Just In
Don't Miss!
- News
ದೆಹಲಿಯಲ್ಲಿ ಬರೋಬ್ಬರಿ 9 ತಿಂಗಳ ನಂತರ ನೂರರ ಕೆಳಗಿಳಿದ ಕೊರೊನಾ ಪ್ರಕರಣ
- Sports
ಸಿರಾಜ್ನ ದೊಡ್ಡ ಸಾಮರ್ಥ್ಯವೇ ಆತನ ಆತ್ಮವಿಶ್ವಾಸ: ಬೌಲಿಂಗ್ ಕೋಚ್ ಭರತ್ ಅರುಣ್
- Automobiles
2030ರಿಂದ ಕೇವಲ ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆಗೊಳಿಸಲಿದೆ ಈ ಕಾರು ತಯಾರಕ ಕಂಪನಿ
- Finance
Gold, Silver Rate: ಪ್ರಮುಖ ನಗರಗಳಲ್ಲಿ ಜ. 27ರ ಚಿನ್ನ, ಬೆಳ್ಳಿ ದರ
- Lifestyle
ಲಸಿಕೆ ಸಿಕ್ಕಿದರೂ 2021ರಲ್ಲಿ ಕೊರೊನಾವೈರಸ್ ಸಂಪೂರ್ಣ ನಾಶವಾಗಲ್ಲ:WHO ಎಚ್ಚರಿಕೆ
- Education
KSAT Recruitment 2021: 16 ಶೀಘ್ರಲಿಪಿಗಾರ ಮತ್ತು ಬೆರಳಚ್ಚುಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಬಾಲಭವನದಲ್ಲಿ ಚಿಣ್ಣರ ಜ್ಞಾನದಾಹ ಇಂಗಿಸುವ ಚಿತ್ರೋತ್ಸವ
ಈಗ ಬರುತ್ತಿರುವ ಸಿನಿಮಾಗಳಲ್ಲಿ ಸದಭಿರುಚಿಯ ಚಿತ್ರಗಳನ್ನು ಹುಡುಕುವುದೇ ಕಷ್ಟ, ಇನ್ನು ಮಕ್ಕಳ ಚಿತ್ರಗಳ ಮಾತು ದೂರವಾಯಿತು ಬಿಡಿ. ಇನ್ನು ಮಕ್ಕಳೂ ಅಷ್ಟೇ ಕಂಪ್ಯೂಟರ್ ಗೇಮ್ಸ್, ವಿಡಿಯೋ ಗೇಮ್ಸ್ ಎಂದು ಒಳ್ಳೆಯ ಚಿತ್ರಗಳನ್ನು ನೋಡುವುದನ್ನೂ ಮರೆತಿದ್ದಾರೆ.
ಈ ದಿಶೆಯಲ್ಲಿ ಬಾಲಭನವ ಸೊಸೈಟಿ ಮತ್ತು ಕರ್ನಾಟಕ ಚಲನಚಿತ್ರ ಅಕಾಡೆಮಿ ವಾರಾಂತ್ಯ ಚಿತ್ರಗಳ ಪ್ರದರ್ಶನಕ್ಕೆ ಮುಂದಾಗಿದೆ. ಇದೇ ಜನವರಿ 31ರಿಂದ ಮಕ್ಕಳ ಚಿತ್ರೋತ್ಸವನ್ನು ಕಬ್ಬನ್ ಪಾರ್ಕ್ ನ ಬಾಲಭವನದಲ್ಲಿ ಆಯೋಜಿಸಲಾಗಿದೆ. ಪ್ರತಿ ವಾರಾಂತ್ಯಗಳಲ್ಲಿ ಈ ಚಲನಚಿತ್ರ ಪ್ರದರ್ಶನವಿರುತ್ತದೆ. [ದೊಡ್ಡವರ ಕಣ್ಣುತೆರೆಸುವ ಮಕ್ಕಳ ಚಿತ್ರ]
ವಿವಿಧ ದೇಶಗಳ, ರಾಜ್ಯಗಳ ಚಲನಚಿತ್ರಗಳ ಮೂಲಕ ಮನರಂಜನೆ ಜೊತೆಗೆ ಜ್ಞಾನವನ್ನು ಹೆಚ್ಚಿಸುವ ಕೆಲಸಕ್ಕೆ ಕೈಹಚ್ಚಿದೆ ಬಾಲಭವನ. ಬ್ರೆಜಿಲ್, ಚೆಕ್ ರಿಪಬ್ಲಿಕ್, ಅಮೆರಿಕಾ, ಚೀನಾ, ಆಸ್ಟ್ರೇಲಿಯಾ ಹಾಗೂ ಭಾರತ ಸೇರಿದಂತೆ ವೈವಿಧ್ಯಮಯ ಚಿತ್ರಗಳು ಪ್ರದರ್ಶನಗೊಳ್ಳಲಿವೆ. ಇವೆಲ್ಲವೂ ಇಂಗ್ಲಿಷ್ ಸಬ್ ಟೈಟಲ್ ನಲ್ಲಿ ಮೂಡಿಬರಲಿವೆ.
ಈಗಾಗಲೆ ಹದಿನೈದು ವಾರಾಂತ್ಯಗಳಿಗೆ ಆಗುವಷ್ಟು ಚಿತ್ರಗಳನ್ನು ಸಂಗ್ರಹಿಸಲಾಗಿದ್ದು, ಶನಿವಾರ ಪ್ರದರ್ಶನಗೊಳ್ಳುವ ಚಿತ್ರಗಳನ್ನು ಭಾನುವಾರವೂ ಪ್ರದರ್ಶನಗೊಳಿಸಲಾಗುತ್ತದೆ. ಏಕೆಂದರೆ ಎಲ್ಲರಿಗೂ ಎಲ್ಲಾ ಚಿತ್ರಗಳನ್ನು ತಲುಪಿಸಬೇಕು ಎಂಬ ಉದ್ದೇಶ ಎನ್ನುತ್ತಾರೆ ಬಾಲಭವನ ಅಧ್ಯಕ್ಷೆ ಭಾವನಾ.
ಚಿಣ್ಣರ ಈ ಚಿತ್ರೋತ್ಸವದ ಮೂಲಕ ಮಕ್ಕಳಲ್ಲಿ ಶಿಸ್ತು, ಸಂಯಮ, ಸಾಹಸಮನೋಭಾವ, ಭಿನ್ನ ಸಂಸ್ಕೃತಿಗಳನ್ನು ಪರಿಚಯಿಸಿದಂತಾಗುತ್ತದೆ. ಈ ಚಿತ್ರಗಳು ಮಕ್ಕಳ ಜ್ಞಾನ ವಿಕಾಸಕ್ಕೂ ಸಹಕಾರಿಯಾಗಲಿವೆ ಎನ್ನುತ್ತಾರೆ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ರಾಜೇಂದ್ರ ಸಿಂಗ್ ಬಾಬು.
ಜನವರಿ 31ರಿಂದ ಸಂಜೆ 3 ಗಂಟೆಗೆ ಶನಿವಾರ ಮತ್ತು ಭಾನುವಾರ ಚಿತ್ರ ಪ್ರದರ್ಶನವಿರುತ್ತದೆ. ಮೂರು ವರ್ಷದಿಂದ ಎಲ್ಲಾ ವಯೋಮಾನದವರಿಗಾಗಿ ಟಿಕೆಟ್ ದರ ರು.20 ನಿಗದಿಪಡಿಸಲಾಗಿದೆ. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: 080-2286 1423. (ಏಜೆನ್ಸೀಸ್)