ಚಂದನ್ ಶೆಟ್ಟಿಯ 'ಕೋಲುಮಂಡೆ' ವಿವಾದ: ನಟ ಚೇತನ್ ಹೇಳಿದ್ದೇನು?
ಚಂದನ್ ಶೆಟ್ಟಿಯ ಕೋಲುಮಂಡೆ ಹಾಡಿನ ವಿವಾದಕ್ಕೆ ಸಂಬಂಧಿಸಿದಂತೆ 'ಆ ದಿನಗಳು' ಖ್ಯಾತಿಯ ನಟ ಚೇತನ್ ಪ್ರತಿಕ್ರಿಯೆ ನೀಡಿದ್ದು, ಚಂದನ್ ಶೆಟ್ಟಿಯ ಪರಿಕಲ್ಪನೆಯನ್ನು ಖಂಡಿಸಿದ್ದಾರೆ.
Recommended Video
'ಮಲೆ ಮಹಾದೇಶ್ವರ ಕರ್ನಾಟಕದ ಮಧ್ಯಕಾಲೀನ ಅವಧಿಯಲ್ಲಿ ವಾಸಿಸುತ್ತಿದ್ದ ಮಾದಿಗ-ಬುಡಕಟ್ಟು ಜಾನಪದ ಐಕಾನ್. ಅವರು ತಾರತಮ್ಯವಿಲ್ಲದ ಸಮಾಜಕ್ಕಾಗಿ ಶ್ರಮಿಸಿದರು. ಅವರ ಮಹಾಕಾವ್ಯದ ಒಂದು ಭಾಗದಲ್ಲಿ, ಪಿತೃಪ್ರಭುತ್ವ ಮತ್ತು ದಬ್ಬಾಳಿಕೆ ವಿರುದ್ಧ ಹೋರಾಡಲು ಅವರು ಸಂಕಮ್ಮಾಗೆ ಹೇಗೆ ಸಹಾಯ ಮಾಡುತ್ತಾರೆಂದು ಒಂದು ಕಥೆ ವಿವರಿಸುತ್ತದೆ' ಎಂದು ಮಹಾದೇಶ್ವರ ಕುರಿತು ವಿವರಿಸಿದ್ದಾರೆ.
'ಆಧುನಿಕ ಪುನರಾವರ್ತನೆಗಳು ಪ್ರಚೋದನಕಾರಿ ಮತ್ತು ಹಣದ ಮನಸ್ಸಿನ ಬದಲು ಸಾಂಸ್ಕೃತಿಕವಾಗಿ ಸೂಕ್ಷ್ಮ ಮತ್ತು ಚಿಂತನಶೀಲವಾಗಿರಬೇಕು' ಎಂದು ಪರೋಕ್ಷವಾಗಿ ಕೋಲುಮಂಡೆ ಹಾಡನ್ನು ಖಂಡಿಸಿದ್ದಾರೆ.

ಜಾನಪದ ಗೀತೆಯ ಸಾಹಿತ್ಯವನ್ನು ತಿರುಚಿ ಹಾಡಿಗೆ ಧಕ್ಕೆ ತರಲಾಗಿದೆ ಹಾಗೂ ಶರಣೆ ಸಂಕಮ್ಮನ ಪಾತ್ರವನ್ನು ಅಶ್ಲೀಲವಾಗಿ ತೋರಿಸಲಾಗಿದೆ ಎಂದು ಆರೋಪಿಸಿ ಚಂದನ್ ಶೆಟ್ಟಿ ವಿರುದ್ಧ ದೂರು ಸಹ ದಾಖಲಾಗಿದೆ.
ವಿವಾದಿತ ಹಾಡನ್ನು ಈಗಾಗಲೇ ಯೂಟ್ಯೂಬ್‌ನಿಂದ ತೆಗೆದು ಹಾಕಲಾಗಿದೆ. ಆದರೂ, ಚಂದನ್ ಶೆಟ್ಟಿ, ನಟಿ ನಂದಿನಿ ಹಾಗೂ ಆನಂದ್ ಆಡಿಯೋ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಲಾಗುತ್ತಿದೆ.


Click it and Unblock the Notifications











