»   » ಥ್ರಿಲ್ಲರ್ ಮಂಜು ಬೌಲಿಂಗ್, ಸ್ಯಾಂಡಲ್ ವುಡ್ ಶೈನಿಂಗ್

ಥ್ರಿಲ್ಲರ್ ಮಂಜು ಬೌಲಿಂಗ್, ಸ್ಯಾಂಡಲ್ ವುಡ್ ಶೈನಿಂಗ್

Written By:
Subscribe to Filmibeat Kannada

ಚಿಕ್ಕಬಳ್ಳಾಪುರ, ಮೇ 28: ಥ್ರಿಲ್ಲರ್ ಮಂಜು ಬೌಲಿಂಗ್, ಸಾಯಿಕುಮಾರ್ ತಮ್ಮ ಅಯ್ಯಪ್ಪ ಕೀಪಿಂಗ್, ಶಬರೀಶ್ ಬ್ಯಾಟಿಂಗ್, ಮೈದಾನದಲ್ಲಿ ತುಂಬಿದ್ದ ಕ್ರಿಕೆಟ್ ಪ್ರೇಮಿಗಳು. ಸ್ವತಃ ಬ್ಯಾಟ್ ಬೀಸಿ, ಬೌಲಿಂಗ್ ಮಾಡಿದ ಚಿಕ್ಕಬಳ್ಳಾಪುರ ಶಾಸಕ ಸುಧಾಕರ್...

ಹೌದು ಈ ಎಲ್ಲ ಸಂದರ್ಭಗಳಿಗೆ ಸಾಕ್ಷಿಯಾಗಿದ್ದು ಚಿಕ್ಕಬಳ್ಳಾಪುರ. ಚಿಕ್ಕಬಳ್ಳಾಪುರದದಲ್ಲಿ ಶನಿವಾರ ಆರಂಭವಾದ ಸ್ಯಾಂಡಲ್ ವುಡ್ ಕ್ರಿಕೆಟ್ ಕಪ್ ನಲ್ಲಿ ಕಂಡು ಬಂದ ದೃಶ್ಯಗಳಿವು. ಆರ್ ಎಕ್ಸ್ ಸೂರಿ ಚಿತ್ರದ ನಾಯಕಿ ಆಕಾಂಕ್ಷ ಕ್ರಿಕೆಟ್ ಪ್ರೇಮಿಗಳನ್ನು ಹುರಿದುಂಬಿಸಿದರು.

ಮೊದಲ ಪಂದ್ಯದ ಫಲಿತಾಂಶ: ಥ್ರಿಲ್ಲರ್ ಮಂಜು ನೇತೃತ್ವದ ಥ್ರಿಲ್ಲರ್ ಬಾಯ್ಸ್ ಮತ್ತು ನಾಗಕಿರಣ್ ನೇತೃತ್ವದ ಚಾಲೆಂಜಿಂಗ್ ಸ್ಟಾರ್ಸ್ ನಡುವೆ ಮೊದಲ ಪಂದ್ಯ ನಡೆಯುತು. ಟಾಸ್ ಗೆದ್ದ ಥ್ರಿಲ್ಲರ್ ಮಂಜು ಎದುರಾಳಿ ತಂಡವನ್ನು ಬ್ಯಾಟಿಂಗ್ ಗೆ ಆಹ್ವಾನಿಸಿದರು.[ಸ್ಯಾಂಡಲ್‌ವುಡ್ ಕ್ರಿಕೆಟ್ ಕಪ್‌ಗೆ ಭರ್ಜರಿ ಚಾಲನೆ]

manju

ಮೊದಲು ಬ್ಯಾಟಿಂಗ್ ಮಾಡಿದ ಚಾಲೆಂಜಿಂಗ್ ಸ್ಟಾರ್ಸ್ ಶಬರೀಶ್ ಅವರ ಸ್ಫೋಟಕ 72 ರನ್ ನೆರವಿನಿಂದ 15 ಓವರ್ ಗೆ 158 ರನ್ ಗಳ ಬೃಹತ್ ಮೊತ್ತ ಕಲೆಹಾಕಿತು. ನಾಯಕ ಥ್ರಿಲ್ಲರ್ ಮಂಜು 5 ವಿಕೆಟ್ ಪಡೆದು ಬೌಲಿಂಗ್ ನಲ್ಲಿ ಮಿಂಚಿದರು.

ಚೇಸಿಂಗ್ ಆರಂಭಿಸಿದ ಮಂಜು ತಂಡ ಅಯ್ಯಪ್ಪ 17 ಮತ್ತು ಲೋಹಿತ್ 36 ರನ್ ನೆರವಿನಿಂದ 15 ಓವರ್ ಗಳಲ್ಲಿ 138 ರನ್ ಕಲೆ ಹಾಕಿ 20 ರನ್ ಗಳಿಂದ ಸೋಲು ಒಪ್ಪಿಕೊಂಡಿತು.

-
-
-
-
-
-
-
-
-
-
-
-
-
-
-
-
-
-
-
English summary
Sandalwood Cricket Cup has started on 28 May at Chikkaballapur. Sandalwood starts, artists, directors, fight masters participating in this event. Total 6 teams led by Thriller Manju Rakshit Setty, Yogish, Rajahuli Harsha, Akshay kuamr and Nagakiran fighting for trophy. Here is the full story of Sandalwood Cricket Cup.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada