»   » ಸದ್ಯದಲ್ಲೇ ಚೇತನ್ ಚಂದ್ರ 'ಕುಂಭರಾಶಿ'ಯ ದರ್ಶನ!

ಸದ್ಯದಲ್ಲೇ ಚೇತನ್ ಚಂದ್ರ 'ಕುಂಭರಾಶಿ'ಯ ದರ್ಶನ!

Posted By:
Subscribe to Filmibeat Kannada
Chetan Roopika
ಏಯ್ಟ್ ಪ್ಯಾಕ್ ಬಾಡಿ ನಟ ಚೇತನ್ ಚಂದ್ರ ಮತ್ತೆ ಸುದ್ದಿಯಲ್ಲಿದ್ದಾರೆ. ಅವರ ನಟನೆಯ 'ಕುಂಭರಾಶಿ' ಚಿತ್ರವು ಮೂರು ಸಾಂಗ್ ಶೂಟಿಂಗ್ ಹಾಗೂ ಟಾಕಿ ಪೋರ್ಶನ್ ಮುಗಿಸಿದ ಖುಷಿಯಲ್ಲಿದೆ. ಇನ್ನೆರಡು ಹಾಡುಗಳು ಹಾಗೂ ಚಿತ್ರದ ಅಂತಿಮಹಂತದ ಚಿತ್ರೀಕರಣ ಮಾತ್ರ ಬಾಕಿಯಿದ್ದು ಅದರ ಚಿತ್ರೀಕರಣ ಬೀದರ್ ನಲ್ಲಿ ನಡೆಯಲಿದೆ. ಈ ಎಲ್ಲಾ ಮಾಹಿತಿಗಳನ್ನು 'ಕುಂಭರಾಶಿ' ಚಿತ್ರತಂಡ ಇತ್ತೀಚಿಗೆ 'ಗ್ರೀನ್ ಹೌಸ್' ನಲ್ಲಿ ನಡೆದ 'ಪ್ರೆಸ್ ಮೀಟ್' ನಲ್ಲಿ ಹೇಳಿಕೊಂಡಿದೆ.

'ಕುಂಭರಾಶಿ' ಚಿತ್ರಕ್ಕಾಗಿ ತಮ್ಮ ಬಾಡಿಯನ್ನು ಕಷ್ಟಪಟ್ಟು ಹಾಗೂ ಇಷ್ಟಪಟ್ಟು ಏಯ್ಟ್ ಪ್ಯಾಕ್ ಮಾಡಿಕೊಂಡಿರುವ ಚೇತನ್ ಚಂದ್ರ ಅವರಿಗೆ ಇಲ್ಲಿಯವರೆಗೂ ನಡೆದ ಚಿತ್ರೀಕರಣ ಖುಷಿ ನೀಡಿದೆಯಂತೆ. "ಹೊಸಬರ ತಂಡವಾದರೂ ಚಿತ್ರವನ್ನು ಅಂದುಕೊಂಡಂತೆ ಮಾಡಿದ್ದಾರೆ, ನನಗೆ ಈ ಚಿತ್ರದ ಮೇಲೆ ಬಹಳಷ್ಟು ನಿರೀಕ್ಷೆಯಿದೆ ಎಂದಿದ್ದಾರೆ ನಟ, 'ಕುಂಭರಾಶಿ' ನಾಯಕ ಚೇತನ್ ಚಂದ್ರ. ಅಂದಹಾಗೆ, ನವ ನಿರ್ದೇಶಕ ಚಂದ್ರಹಾಸ ನಿರ್ದೇಶನದ ಈ ಚಿತ್ರದ ನಾಯಕಿ ರೂಪಿಕಾ.

ಈ ಚಿತ್ರದ ಉಳಿದೆರಡು ಹಾಡುಗಳ ಚಿತ್ರೀಕರಣವನ್ನು ರಾಜರಾಜೇಶ್ವರಿ ನಗರದ ಭೂತ ಬಂಗಲೆಯೊಂದರಲ್ಲಿ ಹಾಗೂ ನಂದಿನಿ ಲೇಔಟ್ ನ ಸುತ್ತಮತ್ತ ಚಿತ್ರೀಕರಿಸಲು ನಿರ್ದೇರಿಸಿದೆ ಚಿತ್ರತಂಡ. ಆ ಬಳಿಕ ಅಂತಿಮ ಹಂತದ ಚಿತ್ರೀಕರಣ ಹಾಗೂ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಆದಷ್ಟು ಬೇಗ ಮುಗಿಸಿ ಚಿತ್ರವನ್ನು ತೆರೆಗೆ ತರುವ ತರಾತರಿ ನಡೆಸಲಾಗಿದೆ. ಅಂದುಕೊಂಡಂತೆ ನಡೆದರೆ ಇನ್ನೊಂದು ತಿಂಗಳಲ್ಲಿ ಚಿತ್ರ ಬಿಡುಗಡೆಗೆ ರೆಡಿ.

ಚಿತ್ರದಲ್ಲಿ ಗುರುರಾಜ್ ಹೊಸಕೋಟೆ ಪ್ರಮುಖವಾದ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಜೊತೆ ಕೆಲಸ ಮಾಡಿದ್ದು ಖುಷಿ ನೀಡಿದೆ ಎಂಬುದು ಚೇತನ್ ಚಂದ್ರರ ಮತ್ತೊಂದು ವಿಶೇಷ ಹೇಳಿಕೆ. ಚೇತನ್ ಚಂದ್ರ ಈ ಚಿತ್ರದಲ್ಲಿ ತುಂಬಾ ಚೆನ್ನಾಗಿ ನಟಿಸಿದ್ದಾರೆ ಎಂದವರು ಚಿತ್ರದ ಸಂಕಲನಕಾರ ನಾಗೇಂದ್ರ ಅರಸ್. ಇನ್ನು ಚೇತನ್ ಚಂದ್ರರ ಏಯ್ಟ್ ಪ್ಯಾಕ್ ತರಬೇತುದಾರ ಪಾನಿಪುರಿ ಕಿಟ್ಟಿ ಚಿತ್ರದ "ಅಗತ್ಯಕ್ಕೆ ತಕ್ಕಂತೆ ಚೇತನ್ ರನ್ನು ತರಬೇತಿಗೊಳಿಸಿದ ಖುಷಿ ನನಗಿದೆ. ಚೇತನ್ ತುಂಬಾ ಒಳ್ಳೆಯ ವಿದ್ಯಾರ್ಥಿ" ಎಂದರು.

ಈ ಚಿತ್ರದಲ್ಲಿ ಪತ್ರಕರ್ತ ಹಾಗೂ ನಟ ಯತಿರಾಜ್ ಅವರು ಮಹತ್ವದ ಪಾತ್ರವೊಂದನ್ನು ಪೋಷಿಸಿದ್ದಾರೆ. ಚಿತ್ರದ ಕೆಲವು ಕ್ಲಿಪ್ಸ್ ಹಾಗೂ ಒಂದು ಹಾಡನ್ನು ಪತ್ರಕರ್ತರಿಗೆ ತೋರಿಸಲಾಯಿತು. "ಹಾಡುಗಳು ಹಾಗೂ ದೃಶ್ಯಗಳು ಬಹಳ ಚೆನ್ನಾಗಿವೆ. ಚಿತ್ರದ ಬಗ್ಗೆ ನಿರೀಕ್ಷೆ ಇಟ್ಟುಕೊಳ್ಳಲೇಬೇಕು" ಎಂಬ ಅಭಿಪ್ರಾಯ ಅಲ್ಲಿ ವ್ಯಕ್ತವಾಯ್ತು. ಅದೇನೇ ಇರಲಿ, ಹೊಸಬರ ಚಿತ್ರಗಳೇ ಗೆಲ್ಲುತ್ತಿರುವ ಈ ವೇಳೆಯಲ್ಲಿ ಇಂಥ ಹೊಸ ಪ್ರಯತ್ನದ ಬಗ್ಗೆ ನಿರೀಕ್ಷೆ ಮೂಡುವುದರಲ್ಲೂ ಅರ್ಥವಿದೆ. (ಒನ್ ಇಂಡಿಯಾ ಕನ್ನಡ)

English summary
Kannada Actor Chetan Chandra's upcoming movie 'Kumbha Rashi' finished three songs and almost all shootings. Chetan Chandra and Roopika are the Lead Role in this newcomer Director Chandrahasa movie Kumbha Rashi. This movie to release in next month. 
 
Please Wait while comments are loading...