For Quick Alerts
  ALLOW NOTIFICATIONS  
  For Daily Alerts

  100 ಕೋಟಿ ಹಿಂದೆ ಬಿದ್ದ 'ಆ ದಿನಗಳು' ಚೇತನ್ ಕುಮಾರ್

  |

  ಕನ್ನಡ ನಟ ಆ ದಿನಗಳು ಖ್ಯಾತಿಯ ಚೇತನ್ ನಟಿಸುತ್ತಿರುವ ಕನ್ನಡ-ತೆಲುಗು ಭಾಷೆಯ ಚಿತ್ರಕ್ಕೆ ಶೀರ್ಷಿಕೆ ಅಂತಿಮವಾಗಿದೆ. ತೆಲುಗು ನಿರ್ದೇಶಕ ಹರೀಶ್ ಶಂಕರ್ ಎಸ್ ಹೊಸ ಚಿತ್ರದ ಟೈಟಲ್ ಅನಾವರಣ ಮಾಡಿದ್ದು, ಚಿತ್ರಕ್ಕೆ '100 Crores' ಎಂದು ಹೆಸರಿಡಲಾಗಿದೆ.

  Recommended Video

  100 ಕೋಟಿ ಚೇತನ್ ಕುಮಾರ್.

  '100 Crores' ಚಿತ್ರದ ಟೈಟಲ್ ಪೋಸ್ಟರ್ ಬಿಡುಗಡೆಯಾಗಿದ್ದು, ಕುತೂಹಲ ಹೆಚ್ಚಿಸಿದೆ. ಈ ಕುರಿತು ನಟ ಚೇತನ್ ಸಹ ಸಂತಸ ವ್ಯಕ್ತಪಡಿಸಿದ್ದು, ಟ್ವಿಟ್ಟರ್‌ನಲ್ಲಿ ಪೋಸ್ಟರ್ ಹಂಚಿಕೊಂಡಿದ್ದಾರೆ.

  ಸಿನಿಮಾ, ಸಮಾಜ ಸೇವೆ ಹಾಗೂ ಇನ್ನಷ್ಟು: 2021 ಕ್ಕೆ ಚೇತನ್ ಅಹಿಂಸಾ ಗುರಿಗಳೇನು?ಸಿನಿಮಾ, ಸಮಾಜ ಸೇವೆ ಹಾಗೂ ಇನ್ನಷ್ಟು: 2021 ಕ್ಕೆ ಚೇತನ್ ಅಹಿಂಸಾ ಗುರಿಗಳೇನು?

  ''ನನ್ನ ತೆಲುಗು-ಕನ್ನಡ ಚಿತ್ರದ ಶೀರ್ಷಿಕೆ ಬಿಡುಗಡೆಯಾಗಿದೆ! '100 CRORES' ಕ್ರೈಮ್ ಥ್ರಿಲ್ಲರ್ ಚಿತ್ರ: ಪ್ರಸ್ತುತ ಹೈದರಾಬಾದ್‌ನಲ್ಲಿ ಚಿತ್ರೀಕರಣದಲ್ಲಿದೆ. ಒಮ್ಮೆ ನೋಡಿ'' ಎಂದು ಚೇತನ್ ಟ್ವೀಟ್ ಮಾಡಿದ್ದಾರೆ.

  ಸ್ವತಃ ಚೇತನ್ ಅವರೇ ಹೇಳಿರುವ ಪ್ರಕಾರ ಪ್ರಸ್ತುತ ಹೈದರಾಬಾದ್‌ನಲ್ಲಿ ಚಿತ್ರೀಕರಣ ಸಾಗ್ತಿದೆ. ಬರಹಗಾರರಾಗಿದ್ದ ವಿರಾಟ್ ಚಕ್ರವರ್ತಿ ಡೈರೆಕ್ಟರ್ ಆಗಿ ಪ್ರಮೋಟ್ ಆಗಿದ್ದು, ಈ ಸಿನಿಮಾಗೆ ನಿರ್ದೇಶನ ಮಾಡ್ತಿದ್ದಾರೆ.

  'ಆ ದಿನಗಳು' ಚೇತನ್ ಹೊಸ ಸಿನಿಮಾಗೆ ಸಿಂಪಲ್ ಸುನಿ ನಿರ್ದೇಶನ'ಆ ದಿನಗಳು' ಚೇತನ್ ಹೊಸ ಸಿನಿಮಾಗೆ ಸಿಂಪಲ್ ಸುನಿ ನಿರ್ದೇಶನ

  ಸಂಗೀತ ನಿರ್ದೇಶಕ ಸಾಯಿ ಕಾರ್ತಿಕ್ ಮತ್ತು ಶ್ರೀಕಾಂತ್ ಈ ಸಿನಿಮಾಗೆ ಜಂಟಿಯಾಗಿ ಬಂಡವಾಳ ಹಾಕ್ತಿದ್ದಾರೆ. ಅಂದ್ಹಾಗೆ, ಈ ಸಿನಿಮಾ ಇದು ಪೂರ್ಣ ಪ್ರಮಾಣದಲ್ಲಿ ತೆಲುಗು ತಂತ್ರಜ್ಞರು ಮತ್ತು ಕಲಾವಿದರಿಂದಲೇ ತಯಾರಾಗುತ್ತಿದೆ. ಆದ್ರೆ, ಕನ್ನಡದಲ್ಲಿಯೂ ಬಿಡುಗಡೆಯಾಗಲಿದೆ.

  Chetan Kumars new Film titled 100 Crores, Shooting currently underway in Hyderabad

  ಕ್ರೈಂ ಥ್ರಿಲ್ಲಿಂಗ್ ಚಿತ್ರದಲ್ಲಿ ಚೇತನ್ ಪೊಲೀಸ್ ಅಧಿಕಾರಿಯಾಗಿ ನಟಿಸುತ್ತಿದ್ದಾರೆ. 'ಹ್ಯಾಪಿಡೇಸ್' ಖ್ಯಾತಿಯ ರಾಹುಲ್ ಸಹ ಪ್ರಮುಖ ಪಾತ್ರದಲ್ಲಿ ಕಾಅಣಿಸಿಕೊಳ್ಳುತ್ತಿದ್ದಾರೆ.

  ಮತ್ತೊಂದೆಡೆ ಚೇತನ್ ಹಾಗೂ ಚಿರಂಜೀವಿ ಸರ್ಜಾ, ಶ್ರುತಿ ಹರಿಹರನ್ ಕಾಂಬಿನೇಷನ್‌ನಲ್ಲಿ ತಯಾರಾಗಿದ್ದ 'ರಣಂ' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಸಿಂಪಲ್ ಸುನಿ ಜೊತೆಯೂ ಹೊಸದೊಂದು ಪ್ರಾಜೆಕ್ಟ್ ಆರಂಭಿಸಲಿದ್ದಾರೆ.

  English summary
  Kannada actor Chetan Kumar's new Kannada-Telugu film, titled 100 Crores, Shooting currently underway in Hyderabad.
  Wednesday, January 6, 2021, 13:22
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X