For Quick Alerts
  ALLOW NOTIFICATIONS  
  For Daily Alerts

  'ಬಜಾರ್' ಹುಡುಗನ 2ನೇ ಚಿತ್ರಕ್ಕೆ ಜೊತೆಯಾದ 'ಬಹದ್ದೂರ್' ಡೈರೆಕ್ಟರ್

  |

  'ಬಜಾರ್' ಸಿನಿಮಾದ ಮೂಲಕ ನಟ ಧನ್ವೀರ್ ಗೌಡ ಚಿತ್ರರಂಗಕ್ಕೆ ಕಾಲಿಟ್ಟಿದ್ದರು. ಸಿಂಪಲ್ ಸುನಿ ಈ ಸಿನಿಮಾದ ನಿರ್ದೇಶನ ಮಾಡಿದ್ದು, ಅದಿತಿ ಪ್ರಭುದೇವ ನಾಯಕಿಯಾಗಿದ್ದರು.

  ಈ ಸಿನಿಮಾದ ನಂತರ ಈಗ ಧನ್ವೀರ್ ತಮ್ಮ ಎರಡನೇ ಸಿನಿಮಾದ ತಯಾರಿಯಲ್ಲಿ ಇದ್ದಾರೆ. ವಿಶೇಷ ಅಂದರೆ, ಈ ಸಿನಿಮಾದ ಕಥೆ, ಚಿತ್ರಕಥೆ, ಸಾಹಿತ್ಯವನ್ನು 'ಬಹದ್ದೂರ್' ಚೇತನ್ ಕುಮಾರ್ ಬರೆಯುತ್ತಿದ್ದಾರೆ.

  ಸುನಿ ತೋರಿಸಿದ 'ಬಜಾರ್' ವಿಮರ್ಶಕರಿಗೆ ಇಷ್ಟ ಆಯ್ತಾ.?

  ಧನ್ವೀರ್ ಮುಂದಿನ ಸಿನಿಮಾವನ್ನು 'ಭರಾಟೆ' ನಿರ್ಮಾಪಕ ಸುಪ್ರೀತ್ ನಿರ್ಮಾಣ ಮಾಡುತ್ತಿದ್ದಾರೆ. ಈ ಸಿನಿಮಾಗೆ ಚೇತನ್ ತಮ್ಮ ಬರವಣಿಗೆಯ ಮೂಲಕ ಸಾಥ್ ನೀಡುತ್ತಿದ್ದಾರೆ.

  ಚೇತನ್ ಕಥೆ ಮತ್ತು ಚಿತ್ರಕತೆ ಸಿದ್ಧವಾಗಿದ್ದು, ಬೇರೆ ನಿರ್ದೇಶಕರ ಕೈನಲ್ಲಿ ಸಿನಿಮಾ ಮಾಡಿಸುವ ಪ್ಲಾನ್ ಇದೆ. ಈಗಾಗಲೇ, ಒಂದರೆಡು ಸಿನಿಮಾ ಮಾಡಿರುವ ಕನ್ನಡದ ಪ್ರತಿಭಾವಂತ ನಿರ್ದೇಶಕರು ಈ ಸಿನಿಮಾವನ್ನು ಡೈರೆಕ್ಟ್ ಮಾಡಲಿದ್ದಾರೆ.

  ಅಂದಹಾಗೆ, ಈ ಸಿನಿಮಾದ ತಂತ್ರಜ್ಞರು ಮತ್ತು ಕಲಾವಿದರನ್ನು ಮಾಹಿತಿಯನ್ನು ಸದ್ಯದಲ್ಲೇ ತಿಳಿಸಲಾಗುವುದಂತೆ. ಮೊದಲ ಬಾರಿಗೆ ಚೇತನ್ ಕುಮಾರ್ ಕಥೆಗೆ ಬೇರೊಬ್ಬರು ನಿರ್ದೇಶನ ಮಾಡುತ್ತಿದ್ದಾರೆ.

  English summary
  Kannada director Chethan Kumar has written a story for 'Bazaar' fame actor Dhanveer Gowda second movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X