For Quick Alerts
  ALLOW NOTIFICATIONS  
  For Daily Alerts

  ಸಿಎಂ ಯಡಿಯೂರಪ್ಪ, ಸಿದ್ಧರಾಮಯ್ಯ, ಕುಮಾರಸ್ವಾಮಿ ಕೈ ಸೇರಿದ ಚೇತನ್ ಮದುವೆ ಆಮಂತ್ರಣ

  |

  ಸ್ಯಾಂಡಲ್ ವುಡ್ ನಟ, ಆ ದಿನಗಳು ಖ್ಯಾತಿಯ ಚೇತನ್ ಮದುವೆ ತಯಾರಿಯಲ್ಲಿದ್ದಾರೆ. ಅಸ್ಸಾಂ ಮೂಲದ ಯುವತಿ ಮೇಘಾ ಕೈಹಿಡಿಯುತ್ತಿರುವ ಚೇತನ್ ಸದ್ಯ ಮದುವೆ ಕರೆಯೋಲೆಯಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೆ ಸಾಕಷ್ಟು ಗಣ್ಯರಿಗೆ ಮದುವೆ ಆಮಂತ್ರಣ ನೀಡಿರುವ ಚೇತನ್, ಇತ್ತೀಚಿಗೆ ಪವರ್ ಸ್ಟಾರ್ ಮನೆಗೆ ಭೇಟಿ ನೀಡಿ ಮದುವೆಗೆ ಆಹ್ವಾನಿಸಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.

  ಚಿತ್ರರಂಗದ ಗಣ್ಯರ ಜೊತೆಗೆ ಚೇತನ್ ರಾಜಕೀಯ ಗಣ್ಯರಿಗೂ ಮದುವೆಯ ಮಮತೆಯ ಕರೆಯೋಲೆ ನೀಡುತ್ತಿದ್ದಾರೆ. ಇತ್ತೀಚಿಗೆ ಚೇತನ್ ರಾಜಕೀಯ ಮುಖಂಡರಾದ ಸಿದ್ಧರಾಮಯ್ಯ, ಕುಮಾರಸ್ವಾಮಿ ಮತ್ತು ಸಿಎಂ ಯಡಿಯೂರಪ್ಪ ಅವರಿಗೆ ಮದುವೆ ಆಮಂತ್ರಣ ನೀಡಿದ್ದಾರೆ. ಅವರ ನಿವಾಸಕ್ಕೆ ತೆರಳಿ ಮದುವೆಗೆ ಆಹ್ವಾನಿಸಿದ್ದಾರೆ.

  ಪವರ್ ಸ್ಟಾರ್ ಪುನೀತ್ ಗೆ ಮದುವೆ ಆಮಂತ್ರಣ ನೀಡಿದ 'ಆ ದಿನಗಳು' ಚೇತನ್ಪವರ್ ಸ್ಟಾರ್ ಪುನೀತ್ ಗೆ ಮದುವೆ ಆಮಂತ್ರಣ ನೀಡಿದ 'ಆ ದಿನಗಳು' ಚೇತನ್

  ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ನಟ ಚೇತನ್ "ನಾವು ಕೆಲವು ಸಾಮಾಜಿಕ ಹೋರಾಟಗಳನ್ನ ಮಾಡುವಾಗ ಆಯಾ ಸರ್ಕಾರದ ಮುಖ್ಯಮಂತ್ರಿಗಳನ್ನ ಪ್ರಶ್ನೆ ಮಾಡಲಾಗಿತ್ತು.. ನನ್ನ ಮದುವೆ ಕೂಟಕ್ಕೆ ಆಹ್ವಾನಿಸಲು ಹೋದಾಗ ಅಂದು ನಾವು ಮಾಡಿದ ಪ್ರಶ್ನೆಗಳನ್ನ ವೈಯಕ್ತಿಕವಾಗಿ ತೆಗೆದುಕೊಳ್ಳದೆ ತುಂಬಾ ಆತ್ಮೀಯವಾಗಿ ಬರಮಾಡಿಕೊಂಡು ಪ್ರೀತಿಯಿಂದ ಹಾರೈಸಿ ಮದುವೆಗೆ ಬರುವುದಾಗಿ ಹೇಳಿದರು" ಎಂದು ಹೇಳಿದ್ದಾರೆ.

  ಮುಂದಿನ ತಿಂಗಳು ಫೆಬ್ರವರಿ 2 ಭಾನುವಾರ ಚೇತನ್ ಗೆಳತಿ ಮೇಘಾ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಸಮಾಜಮುಖಿ ಕೆಲಸಗಳಲ್ಲಿ ಗುರುತಿಸಿಕೊಂಡಿರುವ ಚೇತನ್, ಸರಳವಾಗಿ ಮದುವೆ ಆಗಲು ನಿರ್ಧರಿಸಿದ್ದಾರೆ. ವಲ್ಲಭ್ ನಿಕೇತನ ವಿನೋಬಾ ಭಾವೆ ಆಶ್ರಮದ ಮಕ್ಕಳು ಮತ್ತು ವೃದ್ಧರ ಸಮ್ಮುಖದಲ್ಲಿ ಸಂಜೆ 6 ಗಂಟೆಗೆ ವಿವಾಹಬಂಧನಕ್ಕೆ ಒಳಗಾಗಲಿದ್ದಾರೆ

  English summary
  Actor Chetan invited to CM Yediyurappa, Siddaramaiah and Kumaraswamy for his marriage. Chetan Kumar to tie the knot with his sweetheart Megha in February 2nd.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X