ಚಂದನವನದಲ್ಲಿ ಮತ್ತೊಂದು ಮಲ್ಟಿ ಸ್ಟಾರ್ ಸಿನಿಮಾ !
Recommended Video

ಕನ್ನಡ ಸಿನಿಮಾರಂಗದಲ್ಲಿ ಇತ್ತೀಚಿಗೆ ಮಲ್ಟಿ ಸ್ಟಾರ್ ಸಿನಿಮಾಗಳು ಹೆಚ್ಚಾಗುತ್ತಿದೆ. ಕಳೆದ ವಾರವಷ್ಟೇ ಉಪೇಂದ್ರ ಹಾಗೂ ರವಿಚಂದ್ರನ್ ಒಂದೇ ಚಿತ್ರದಲ್ಲಿ ಅಭಿನಯ ಮಾಡುತ್ತಾರೆ ಎನ್ನುವ ಸುದ್ದಿ ಕೇಳಿ ಬಂದಿತ್ತು ಈಗ ಆ ದಿನಗಳು ಚೇತನ್ ಹಾಗೂ ಚಿರಂಜೀವಿ ಸರ್ಜಾ ಒಟ್ಟಿಗೆ ಅಭಿನಯ ಮಾಡುತ್ತಿದ್ದಾರೆ.
ಡೈರೆಕ್ಟರ್ ವಿ.ಸುಮದ್ರ ನಿರ್ದೇಶನದ 'ರಣಂ' ಸಿನಿಮಾದಲ್ಲಿ ಸಾಕಷ್ಟು ಕನ್ನಡದ ಸ್ಟಾರ್ ಕಲಾವಿದರು ಅಭಿನಯ ಮಾಡುತ್ತಿದ್ದಾರೆ. ಈ ಸಿನಿಮಾ ಮೂಲಕ ಇದೇ ಮೊದಲ ಬಾರಿಗೆ ಚಿರಂಜೀವಿ ಸರ್ಜಾ ಮತ್ತು ಚೇತನ್ ಕುಮಾರ್ ಸ್ಕ್ರೀನ್ ಶೇರ್ ಮಾಡುತ್ತಿದ್ದಾರೆ.

ಕನಕಪುರ ಶ್ರೀನಿವಾಸ್ ಅವರ ಆರ್ ಎಸ್ ಪ್ರೊಡಕ್ಷನ್ ಅಡಿ 'ರಣಂ' ಚಿತ್ರ ತಯಾರಾಗುತ್ತಿದ್ದು 'ಆ ದಿನಗಳು' ಸಿನಿಮಾ ಖ್ಯಾತಿಯ ಚೇತನ್ ಕ್ರಾಂತಿಕಾರಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರಂತೆ. ಚಿರಂಜೀವಿ ಸರ್ಜಾ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ನಟಿಸಲಿದ್ದಾರೆ.

ಈಗಾಗಲೇ ಚೇತನ್ ಭಾಗದ ಶೂಟಿಂಗ್ ಮುಗಿದಿದ್ದು, ಚಿರಂಜೀವಿ ಪಾಲಿನ ಶೂಟಿಂಗ್ ಮಾತ್ರ ಬಾಕಿ ಉಳಿದಿದೆ, ಚೇತನ್ ಹಾಗೂ ರವಿಚಂದ್ರನ್ ಜೊತೆಯಲ್ಲಿ ಸಿನಿಮಾ ಪಾತ್ರ ನಿರೂಪಣೆ ಮಾಡಲು ಮತ್ತೊಬ್ಬ ಸ್ಟಾರ್ ನಟರನ್ನು ಬಳಸಿಕೊಳ್ಳುತ್ತಾರಂತೆ ನಿರ್ದೇಶಕರು. 'ರಣಂ' ಸಿನಿಮಾ ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ತಯಾರಾಗುತ್ತಿದೆ. ಚಿತ್ರಕ್ಕೆ ಗುರು ಕಿರಣ್ ಸಂಗಿತ ನೀಡಿದ್ದಾರೆ.


Click it and Unblock the Notifications











