»   » ಚಿರು ಸರ್ಜಾ-ಮೇಘನಾ ನಿಶ್ಚಿತಾರ್ಥ ಕನ್ ಫರ್ಮ್ ಆಯ್ತು

ಚಿರು ಸರ್ಜಾ-ಮೇಘನಾ ನಿಶ್ಚಿತಾರ್ಥ ಕನ್ ಫರ್ಮ್ ಆಯ್ತು

Posted By:
Subscribe to Filmibeat Kannada

ಚಂದನವನದ ತಾರಾಜೋಡಿ ಚಿರಂಜೀವಿ ಸರ್ಜಾ ಮತ್ತು ನಟಿ ಮೇಘನಾ ರಾಜ್ ದಾಂಪತ್ಯಕ್ಕೆ ಕಾಲಿಡುತ್ತಿದ್ದಾರೆ ಎಂಬ ಸುದ್ದಿ ಕಳೆದ ಕೆಲ ತಿಂಗಳಿನಿಂದ ಮಾಧ್ಯಮಗಳಲ್ಲಿ ಚರ್ಚೆಯಾಗುತ್ತಲೇ ಇತ್ತು.

ಈ ಬಗ್ಗೆ ಎರಡು ಕುಟುಂಬದವರು ಯಾವುದೇ ಸ್ಪಷ್ಟನೆ ನೀಡಿರಲಿಲ್ಲ. ಹಾಗೂ ಯಾವುದೇ ಮಾಹಿತಿ ಕೂಡ ಬಿಟ್ಟುಕೊಟ್ಟಿರಲಿಲ್ಲ. ಆದ್ರೀಗ, ನಟ ಚಿರು ಸರ್ಜಾ ತಮ್ಮ ಮದುವೆ ಬಗ್ಗೆ ಅಧಿಕೃತವಾಗಿ ತಿಳಿಸಿದ್ದಾರೆ.

ಹುಟ್ಟುಹಬ್ಬ ಸಂಭ್ರಮದಲ್ಲಿದ್ದ ಯುವ ಸಾಮ್ರಾಟ್ ತಮ್ಮ ಮದುವೆ ಬಗ್ಗೆ ಮಾತನಾಡಿದ್ದು, ಮದುವೆ ಯಾವಾಗ ಎಂಬ ಮಾಹಿತಿ ಹಂಚಿಕೊಂಡಿದ್ದಾರೆ. ಅಷ್ಟಕ್ಕೂ, ಚಿರು ಸರ್ಜಾ ಮತ್ತು ಮೇಘನಾ ಜೋಡಿಯ ಎಂಗೇಜ್ ಮೆಂಟ್ ಯಾವಾಗ? ಮದುವೆ ಯಾವಾಗ ಮತ್ತು ಎಲ್ಲಿ? ಎಂಬ ವಿವರ ತಿಳಿಯಲು ಮುಂದೆ ಓದಿ......

22ಕ್ಕೆ ಎಂಗೇಜ್ ಮೆಂಟ್

ಈ ಮೊದಲೇ ಹೇಳಿದಾಗೆ ಅಕ್ಟೋಬರ್ 22ಕ್ಕೆ ಮೇಘನಾ ರಾಜ್ ಮತ್ತು ಚಿರಂಜೀವಿ ಸರ್ಜಾ ಅವರ ನಿಶ್ಚಿತಾರ್ಥ ನಡೆಯಲಿದ್ದು, ಕೇವಲ ಕುಟುಂಬಸ್ಥರು ಮತ್ತು ಕೆಲವೇ ಕೆಲವು ಸ್ನೇಹಿತರು ಮಾತ್ರ ಭಾಗಿಯಾಗುತ್ತಿದ್ದಾರೆ.

ವರ್ಷಾಂತ್ಯಕ್ಕೆ ಚಿರು ಸರ್ಜಾ-ಮೇಘನಾ ರಾಜ್ ಮದುವೆ ಅಂತೆ.!

ಡಿಸೆಂಬರ್ ನಲ್ಲಿ ಮದುವೆ

ಈ ತಿಂಗಳಲ್ಲಿ ಎಂಗೇಜ್ ಮೆಂಟ್ ಮಾಡಿಕೊಳ್ಳಲಿರುವ ಜೋಡಿಯ ವಿವಾಹ ಯಾವಾಗ ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ. ಮೂಲಗಳ ಪ್ರಕಾರ ಡಿಸೆಂಬರ್ 6 ರಂದು ಬೆಂಗಳೂರಿನಲ್ಲಿಯೇ ಮದುವೆ ನಡೆಯಲಿದೆಯಂತೆ.

ಚಿರು ಬರ್ತಡೇ ಗೆ ವಿಶ್ ಮಾಡಿದ ಮೇಘನಾ

ಇನ್ನು ತಮ್ಮ ಭಾವಿ ಪತಿ ಚಿರಂಜೀವಿ ಸರ್ಜಾ ಅವರ ಹುಟ್ಟುಹಬ್ಬಕ್ಕೆ ನಟಿ ಮೇಘನಾ ರಾಜ್ ಟ್ವಿಟ್ಟರ್ ಮೂಲಕ ಶುಭ ಕೋರಿದ್ದಾರೆ. ಇದಕ್ಕೆ ಚಿರು ಕೂಡ ಥ್ಯಾಂಕ್ಸ್ ಹೇಳಿದ್ದಾರೆ.

'ಸಂಹಾರ' ಟ್ರೈಲರ್ ರಿಲೀಸ್

ಚಿರು ಸರ್ಜಾ ಹುಟ್ಟುಹಬ್ಬದ ವಿಶೇಷವಾಗಿ 'ಸಂಹಾರ' ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಗುರುದೇಶ ಪಾಂಡೆ ಈ ಚಿತ್ರವನ್ನ ನಿರ್ದೇಶನ ಮಾಡುತ್ತಿದ್ದು, ಹರಿಪ್ರಿಯಾ ಮತ್ತು ಕಾವ್ಯ ಶೆಟ್ಟಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ದರ್ಶನ್ ತೆಗೆದುಕೊಂಡಿದ್ದ 'ಚಾಲೆಂಜ್' ಈಗ ಚಿರಂಜೀವಿ ಸರ್ಜಾ ಮುಂದಿದೆ!

English summary
Kannada Actor Chiranjeevi Sarja and Meghana Raj to get engaged on October 22nd. The marriage ceremony will be held in December.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X