಾರೆ ಎಂಬುದನ್ನು ನೋಡಲು ಕೆಳಗಿನ ಸ್ಲೈಡ್ಸ್ ಕ್ಲಿಕ್ ಮಾಡಿ...

ನಟಿ ತಾರಾ ಅನುರಾಧ

'ಚೆನ್ನೈನ ಜನತೆ ನಮ್ಮ ಕರ್ನಾಟಕದ ಮಂದಿ ಇದ್ದಂತೆ, ಅವರಿಗೆ ಕಷ್ಟ ಅಂತ ಆದರೆ ಅದು ನಮಗೂ ಸಂಬಂಧಪಡುತ್ತದೆ. ನಾನೀಗ ಪರಿಹಾರ ನಿಧಿಗೆ ಕೊಟ್ಟಿರುವ ಒಂದು ಲಕ್ಷ ರೂಪಾಯಿ ನನಗೆ 'ಭರ್ಜರಿ' ಸಿನಿಮಾದಲ್ಲಿ ನಟಿಸುತ್ತಿರುವುದಕ್ಕೆ ಕೊಟ್ಟ ಸಂಭಾವನೆ' ಎಂದು ತಾರಾ ಅವರು ಸಹಾಯ ಹಸ್ತ ಚಾಚುವ ಮೂಲಕ ಚೆನ್ನೈನ ಭೀಕರ ಪರಿಸ್ಥಿತಿಗೆ ತಮ್ಮ ಕಳವಳ ವ್ಯಕ್ತಪಡಿಸಿದ್ದಾರೆ.

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್

'ನನ್ನ ಹೃದಯನೇ ಪ್ರವಾಹದಲ್ಲಿ ಸಿಲುಕಿಕೊಂಡ ಹಾಗಾಗಿದೆ. ಆದಷ್ಟು ಬೇಗನೆ ಎಲ್ಲಾ ಸಹಜ ಸ್ಥಿತಿಗೆ ಮರಳಲಿ ಎಂದು ಪ್ರಕೃತಿ ದೇವತೆಗೆ ಪ್ರಾರ್ಥನೆ ಸಲ್ಲಿಸಿ, ಅಸಹಾಯಕತೆ ಎಂಬ ಛಾಯೇನೇ ಕೊಲ್ಲುತ್ತಿದೆ' ಎಂದು ಕಿಚ್ಚ ಸುದೀಪ್ ಅವರು ಚೆನ್ನೈ ಮಳೆ ಕಡಿಮೆ ಆಗಲಿ ಎಂದು ಪ್ರಾರ್ಥಿಸಿದ್ದಾರೆ.

ನವರಸ ನಾಯಕ ಜಗ್ಗೇಶ್

'ಇದೇ ನೋಡಿ ಬಸವಣ್ಣನವರು ನುಡಿದದ್ದು 'ದಯೆ ಬೇಕು ಸಕಲ ಪ್ರಾಣಿಗಳಲ್ಲಿ, ದಯೆಯೇ ಧರ್ಮದ ಮೂಲವಯ್ಯ ಕೂಡಲಸಂಗಯ್ಯಾ..ಎಲ್ಲರಿಗೂ ಒಬ್ಬ ದೇವನಿದ್ದಾನೆ' ಎಂದು ನಟ ಜಗ್ಗೇಶ್ ಅವರು ತಮಿಳುನಾಡಿನ ಜನತೆಗೆ ಹಾಗೂ ನೀರಿನಲ್ಲಿ ಸಿಕ್ಕಿ ಒದ್ದಾಡುತ್ತಿರುವ ಪ್ರಾಣಿಗಳ ಬಗ್ಗೆ ಟ್ವಿಟ್ಟರ್ ನಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ.

ನಟ ಕಮ್ ನಿರ್ದೇಶಕ ರಕ್ಷಿತ್ ಶೆಟ್ಟಿ

ಸ್ಯಾಂಡಲ್ ವುಡ್ ನಟ ರಕ್ಷಿತ್ ಶೆಟ್ಟಿ ಮತ್ತು ರೆಡಿಯೋ ಸಿಟಿ ಆರ್ ಪ್ರದೀಪ್ ಅವರು ಚೆನ್ನೈ ಜನತೆಗೆ ಕೈಲಾದ ಮಟ್ಟಿಗೆ ಸಹಾಯ ಮಾಡುತ್ತಿದ್ದಾರೆ.[ಚೆನ್ನೈನ, ಕುಂಭದ್ರೋಣ ಮಳೆಗೆ ಮುಳುಗಿದ ನಟ ಸಿದ್ದಾರ್ಥ್ ಮನೆ..! ]

ನಟ ಶ್ರೀಮುರಳಿ ಪತ್ನಿ ವಿದ್ಯಾಶ್ರೀಮುರಳಿ

'ಉಗ್ರಂ' ಟನ ಶ್ರೀಮುರಳಿ ಅವರ ಪತ್ನಿ ವಿದ್ಯಾ ಶ್ರೀಮುರಳಿ ಅವರು ಚೆನ್ನೈನಲ್ಲಿ ಸುರಿಯುತ್ತಿರುವ ಮಳೆಗೆ ಈ ಮೂಲಕ ಪ್ರಾರ್ಥನೆ ಸಲ್ಲಿಸಿದ್ದಾರೆ.

English summary
The South Indian state Tamil Nadu has been witnessing one of its worst series of downpours for weeks, disrupting normal life. Many sandalwood celebrities including Sudeep, Rakshith Shetty, Tara, Jagges have prayed for everyone's safety through social media.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada