»   » '+' ಚಿತ್ರದ ಪ್ಲಸ್ ಪಾಯಿಂಟ್ ಔಟ್

'+' ಚಿತ್ರದ ಪ್ಲಸ್ ಪಾಯಿಂಟ್ ಔಟ್

Posted By:
Subscribe to Filmibeat Kannada

'+' ನಲ್ಲಿ ಏನಿದೆ, ಏನಿಲ್ಲ? ಚಿತ್ರದಲ್ಲಿ ಯಾರಿದ್ದಾರೆ, ಯಾರಿಲ್ಲ? ಅನ್ನುವ ಬಗ್ಗೆ ಗಾಂಧಿನಗರದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ ಗಡ್ಡಾ ವಿಜಿ ನಿರ್ದೇಶನದ '+'. ಹೀರೋ ಯಾರು ಅನ್ನುವುದನ್ನ ಗುಟ್ಟಾಗಿ ಇಟ್ಟು ಸದ್ದಿಲ್ಲದೇ ಮುಹೂರ್ತ ಮಾಡಿ ಮುಗಿಸಿರುವ '+'ನಲ್ಲಿ ಅನಂತ್ ನಾಗ್ ಹೀರೋ ಅನ್ನುವ ನ್ಯೂಸ್ ಈ ಹಿಂದೆ ಬ್ರೇಕ್ ಆಗಿತ್ತು.

66ರ ವಯಸ್ಸಲ್ಲಿ ಅನಂತ್ ಹೀರೋ! ಅಂತ ಹುಬ್ಬೇರಿಸುವಷ್ಟರಲ್ಲಿ, ಆ ಸ್ಥಾನಕ್ಕೆ ದೂದ್ ಪೇಡ ದಿಗಂತ್ ಎಂಟ್ರಿಕೊಟ್ಟರು. ಭಟ್ಟರ ಸಿನಿಮಾಗಳಲ್ಲಿ ಖಾಯಂ ಆಗಿರುವ ದೂದ್ ಪೇಡ, ಭಟ್ಟರು ನಿರ್ಮಾಣ ಮಾಡುತ್ತಿರುವ, ಭಟ್ಟರ ಶಿಷ್ಯ ಗಡ್ಡಾ ವಿಜಿ ನಿರ್ದೇಶಿಸುತ್ತಿರುವ ಚಿತ್ರಕ್ಕೆ ದಿಗ್ಗಿ ಬಿಟ್ರೆ, ಇನ್ಯಾರೂ ಹೀರೋ ಆಗುವುದಕ್ಕೆ ಚಾನ್ಸೇ ಇಲ್ಲ ಅಂತ ಗಾಂಧಿನಗರ ಮಾತನಾಡಿಕೊಂಡಿತ್ತು.

ಅದರಂತೆ ಎಲ್ಲೆಡೆ '+'ಗೆ ಪ್ಲಸ್ ಪಾಯಿಂಟ್ ದಿಗಂತ್ ಅಂತ ಜಗಜ್ಜಾಹೀರಾಯ್ತು. ಆದ್ರೆ, ವಾಸ್ತವ ಇದಲ್ಲ. '+' ಚಿತ್ರದ ಹೀರೋ ದಿಗಂತ್ ಅಲ್ಲ. ಬದಲಾಗಿ ಚೇತನ್ ಚಂದ್ರ! [ವಾವ್, ಅನಂತನಾಗ್ ಹೀರೋ ಅಟ್ ಅರುವತ್ತಾರು!]

ಹೌದು, ಪ್ರತಿಭೆ ಇದ್ದರೂ ಇಲ್ಲಿವರೆಗೂ ಗಾಂಧಿನಗರದಲ್ಲಿ ಸರಿಯಾಗಿ ನೆಲೆಕಂಡುಕೊಳ್ಳದ ಚೇತನ್ ಚಂದ್ರಗೆ ಕಡೆಗೂ ಅದೃಷ್ಟ ಖುಲಾಯಿಸಿದೆ. '+' ಚಿತ್ರಕ್ಕಾಗಿ ಭಟ್ಟರ ಕ್ಯಾಂಪಿನಿಂದ ಚೇತನ್ ಗೆ ಕರೆಬಂದಿದೆ. '+' ಚಿತ್ರದ ನಾಯಕ ಅಂದ್ರೆ ಅನಂತ್ ನಾಗ್ ಮಗನ ಪಾತ್ರಕ್ಕೆ ಚೇತನ್ ಚಂದ್ರ ಸೆಲೆಕ್ಟ್ ಆಗಿದ್ದಾರೆ. [ಅಂದು ಸೊಸೆ! ಇಂದು ಅನಂತ್ ಗೆ ಸುಧಾರಾಣಿ ಜೋಡಿ]

Chetan Chandra2

ಹಾಗಂತ '+' ಚಿತ್ರದಲ್ಲಿ ದಿಗಂತ್ ಇಲ್ಲ ಅಂತಲ್ಲ. ದಿಗಂತ್ ಕೂಡ '+' ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಆದ್ರೆ ಅದು, ಚೇತನ್ ಚಂದ್ರಗೆ ಸಿಕ್ಕಿರುವ ಪಾತ್ರದಷ್ಟು ಪ್ರಮುಖವಾಗಿಲ್ಲ ಅಷ್ಟೆ. ಸಮಾಜವನ್ನು ತಿದ್ದುವ, ಪಾಸೀಟಿವ್ ಮೈಂಡ್ ಇರುವ, ಹೈ ಪ್ರೊಫೈಲ್ ಉದ್ಯಮಿಯಾಗಿ ಅನಂತ್ ನಾಗ್ ಕಾಣಿಸಿಕೊಂಡರೆ, ಅವರ ಪುತ್ರನಾಗಿ ಅನಂತ್ ಅಷ್ಟೇ ಸ್ಟೈಲಿಶ್ ಆಗಿ ಚೇತನ್ ಕೂಡ ಕಾಣಿಸಿಕೊಳ್ಳಲಿದ್ದಾರೆ. [ಅನಂತ್ ಜೊತೆ 'ಬಿಗ್ ಬಾಸ್' ಶ್ವೇತಾ ಕುಚ್ ಕುಚ್]

ಪಿ.ಯು.ಸಿ, ಪ್ರೇಮಿಸಂ, ಹುಚ್ಚುಡುಗ್ರು ಚಿತ್ರದಲ್ಲಿ ಅದಾಗ್ಲೇ 8 ಪ್ಯಾಕ್ ಆಬ್ಸ್ ನಿಂದ ಕಟ್ಟುಮಸ್ತಾಗಿ ಗುರುತಿಸಿಕೊಂಡಿರುವ ಚೇತನ್, '+'ನಲ್ಲಿ ವಿಭಿನ್ನ ಲುಕ್ ನಲ್ಲಿ ಕಾಣಿಸಿಕೊಳ್ಳುತ್ತಾರಂತೆ. ಸುಧಾರಾಣಿ, ಶ್ವೇತಾ ಪಂಡಿತ್, ದಿಗಂತ್ ರಂತ ದೊಡ್ಡ ತಾರಾಬಳಗವೇ ಇರುವ '+' ಚಿತ್ರದ ನಾಯಕನಾಗಿ ಚೇತನ್ ಪ್ಲಸ್ ಪಾಯಿಂಟ್ ಆಗುತ್ತಾರೋ ಇಲ್ಲವೋ, ಭಟ್ಟರ ಕ್ಯಾಂಪಿನಿಂದ ಅವರ ವೃತ್ತಿಬದುಕಿಗೆ ಟ್ವಿಸ್ಟ್ ಸಿಗುವುದು ಖಚಿತ! (ಫಿಲ್ಮಿಬೀಟ್ ಕನ್ನಡ)

English summary
Actor Chetan Chandra is roped in to play a lead role along with Anant Nag in the movie Plus. Anant Nag will be portraying Business magnate in the movie and Chetan Chandra is playing a role of his son. Diganth will be seen in a special role.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada