»   » 'ಪಂಟ' ಸಿನಿಮಾ ನೋಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ

'ಪಂಟ' ಸಿನಿಮಾ ನೋಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ

Posted By:
Subscribe to Filmibeat Kannada

ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮತ್ತೊಂದು ಕನ್ನಡ ಚಿತ್ರವನ್ನ ವೀಕ್ಷಿಸಿದ್ದಾರೆ. ಹೆಚ್.ಎಂ.ರೇವಣ್ಣ ಅವರ ಪುತ್ರ ಅನೂಪ್ ರೇವಣ್ಣ ಅಭಿನಯದ 'ಪಂಟ' ಚಿತ್ರವನ್ನ ಸಿಎಂ ಸಾಹೇಬ್ರು ನೋಡಿ ಕಣ್ತುಂಬಿಕೊಂಡಿದ್ದಾರೆ.

ಅನೂಪ್ ರೇವಣ್ಣ ಅಭಿನಯದ 'ಪಂಟ' ಸಿನಿಮಾ ಇಂದು (ಜೂನ್ 23) ರಾಜ್ಯಾದ್ಯಂತ ಬಿಡುಗಡೆಯಾಗಿದೆ. ಆದ್ರೆ, ಒಂದು ದಿನ ಮುಂಚೆಯೇ ಸಿಎಂಗೆ ಸಿನಿಮಾ ತೋರಿಸಲಾಗಿದೆ. ನಿನ್ನೆ (ಜೂನ್ 22) ರಾತ್ರಿ ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ರೇಣುಕಾಂಬ ಚಿತ್ರಮಂದಿರದಲ್ಲಿ ಸಿದ್ದರಾಮಯ್ಯ ಅವರು 'ಪಂಟ' ನೋಡಿದ್ದಾರೆ. ಈ ವೇಳೆ ಸಚಿವ ರೋಷನ್ ಬೇಗ್, ಹೆಚ್.ಎಂ ರೇವಣ್ಣ ಮತ್ತು ಚಿತ್ರತಂಡ ಭಾಗಿಯಾಗಿತ್ತು.

Chief Minister Siddaramaiah Watched Panta Movie

ವಿಶೇಷ ಅಂದ್ರೆ, 'ಪಂಟ' ಚಿತ್ರವನ್ನ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಲಾಂಚ್ ಮಾಡಿದ್ದರು. ಕಳೆದ ವರ್ಷ ಕಂಠೀರವ ಸ್ಟುಡಿಯೋದಲ್ಲಿ 'ಪಂಟ' ಸಿನಿಮಾ ಸೆಟ್ಟೇರಿತ್ತು.

Chief Minister Siddaramaiah Watched Panta Movie

ಕಲಾ ಸಾಮ್ರಾಟ್ ಎಸ್.ನಾರಾಯಣ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ಸುಬ್ರಮಣ್ಯಂ ನಿರ್ಮಾಣ ಮಾಡಿದ್ದಾರೆ. ನಿರ್ದೇಶನದ ಜೊತೆಗೆ ಎಸ್.ನಾರಾಯಣ್ ಅವರೇ ಸಂಗೀತ ನೀಡಿದ್ದು, ರಿತೀಕ್ಷ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.

English summary
Chief Minister Siddaramaiah on Thursday (June 22nd) Night Watched Anup Revanna's 'Panta' at the Renukamba Preview Theater in Malleshwaram.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada